ತೆಲಂಗಾಣ(ಏ.10): ಕಾಮರೆಡ್ಡಿ ಮತ್ತು ಕುಮುರಂ ಭೀಮ್ ಆಸಿಫಾಬಾದ್ ಜಿಲ್ಲೆಗಳಲ್ಲಿ ಎರಡು ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ-NMC) ಅನುಮೋದನೆ ನೀಡಿದೆ. ಈ ವೈದ್ಯಕೀಯ ಕಾಲೇಜುಗಳು (Medical Colleges) ತೆಲಂಗಾಣದ ನಿಜವಾದ ಸಾರವಾಗಿದೆ ಎಂದು ಈ ಹೊಸ ಕ್ರಮವನ್ನು ಶ್ಲಾಘಿಸುತ್ತ ರಾಜ್ಯದ ಆರೋಗ್ಯ ಸಚಿವ ಟಿ ಹರೀಶ್ ರಾವ್ (Health Minister T Harish Rao) ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಎರಡು ಹೊಸ ವೈದ್ಯಕೀಯ ಕಾಲೇಜುಗಳು
ರಾಜ್ಯ ಆರೋಗ್ಯ ಸಚಿವ ಟಿ ಹರೀಶ್ ರಾವ್ ಅವರು ತಮ್ಮ ಅಧಿಕೃತ ಖಾತೆಯಿಂದ ಟ್ವೀಟ್ ಮೂಲಕ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಅನುಮೋದಿತ ಕಾಲೇಜು 100 ಎಂಬಿಬಿಎಸ್ ಸೀಟುಗಳನ್ನು ಹೊಂದಿದೆ, ಏಳು ವೈದ್ಯಕೀಯ ಕಾಲೇಜುಗಳು ತೆಲಂಗಾಣದಲ್ಲಿ ವಿವಿಧ ಹಂತಗಳಲ್ಲಿ ಪರವಾನಗಿ ಪಡೆದಿವೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
In a true essence of #ArogyaTelangana, now healthcare facilities will further strengthen in rural areas, Two more medical colleges in #Telangana, Kamareddy & Komaram Bheem Asifabad districts got permission with 100 MBBS seats in each college
This is a significant step towards… pic.twitter.com/VLpyeo2VLE
— Harish Rao Thanneeru (@BRSHarish) April 8, 2023
ಪ್ರತಿಯೊಂದೂ 100 ಎಂಬಿಬಿಎಸ್ ಸೀಟುಗಳನ್ನು ಹೊಂದಿದೆ. ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಶಾಲೆಯನ್ನು ಹೊಂದಬೇಕೆಂಬ ಸಿಎಂ ಶ್ರೀ #ಕೆಸಿಆರ್ ಅವರ ದೂರದೃಷ್ಟಿಯನ್ನು ಸಾಕಾರಗೊಳಿಸುವತ್ತ ಪ್ರಮುಖ ಹೆಜ್ಜೆ ಇದು. ಏಳು ವೈದ್ಯಕೀಯ ಕಾಲೇಜುಗಳು ತೆಲಂಗಾಣದಲ್ಲಿ ವಿವಿಧ ಹಂತಗಳಲ್ಲಿ ಪರವಾನಗಿ ಪಡೆದಿವೆಠ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಟಿ ಹರೀಶ್ ರಾವ್ ಅವರ ಟ್ವೀಟ್ ಹೆಚ್ಚಿನ ಲೈಕ್‌ಗಳು ಹಾಗೂ ಕಾಮೆಂಟ್‌ಗಳನ್ನು ಗಳಿಸಿದೆ.
ತೆಲಂಗಾಣ ಸರ್ಕಾರವು 2023-24ರ ಶೈಕ್ಷಣಿಕ ಅವಧಿಗೆ ಒಂಬತ್ತು ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲು ಕೆಲಸ ಮಾಡುತ್ತಿದೆ. ಈ ಪೈಕಿ ಎರಡು ಕಾಲೇಜುಗಳಿಗೆ ಎನ್‌ಎಂಸಿ ಅನುಮೋದನೆ ನೀಡಿದೆ.
ಉಳಿದ ಏಳು ವೈದ್ಯಕೀಯ ಸಂಸ್ಥೆಗಳನ್ನು ರಾಜಣ್ಣ ಸಿರ್ಸಿಲ್ಲಾ, ವಿಕಾರಾಬಾದ್, ಖಮ್ಮಂ, ಕರೀಂನಗರ, ಜಯಶಂಕರ್ ಭೂಪಾಲಪಲ್ಲಿ, ಜನಾಂವ್ ಮತ್ತು ನಿರ್ಮಲ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಟಿ ಹರೀಶ್ ರಾವ್ ತಿಳಿಸಿದ್ದಾರೆ.
2023-2024ಕ್ಕೆ ವರ್ಷಕ್ಕೆ 100 ಎಂಬಿಬಿಎಸ್ ಸೀಟುಗಳ ಪ್ರವೇಶದೊಂದಿಗೆ ಕಾಮರೆಡ್ಡಿ ಜಿಲ್ಲೆಯಲ್ಲಿ ಹೊಸ ವೈದ್ಯಕೀಯ ಶಾಲೆಯನ್ನು ತೆರೆಯಲು ಅರ್ಜಿಗೆ ಸಂಬಂಧಿಸಿದಂತೆ, ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಬೋರ್ಡ್ (ಎಮ್‌ಎಆರ್‌ಬಿ) ಸೂಚಿಸಿದ ಎಲ್ಲಾ ನ್ಯೂನತೆಗಳ ಆಧಾರದ ಮೇಲೆ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ. 3 ತಿಂಗಳೊಳಗೆ ತಿದ್ದುಪಡಿಯನ್ನು ಪೂರ್ಣಗೊಳಿಸಲಾಗುವುದು ಎಂದು ಟಿ ಹರೀಶ್ ರಾವ್ ಅವರು ತಿಳಿಸಿದ್ದಾರೆ.
ಇವುಗಳಲ್ಲದೆ, ಆಸಿಫಾಬಾದ್, ಭೂಪಾಲಪಲ್ಲಿ, ವಿಕಾರಾಬಾದ್, ಸಿರಿಸಿಲ್ಲಾ, ಜಾಂಗೋನ್, ಕಾಮರೆಡ್ಡಿ, ಕರೀಂನಗರ ಮತ್ತು ಖಮ್ಮಂ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ 2022 ರಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಮತ್ತು ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹರೀಶ್ ಹೇಳಿದರು.
"ಹೊಸದಾಗಿ ಮಂಜೂರಾದ ಕಾಲೇಜುಗಳಲ್ಲಿ, ನಾಲ್ಕು ವೈದ್ಯಕೀಯ ಕಾಲೇಜುಗಳು ಮಹೆಬೂಬ್‌ನಗರ, ಸಿದ್ದಿಪೇಟೆ, ಸೂರ್ಯಪೇಟೆ ಮತ್ತು ನಲ್ಗೊಂಡದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದು, ಪ್ರತಿ ಕಾಲೇಜಿನಲ್ಲಿ 150 ಎಂಬಿಬಿಎಸ್ ಸೀಟುಗಳಿವೆ.
ಇದರೊಂದಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳು 700 ರಿಂದ 1,640 ಕ್ಕೆ ಮತ್ತು ಪಿಜಿ ವೈದ್ಯಕೀಯ ಸೀಟುಗಳನ್ನು 934 ಕ್ಕೆ ಹೆಚ್ಚಿಸಲಾಗಿದೆ ಎಂದು ಹರೀಶ್ ತಿಳಿಸಿದ್ದಾರೆ.
2023ರ ವೇಳೆಗೆ ಮೇಡಕ್, ಮೇಡ್ಚಲ್, ರಂಗಾರೆಡ್ಡಿ, ಮುಲುಗು, ವಾರಂಗಲ್, ನಾರಾಯಣಪೇಟೆ, ಗದ್ವಾಲ್ ಮತ್ತು ಯಾದಾದ್ರಿ ಭೋಂಗಿರ್‌ನಲ್ಲಿ ಎಂಟು ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು, ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ 33 ಜಿಲ್ಲೆಗಳಲ್ಲಿ ತಲಾ ಒಂದು ವೈದ್ಯಕೀಯ ಕಾಲೇಜು ಅನ್ನು ಸ್ಥಾಪಿಸಲಾಗುವುದು ಎಂದು ಹರೀಶ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ