• ಹೋಂ
  • »
  • ನ್ಯೂಸ್
  • »
  • Jobs
  • »
  • Education Scam: ಕರ್ನಾಟಕದಲ್ಲಿ 1316 ಅನಧಿಕೃತ ಶಾಲೆಗಳು, ಕ್ರಮ ಕೈಗೊಳ್ಳಲು ಕೇಳಿಬಂತು ಖಡಕ್ ಆಗ್ರಹ

Education Scam: ಕರ್ನಾಟಕದಲ್ಲಿ 1316 ಅನಧಿಕೃತ ಶಾಲೆಗಳು, ಕ್ರಮ ಕೈಗೊಳ್ಳಲು ಕೇಳಿಬಂತು ಖಡಕ್ ಆಗ್ರಹ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಈ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. 1316 ಅನಧಿಕೃತ ಶಾಲೆಗಳು ರಾಜ್ಯದಲ್ಲಿವೆ ಎಂದು ಶಿಕ್ಷಣ ಇಲಾಖೆ ಗುರುತಿಸಿದೆ. ಇಲಾಖೆಯಲ್ಲಿನ ಭ್ರಷ್ಟ ಅಧಿಕಾರಿಗಳ ಕುರಿತು ದಾಖಲೆ ಸಮೇತ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದ ರುಪ್ಸಾ ನಂತರ ಸಾರ್ವಜನಿಕ ಶಿಕ್ಷಣ ಇಲಾಖೆ ‌ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಅನಧಿಕೃತ ಶಾಲೆಗಳನ್ನು ಗುರುತಿಸಲಾಗಿದೆ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • New Delhi, India
  • Share this:

ಬೆಂಗಳೂರು: ಪಠ್ಯಕ್ರಮಕ್ಕೆ ಪರವಾನಿಗೆ ಇಲ್ಲದೆ ಎಷ್ಟೊ ಶಾಲೆಗೆ ಬೇರೆ ಪಠ್ಯಕ್ರಮವನ್ನು ವಿದ್ಯಾರ್ಥಿಗಳಿಗೆ (Students) ಕಲಿಸುತ್ತಿದ್ದರು ಎಂಬುದು ಈ ಹಿಂದೇ ವರದಿಯಾಗಿತ್ತು. ಬೆಂಗಳೂರು ಒಂದರಲ್ಲೇ 500ಕ್ಕೂ ಅಧಿಕ ಶಾಲೆಗಳು ಈ ರೀತಿ ಅನಧಿಕೃತ ಪಠ್ಯಕ್ರಮ ಅನುಸರಿಸುತ್ತಿದ್ದವು ಎಂದು ನೋಟಿಸ್ (Notice)​ ಜಾರಿ ಮಾಡಲಾಗಿತ್ತು. ಅನಧಿಕೃತ ಶಾಲೆಗಳ ಮೇಲಿನ ಕ್ರಮಕ್ಕೆ ಇದೀಗ  ರುಪ್ಸಾ (RUPSA) ಸ್ವಾಗತ ಕೋರಿದೆ ಈ ಸಾವಿರಾರು ಅನಧಿಕೃತ ಶಾಲೆಗಳ (School) ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿರುವ ಕುರಿತು ಧನಾತ್ಮಕ ಪ್ರತಿಕ್ರಿಯೆ ನೀಡಿದೆ. 


ಸಾರ್ವಜನಿಕ ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ಪಟ್ಟಿ ಮಾಡಿ ಪ್ರಕಟ‌ ಮಾಡಿದೆ. ಈ ಪಟ್ಟಿಯಲ್ಲಿ ಪ್ರತಿಯೊಂದು ಶಾಲೆಯ ಮಾಹಿತಿ ಕೂಡಾ ಲಭ್ಯವಿದೆ. ಪಾರದರ್ಶಕತೆ ಕಾಪಾಡಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಕಲಿಸಬೇಕಿದ್ದ ಶಾಲೆಗಳ ಮೋಸವನ್ನು ಬೆಳಕಿಗೆ ತಂದಿದೆ.  ರಾಜ್ಯದಲ್ಲಿ ಸಾವಿರಾರು ಅನಧಿಕೃತ ಶಾಲೆಗಳು ನಡೆಯಲು ಅವಕಾಶ‌ ಮಾಡಿಕೊಟ್ಟ ಅಧಿಕಾರಿಗಳ ಮೇಲೆ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.


ಇದನ್ನೂ ಓದಿ: School Holiday: ಮಕ್ಕಳ ಆರೋಗ್ಯ ಕಾಪಾಡೋಕೆ 3 ದಿನ ಶಾಲೆಗೆ ರಜೆ ಘೋಷಣೆ


ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಈ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. 1316 ಅನಧಿಕೃತ ಶಾಲೆಗಳು ರಾಜ್ಯದಲ್ಲಿವೆ ಎಂದು ಶಿಕ್ಷಣ ಇಲಾಖೆ ಗುರುತಿಸಿದೆ. ಇಲಾಖೆಯಲ್ಲಿನ ಭ್ರಷ್ಟ ಅಧಿಕಾರಿಗಳ ಕುರಿತು ದಾಖಲೆ ಸಮೇತ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದ ರುಪ್ಸಾ ನಂತರ ಸಾರ್ವಜನಿಕ ಶಿಕ್ಷಣ ಇಲಾಖೆ ‌ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಅನಧಿಕೃತ ಶಾಲೆಗಳನ್ನು ಗುರುತಿಸಲಾಗಿದೆ.



ಆದರೆ ಕಳೆದ ಹತ್ತಾರು ವರ್ಷಗಳಿಂದ ಇಂತಹ ಶಾಲೆಗಳು ಬಹಿರಂಗವಾಗಿ ಪೋಷಕರು ಮತ್ತು ಮಕ್ಕಳಿಗೆ ಮೋಸ ಮಾಡುತ್ತಿದ್ದದು ಬೇಸರ ತಂದಿದೆ. ಅಂದಿನ ಹಾಗೂ ಈಗ ಜವಾಬ್ದಾರಿಯಲ್ಲಿರುವ ಅಧಿಕಾರಿಗಳು ಈ ಅಪರಾಧದ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ. ಈ ಕುರಿತು ತನಿಖೆಗೆ ಒಳಪಡಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಲಾಗಿದೆ.


ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮುಖ್ಯಮಂತ್ರಿ ಗಳಿಗೆ ಪತ್ರ ಬರೆದಿದ್ದಾರೆ


ಹಾಗೂ ಅವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ತಕ್ಷಣ ತೆಗೆದುಕೊಳ್ಳಬೇಕೆಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮುಖ್ಯಮಂತ್ರಿ ಗಳಿಗೆ ಪತ್ರ ಬರೆದಿದ್ದಾರೆ. ಆಲ್ಲದೆ ಮಾಧ್ಯಮಗಳಲ್ಲಿ ಬಂದಿರುವ ಅನಧಿಕೃತ ಶಾಲೆಗಳ ಸಂಖ್ಯೆಯು ಅತ್ಯಂತ ಕಡಿಮೆ ಇದೆಬೆಂಗಳೂರಿನಲ್ಲೇ ನೂರಾರು ಸಿಬಿಎಸ್ಇ ಹಾಗೂ ಐಸಿಎಸ್ಇ ಹೆಸರಿನಲ್ಲಿ ಹಾಗೂ ಯಾವುದೇ ಅನುಮತಿ ಇಲ್ಲದೆ ಅಂತರಾಷ್ಟ್ರೀಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಖಾಸಗಿ ಶಾಲೆಗಳು ಬಹಿರಂಗವಾಗಿ ಶಾಲೆ ನಡೆಸುತ್ತಿವೆ ಎಂದು ಹೇಳಿದ್ದಾರೆ.


ಖಾಸಗಿ ಶಾಲೆಗಳು ಲಕ್ಷಾಂತರ ಹಣವನ್ನು ಶುಲ್ಕದ ರೂಪದಲ್ಲಿ ಪಡೆಯುತ್ತಿವೆ


ಇಂಥ ಖಾಸಗಿ ಶಾಲೆಗಳು ಲಕ್ಷಾಂತರ ಹಣವನ್ನು ಶುಲ್ಕದ ರೂಪದಲ್ಲಿ ಪಡೆಯುತ್ತಿವೆ. ಅವುಗಳ ಮಾಲೀಕರು ಈಗಿರುವ ಮಂತ್ರಿಗಳು ಹಾಗೂ ಶಾಸಕರು ಇದ್ದಾರೆ ಅಂತಹ ಶಾಲೆಗಳ ಮೇಲೆ ಯಾವುದೇ ಕ್ರಮವನ್ನ ಜರುಗಿಸದೆ ಇರುವುದು ದುರಾದೃಷ್ಟಕರ ಎಂದು ಹೇಳಿದ್ದಾರೆ. ತಕ್ಷಣ ಇಂತಹ ಶಾಲೆಗಳ ಮೇಲೆ ಕಾನೂನು ಕ್ರಮ ಜರುಗಿಸದೆ ಇದ್ದರೆ, ಅಕ್ಷಮ್ಯ ಅಪರಾಧವಾಗುತ್ತದೆ. ಈ ಶಾಲೆಗಳು ಈ ನೆಲದ ಕಾನೂನನ್ನು ಉಲ್ಲಂಘಿಸುವುದಲ್ಲದೆ, ಅಮಾಯಕ ಪೋಷಕರನ್ನು ಹಾಗೂ ಮಕ್ಕಳನ್ನು ವಂಚಿಸುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ಅಂತಹ ಶಾಲೆಗಳ ಮೇಲೆ ಹಾಗೂ ಕಾರಣರಾದ ಅಧಿಕಾರಿಗಳ ಮೇಲೆ ತಕ್ಷಣ ಕ್ರಮ ಜರುಗಿಸಬೇಕೆಂದು ಪತ್ರದ ಮೂಲಕ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಒತ್ತಾಯಿಸಿದ್ದಾರೆ. ಮುಂದಿನ ದಿನದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

First published: