• Home
 • »
 • News
 • »
 • jobs
 • »
 • Davangere: ಶಾಲಾ ಆವರಣದಲ್ಲಿ ಕುಡುಕರ ಪಾರ್ಟಿ, ಬಾರ್​ ಆಗಿ ಬದಲಾಯ್ತು ಸ್ಕೂಲ್​ ಗ್ರೌಂಡ್​

Davangere: ಶಾಲಾ ಆವರಣದಲ್ಲಿ ಕುಡುಕರ ಪಾರ್ಟಿ, ಬಾರ್​ ಆಗಿ ಬದಲಾಯ್ತು ಸ್ಕೂಲ್​ ಗ್ರೌಂಡ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳಗಾದರೆ ಶಾಲಾ ಮಕ್ಕಳು ತರಗತಿಗೆ ಬರುತ್ತಾರೆ. ಆಗ ಆ ಮಕ್ಕಳು ಆವರಣದಲ್ಲಿರುವ ಮದ್ಯ ಬಾಟಲಿಗಳನ್ನು ಗಮನಿಸುತ್ತಾರೆ. ಅವರಲ್ಲಿಯೂ ಈ ರೀತಿಯ ವಿಷಯದ ಬಗ್ಗೆ ಆಸಕ್ತಿ ಮೂಡುತ್ತದೆ. ಅದರ ವಾಸನೆ ಹಾಗೂ ಬಣ್ಣಗಳ ಬಗ್ಗೆ ಮಕ್ಕಳು ಚರ್ಚೆ ಮಾಡುತ್ತಾರೆ. ಅಷ್ಟೇ ಅಲ್ಲ ಮಕ್ಕಳು ಶಾಲಾ ಆವರಣದಲ್ಲಿ ಆಟವಾಡುವಾಗ ಅದೇ ಬಾಟಲುಗಳನ್ನು ಮುಟ್ಟುತ್ತಾರೆ.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Karnataka, India
 • Share this:

ಶಾಲಾ (School) ಆವರಣವೋ ಇಲ್ಲ ಕುಡುಕರ ಬಾರೋ ಎಂದು ತಿಳಿಯದ ಸ್ಥಿತಿ ದಾವಣಗೆರೆಯ ಶಾಲಾ ಆವರಣದಲ್ಲಿ (Ground) ಕಂಡುಬಂದಿದೆ. ದಿನನಿತ್ಯ ಕುಡುಕರು ಪಾರ್ಟಿ ಮಾಡುವ ಜಾಗವಾಗಿ ಬದಲಾಗಿದೆ ವಿದ್ಯಾದೇಗುಲದ ಹೊರಾಂಗಣ.ಒಂದೆರಡು ಬಾಟಲಿಗಳಲ್ಲಾ ಅಥವಾ ನೂರಾರು ಬಾಟಲಿಗಳೂ (Bottle) ಅಲ್ಲ 1200ಕ್ಕೂ ಅಧಿಕ ಮದ್ಯದ ಬಾಟಲಿಗಳು ಸಿಕ್ಕಿವೆ. ದಾವಣಗೆರೆ ತಾಲ್ಲೂಕಿನ ಜರೇಕಟ್ಟೆ ಗ್ರಾಮದ ಸರ್ಕಾರಿ ಅನುದಾನಿತ ಶ್ರೀ ಆಂಜನೇಯ ಸ್ವಾಮೀ ವಸತಿ  ಪ್ರೌಢ ಶಾಲೆಯ (High School) ಆವರಣದಲ್ಲಿ  ಈ ಘಟನೆ ನಡೆದಿದೆ. 


ರಾತ್ರಿ ಆಗುತ್ತಿದ್ದಂತೆ ಕುಡುಕರೆಲ್ಲಾ ಕೂತು ಕುಡಿಯೋಕೆ ಆರಂಭಿಸಿಬಿಡ್ತಾರೆ. ತಾವು ತಂದ ಮಧ್ಯದ ಬಾಟಲಿಗಳನ್ನು ಕಂಠ ಪೂರ್ತಿಯಾಗಿ ಕುಡಿದು, ಅದೇ ಅಮಲಿನಲ್ಲಿ ತೇಲುತ್ತಾ ಅಸಭ್ಯ ವರ್ತನೆ ತೋರುತ್ತಾರೆ. ಇದರೊಟ್ಟಿಗೆ ಪ್ರತಿದಿನವೂ ಶಾಲೆಯ ಆವರಣವನ್ನು ಹಾಳು ಮಾಡುತ್ತಾರೆ. ಹೇಗೆಂದರೆ ಕುಡಿದ ಮಧ್ಯದ ಬಾಟಲಿಗಳನ್ನು ಅಲ್ಲಲ್ಲೇ ಬಿಸಾಡಿ ಹೋಗುತ್ತಾರೆ. ಪ್ರತಿದಿನವೂ ಹಲವು ಮಧ್ಯದ ಬಾಟಲಿಗಳು ಅಲ್ಲೇ ಬಿದ್ದುಕೊಂಡಿರುತ್ತದೆ.


ಶಾಲಾ ಆವರಣವೋ ಇಲ್ಲ ಮದ್ಯದಂಗಡಿಯೋ?


ಶಾಲಾ ಆವರಣದ ಸಮೀಪ ಮದ್ಯ ಅಥವಾ ತಂಬಾಕು ಅಂಗಡಿಗಳನ್ನೂ ಸಹ ನಿಷೇಧಿಸಲಾಗಿದೆ. ಆದರೂ ಸಹ ಶಾಲೆಯ ಒಳಗೇ ಬಂದು ಕುಡುಕರು ಈ ರೀತಿಯ ದುರ್ವರ್ತನೆ ಮಾಡುತ್ತಿದ್ದಾರೆ. ಶಾಲೆಯ ಶಿಕ್ಷಕರು ಅಥವಾ ಇನ್ನು ಕೆಲ ಸಿಬ್ಬಂಧಿಗಳನ್ನು ಅವರನ್ನು ಪತ್ತೆ ಹಚ್ಚಿ ಹೀಗೆ ಮಾಡಬೇಡಿ ಎಂದು ಹೇಳಿದರೆ ಅವರ ಮೇಲೆ ಹಲ್ಲೆ ಮಾಡಲು ಬರುತ್ತಾರಂತೆ.


ಇದನ್ನೂ ಓದಿ: JEE, CUET, NEET ಎಲ್ಲಾ ಪದವಿ ಪ್ರವೇಶ ಪರೀಕ್ಷೆಗಳ ಸಂಪೂರ್ಣ ಡೀಟೇಲ್ಸ್​ ಇದೊಂದೇ ಲಿಂಕ್​ನಲ್ಲಿ ಲಭ್ಯ


ಬೆಳಗಾದರೆ ಶಾಲಾ ಮಕ್ಕಳು ತರಗತಿಗೆ ಬರುತ್ತಾರೆ. ಆಗ ಆ ಮಕ್ಕಳು ಆವರಣದಲ್ಲಿರುವ ಮದ್ಯ ಬಾಟಲಿಗಳನ್ನು ಗಮನಿಸುತ್ತಾರೆ. ಅವರಲ್ಲಿಯೂ ಈ ರೀತಿಯ ವಿಷಯದ ಬಗ್ಗೆ ಆಸಕ್ತಿ ಮೂಡುತ್ತದೆ. ಅದರ ವಾಸನೆ ಹಾಗೂ ಬಣ್ಣಗಳ ಬಗ್ಗೆ ಮಕ್ಕಳು ಚರ್ಚೆ ಮಾಡುತ್ತಾರೆ. ಅಷ್ಟೇ ಅಲ್ಲ ಮಕ್ಕಳು ಶಾಲಾ ಆವರಣದಲ್ಲಿ ಆಟವಾಡುವಾಗ ಅದೇ ಬಾಟಲುಗಳನ್ನು ಮುಟ್ಟುತ್ತಾರೆ, ಕೆಲವು ಮಕ್ಕಳಿಗೆ ಗಾಜಿನ ಚೂರುಗಳು ತಗುಲಿ ಗಾಯ ಕೂಡ ಆಗುತ್ತದೆ ಎಂದು ಅಲ್ಲಿನವರು ಹೇಳುತ್ತಾರೆ.


ಮಕ್ಕಳು ಆಟ ಆಡುವಾಗ ಕಾಲಿಗೆ ಚುಚ್ಚುವ ಗಾಜಿನ ಬಾಟಲಿ


ಪಾಲಕರಿಗೂ ಸಹ ತಮ್ಮ ಮಕ್ಕಳ ಆಸಕ್ತಿ ಅತ್ತ ವಾಲಿದರೆ ಎಂಬ ಭಯವಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಅಲ್ಲಿನ ಶಾಲೆಗೆ ಕಂಪೌಂಡ್​​ ಇಲ್ಲದಿರುವುದು. ಯಾರು ಬೇಕಾದರೂ ಯಾವಾಗ ಬೇಕಾದರೂ ಸಹ ಶಾಲೆಯ ಆವರಣಕ್ಕೆ ಆಗಮಿಸಿ ಏನು ಬೇಕಾದರೂ ಮಾಡಬಹುದು ಎಂಬಂತಾಗಿದೆ. ಗ್ರಾಮಸ್ಥರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಲ್ಲಿ ಬಿದ್ದಿರುವ 1200ಕ್ಕೂ ಹೆಚ್ಚು ಮದ್ಯದ ಬಾಟಲಿಗಳನ್ನು ಸರಿಯಾದ ರೀತಿಯಲ್ಲಿ ವಿಸರ್ಜನೆ ಮಾಡಲಾಗಿದೆ.  ಯುವ ಬ್ರಿಗೇಡ್ ದಾವಣಗೆರೆ ತಂಡವು ಈ ಕಾರ್ಯವನ್ನು ಮಾಡಿದೆ.


ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಮಹಿಳೆಯರು


ಸಂಬಂಧಪಟ್ಟವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಕಷ್ಟುಬಾರಿ ಮನವಿ ಮಾಡಿದರು ಏನು ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥ ಮಹಿಳೆಯರು ಆರೋಪಿಸಿದ್ದಾರೆ. ಪೊಲೀಸರಿಗೆ ಈ ಕುರಿತು ದೂರು ಕೂಡಾ ನೀಡಲಾಗಿತ್ತು. ಆದರೂ ಯಾವುದೇ ಬದಲಾವಣೆಯೂ ಆಗಿರಲಿಲ್ಲ.


ಉಡುಪಿಯಲ್ಲೂ ಸಹ ಇಂತದ್ದೇ ಒಂದು ಘಟನೆಯಾಗಿತ್ತು
ಶಿಕ್ಷಕರೊಬ್ಬರು ಶಾಲೆಗೆ ಕುಡಿದು ಬರುವ ಕಾರಣದಿಂದಾಗಿ ತರಗತಿ ನಡೆಸಲು ಕಷ್ಟವಾಗುತ್ತಿತ್ತು. ಅಷ್ಟೇ ಅಲ್ಲ ಇದು ಶಾಲಾ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಇನ್ನುಳಿದ ಶಿಕ್ಷಕರಿಗೂ ಸಹ ಇದೊಂದು ಇರುಸು ಮುರುಸಿನ ಸಂಗತಿಯಾಗಿ ಕಾಡುತ್ತಿತ್ತು. ಮಧ್ಯಪಾನ ಮಾಡುವುದೇ ತಪ್ಪು ಅಂತದ್ದರಲ್ಲಿ ಶಾಲಾ ಸಮಯದಲ್ಲಿ ಅದೂ ಶಾಲಾ ಆವರಣದಲ್ಲೇ ಈ ರೀತಿ ಕುಡಿದು ಮಲಗಿರುವುದು ಖಂಡಿತ ಅಕ್ಷಮ್ಯ ಅಪರಾಧವಾಗಿದೆ. ಇದನ್ನು ಊರಿನ ಜನರು ಖಂಡಿಸಿದ್ದಾರೆ.


 

First published: