ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ (Exam) ಮುಗಿಸಿ ಫಲಿತಾಂಶಕ್ಕಾಗಿ ಕಾದಿದ್ದರು. ಇದೀಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಮುಗಿದ ತಕ್ಷಣವೇ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವನ್ನು (Result) ಬಿಡುಗಡೆ ಮಾಡಲಾಗಿದೆ. ಕಾತುರದಿಂದ ಕಾದಿದ್ದ ಫಲಿತಾಂಶ ಇಂದೇ ಬಿಡುಗಡೆಯಾಗಿದೆ. ಆದಷ್ಟು ಬೇಗ ನಿಮ್ಮ ಫಲಿತಾಂಶವನ್ನು ಪರಿಶೀಲಿಸಲು ನಾವು ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಮೇಲೆ ಕ್ಲಿಕ್ (Click) ಮಾಡಿ. ಇನ್ನೂ ಹೆಚ್ಚಿನ ವಿವರಕ್ಕಾಗಿ ಮುಂದೆ ಓದಿ.
2022-23ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ನೀವೀಗ ನಿಮ್ಮ ಫಲಿತಾಂಶ ಪರಿಶೀಲಿಸಲು https://result.dkpucpa.com/ ಈ ಲಿಂಕ್ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ತಕ್ಷಣ ನಿಮಗೆ ವೆಬ್ಸಟೈಟ್ ಓಪನ್ ಆಗುತ್ತದೆ. ಓಪನ್ ಆದ ನಂತರ ಅಲ್ಲಿ ನಿಮ್ಮ ಹೆಸರು ಹಾಲ್ಟಿಕೇಟ್ ನಂಬರ್ ಮತ್ತು ನಿಮ್ಮ ಜನ್ಮ ದಿನಾಂಕವನ್ನು ಕೇಳಲಾಗುತ್ತದೆ. ಅದನ್ನು ನೀಡುತ್ತಿದ್ದಂತೆ ನಿಮ್ಮ ಫಲಿತಾಂಶ ಲಭಿಸುತ್ತದೆ.
ಇದನ್ನೂ ಓದಿ: Online Portal: ಶಾಲಾ ಮಕ್ಕಳ ಅಡ್ಮಿಶನ್ಗಾಗಿ ಹೊಸ ಆನ್ಲೈನ್ ಪೋರ್ಟಲ್, ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್
ಈ ಮೇಲೆ ನೀಡಿದ ಹಂತಗಳನ್ನು ಪಾಲಿಸಿದರೆ ನೀವು ಬಹುಬೇಗ ನಿಮ್ಮ ಫಲಿತಾಂಶವನ್ನು ಹುಡುಕಬಹುದು. ಇನ್ನೂ ಸರಳೀಕರಿಸಿ ಹೇಳುವುದಾದರೆ ಕರ್ನಾಟಕ 1ನೇ ಪಿಯುಸಿ ಫಲಿತಾಂಶ 2023 ಅನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಪೋರ್ಟಲ್‌ನಲ್ಲಿ 'ನೋಂದಣಿ ಸಂಖ್ಯೆ' ಮತ್ತು 'ಹುಟ್ಟಿದ ದಿನಾಂಕ' ಹಾಕಿ ಲಾಗ್ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಚೆಕ್ ಮಾಡಬಹುದು. ಆದರೆ ಪರೀಕ್ಷಾ ಫಲಿತಾಂಶವು ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಿಗೆ ಮಾತ್ರ ಎಂಬುದನ್ನು ವಿದ್ಯಾರ್ಥಿಗಳು ಗಮನಿಸಬೇಕು.
ಈ ಹಿಂದೆ ಮೇ ತಿಂಗಳಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ ಮಾಡಲಾಗುವುದು ಎಂದು ತಿಳಿಸಲಾಗುತ್ತು. ಆದರೆ ತುಂಬಾ ಮುಂಚಿತವಾಗಿ ಫಲಿತಾಂಶ ಹೊರಬಿದ್ದಿದೆ. ಮೇ ತಿಂಗಳ ಮೊದಲ ವಾರದಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು ಎಂದಿರುವ ಶಿಕ್ಷಣ ಸಚಿವರು ತಿಳಿಸಿದ್ದರು ಆದರೆ ಯಾವುದೇ ನಿಖರ ಮಾಹಿತಿ ನೀಡಿರಲಿಲ್ಲ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮೊದಲೇ ಮಾಡಿಕೊಂಡು ಬೇಗ ಫಲಿತಾಂಶ ನೀಡಿದೆ.
ಒಟ್ಟು ಅಂಕಗಳು ಹಾಗೂ ಫಲಿತಾಂಶ ಇಲ್ಲಿ ನಿಮಗೆ ಲಭ್ಯವಿದೆ. ಅಧಿಕೃತ ಜಾಲತಾಣದಲ್ಲಿ ಅಧಿಕೃತ ಮಾಹಿತಿ ನೀಡುವ ಮೂಲಕ ಸುಲಭವಾಗಿ ನಿಮ್ಮ ಫಲಿತಾಂಶವನ್ನು ನೀವೇ ಪರಿಶೀಲಿಸಬಹುದು.
ಇಂದಿನಿಂದ ಆರಂಭವಾಗಿದೆ SSLC ಪರೀಕ್ಷೆ
ದ್ವಿತೀಯ ಪಿಯುಸಿ ಪರೀಕ್ಷೆ ಮುಕ್ತಾಯದ ನಂತರ ಇದೀಗ ಇಂದಿನಿಂದ SSLC ಪರೀಕ್ಷೆ ಆರಂಭವಾಗಿದೆ. ಥಮ ಭಾಷೆ- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು , ಉರ್ದು, ಇಂಗ್ಲಿಷ್, (NCERT), ಸಂಸ್ಕೃತ ಪರೀಕ್ಷೆಗಳು ಇಂದು ನಡೆಯಲಿದೆ. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ವಿವರ ಹೀಗಿದೆ. -ಶಾಲಾ ವಿದ್ಯಾರ್ಥಿಗಳು 7,94,611, ಪುನರಾವರ್ತಿತ ವಿದ್ಯಾರ್ಥಿಗಳು, 20,750, ಖಾಸಗಿ ಅಭ್ಯರ್ಥಿಗಳು 18,272, ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು 8,859. 2010 ಕ್ಕಿಂತ ಹಿಂದಿನ ಸಾಲಿನ ಪುನರಾವರ್ತಿತ ಅಭ್ಯರ್ಥಿಗಳು 301 ಜನ ಇದ್ದಾರೆ ಅವರಿಗೂ ಸಹ ಈ ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. 2010 ಕ್ಕಿಂತ ಹಿಂದಿನ ಸಾಲಿನ ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು 15ಜನ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಮೊಬೈಲ್ಫೋನ್, ಸ್ಮಾರ್ಟ್ವಾಚ್, ಇಯರ್ಫೋನ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ನಿಷೇಧ ಮಾಡಲಾಗಿದೆ. ಯಾರೂ ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ