ಹಿಮಾಚಲ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ (Students) ಅನುಕೂಲ ಆಗುವ ರೀತಿಯಲ್ಲಿ ಸಾಲ ನೀಡುವ ಒಂದು ಹೊಸ ಯೋಜನೆ ಜಾರಿಗೆ ಬರಲಿದೆ. ಈ ಕುರಿತು ಅಲ್ಲಿನ ಮುಖ್ಯ ಮಂತ್ರಿ ಮಹತ್ವದ ಮಾಹಿತಿಯನ್ನು (Information) ಹಂಚಿಕೊಂಡಿದ್ದಾರೆ. ಬಡ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು 1% ಬಡ್ಡಿ ದರದಲ್ಲಿ ಸಾಲ ನೀಡುವ ಗುರಿಯನ್ನು ಹೊಂದಿರುವ ಯೋಜನೆಯನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ಹಿಮಾಚಲ ಪ್ರದೇಶದ (Himachal Pradesh) ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ಅದಕ್ಕೆ ಪೂರಕವಾಗಿ ಅನಾಥ ಮಕ್ಕಳನ್ನು ರಾಜ್ಯದ ಮಕ್ಕಳನ್ನಾಗಿ ಸ್ವೀಕರಿಸಿ, ಮುಖ್ಯಮಂತ್ರಿ ಸುಖಾಶ್ರಯ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ಕಾರ್ಯಕ್ರಮವು ಮಕ್ಕಳ ಶೈಕ್ಷಣಿಕ ವೆಚ್ಚವನ್ನು ಭರಿಸುವುದು, ವರ್ಷಕ್ಕೊಮ್ಮೆ ಪ್ರಯಾಣ ಭತ್ಯೆಗಳನ್ನು ಒದಗಿಸುವುದು, ಮಾಸಿಕ 4000 ರೂಪಾಯಿಗಳನ್ನು ನೀಡುವುದು ಮತ್ತು ಅವರ ಸ್ವಂತ ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡುವುದು ಮುಂತಾದ ವಿವಿಧ ನಿಬಂಧನೆಗಳನ್ನು ಒಳಗೊಂಡಿದೆ ಎಂದು ಸಿಎಂ ಹೇಳಿದ್ದಾರೆ.
ಗ್ರಾಮೀಣ ಪ್ರದೇಶದ ಸವಾಲುಗಳ ಬಗ್ಗೆ ರಾಜ್ಯ ಸರ್ಕಾರದ ಅರಿವನ್ನು ಎತ್ತಿ ಹಿಡಿದ ಸಿಎಂ, ಮುಂದಿನ ದಿನಗಳಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ಉದ್ದೇಶದಿಂದ ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವುದಾಗಿ ಹೇಳಿದ್ಧಾರೆ.
ಇದಲ್ಲದೆ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಮೂಲಕ ಆರಂಭಿಕ ಭರವಸೆಯನ್ನು ಈಡೇರಿಸುವುದಾಗಿ ಅವರು ಘೋಷಿಸಿದ್ದಾರೆ.
ಇದನ್ನೂ ಓದಿ: Environmental Education: ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೂ ಬೇಕು ಪರಿಸರ ಪಾಠ
ಸುಮಾರು 1.36 ಲಕ್ಷ ಎನ್‌ಪಿಎಸ್ ಉದ್ಯೋಗಿಗಳಿಗೆ ಇದು ಪ್ರಯೋಜನವಾಗಲಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಇತರ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಿಎಂ ತಿಳಿಸಿರುತ್ತಾರೆ. ಮೊದಲ ಹಂತದ ಭಾಗವಾಗಿ ಸುಮಾರು 2.31 ಲಕ್ಷ ಮಹಿಳೆಯರಿಗೆ ಇಂದಿರಾ ಗಾಂಧಿ ಮಹಿಳಾ ಸಮ್ಮಾನ್ ನಿಧಿಯಡಿಯಲ್ಲಿ ಸರ್ಕಾರವು ತಿಂಗಳಿಗೆ 1500 ರೂಪಾಯಿಗಳನ್ನು ನೀಡಲಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.
ಬಡ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು 1% ಬಡ್ಡಿ ದರದಲ್ಲಿ ಸಾಲ ನೀಡುವ ಗುರಿಯನ್ನು ಹೊಂದಿರುವ ಯೋಜನೆಯನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ಅದಕ್ಕೆ ಪೂರಕವಾಗಿ ಅನಾಥ ಮಕ್ಕಳನ್ನು ರಾಜ್ಯದ ಮಕ್ಕಳನ್ನಾಗಿ ಸ್ವೀಕರಿಸಿ, ಮುಖ್ಯಮಂತ್ರಿ ಸುಖಾಶ್ರಯ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ಕಾರ್ಯಕ್ರಮವು ಅವರ ಶೈಕ್ಷಣಿಕ ವೆಚ್ಚವನ್ನು ಭರಿಸುವುದು, ವರ್ಷಕ್ಕೊಮ್ಮೆ ಪ್ರಯಾಣ ಭತ್ಯೆಗಳನ್ನು ಒದಗಿಸುವುದು, ಮಾಸಿಕ 4000 ರೂಪಾಯಿಗಳನ್ನು ನೀಡುವುದು ಮತ್ತು ಅವರ ಸ್ವಂತ ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡುವುದು ಮುಂತಾದ ವಿವಿಧ ನಿಬಂಧನೆಗಳನ್ನು ಒಳಗೊಂಡಿದೆ ಎಂದು ಸಿಎಂ ಹೇಳಿದರು.
ಎಜುಕೇಶನ್ ಲೋನ್ ತೀರಿಸಲು ಇಲ್ಲಿದೆ ಉಪಾಯ
ಹಲವಾರು ವಿದ್ಯಾರ್ಥಿಗಳು ಕಲಿಕೆಯ ಸಂದರ್ಭದಲ್ಲಿ ಶೈಕ್ಷಣಿಕ ಸಾಲ ಮಾಡಿರುತ್ತಾರೆ. ನಂತರ ಅದನ್ನು ತೀರಿಸಲು ಕಷ್ಟಪಡುತ್ತಾರೆ. ಭಾರತ ಅಥವಾ ವಿದೇಶದಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರಿಸಲು ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ ಪಡೆದಿರುತ್ತಾರೆ. ಉನ್ನತ ಶಿಕ್ಷಣದ ಹಂತದಲ್ಲಿ ಹೆಚ್ಚು ಜನ ವಿದ್ಯಾರ್ಥಿಗಳು ಸಾಲ ಮಾಡುತ್ತಾರೆ. ಕೆಲವೊಂದು ಸಾಲಗಳು ವಿದ್ಯಾರ್ಥಿಗಳಿಗೆಂದೇ ಕಡಿಮೆ ಬಡ್ಡಿದರದಲ್ಲಿ ಲಭ್ಯವಿರುತ್ತದೆ. ಆದರೆ ಈ ಹಣವನ್ನು ತೀರಿಸಲೇ ಬೇಕು.
ಕೆಲವು ಸಾಲ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಮೊದಲು ಸುಲಭವೆನಿಸಿದರೂ ಮುಂದೆ ಇದು ಹೊರೆಯೆನಿಸಬಹುದು. ಮರುಪಾವತಿಯ ಅವಧಿಯು ಬ್ಯಾಂಕಿನಿಂದ ಬ್ಯಾಂಕ್‌ಗೆ ಮತ್ತು ನೀವು ಪಡೆದಿರುವ ಸಾಲದ ಮೊತ್ತದ ಆಧಾರದ ಮೇಲೆ ಬದಲಾಗುತ್ತದೆ. ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮರುಪಾವತಿಯ ಅವಧಿಯು 15 ವರ್ಷಗಳಷ್ಟು ದೀರ್ಘವಾಗಿರುತ್ತದೆ. ಅವರಿಗೆ ಸಣ್ಣ ಕಂತುಗಳಲ್ಲಿ ನಿಧಾನವಾಗಿ ಮರುಪಾವತಿ ಮಾಡಲು ಸಾಕಷ್ಟು ಸಮಯಾವಕಾಶ ನೀಡಿರುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ