• Home
  • »
  • News
  • »
  • jobs
  • »
  • JOBS: ಎಂಜಿನಿಯರಿಂಗ್ ಆಗಿದ್ರೆ ಇಲ್ಲಿದೆ ಬಂಪರ್ ಸರ್ಕಾರಿ ಉದ್ಯೋಗ- ನೇರ ಸಂದರ್ಶನ ಮಾತ್ರ

JOBS: ಎಂಜಿನಿಯರಿಂಗ್ ಆಗಿದ್ರೆ ಇಲ್ಲಿದೆ ಬಂಪರ್ ಸರ್ಕಾರಿ ಉದ್ಯೋಗ- ನೇರ ಸಂದರ್ಶನ ಮಾತ್ರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೇಂದ್ರ ಸರ್ಕಾರದ ನೌಕರಿ ಬೇಕು ಎನ್ನುವವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ ಹಾಗೂ ಉತ್ತರ ಪ್ರದೇಶದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಕೈಗಾದಲ್ಲಿ ಪೋಸ್ಟಿಂಗ್ ಖಾಲಿ ಇವೆ.

  • Share this:

    ECIL Recruitment 2022: ಎಲೆಕ್ಟ್ರಾನಿಕ್ಸ್​​ ಕಾರ್ಪೊರೇಷನ್ ಆಫ್​ ಇಂಡಿಯಾ(Electronics Corporation of India)ದಲ್ಲಿ ಒಟ್ಟು 190 ಟೆಕ್ನಿಕಲ್ ಆಫೀಸರ್(Technical Officer) ಹುದ್ದೆಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಇದೇ ನವೆಂಬರ್ 29ರಂದು ಸಂದರ್ಶನ(Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಕೇಂದ್ರ ಸರ್ಕಾರದ ನೌಕರಿ ಬೇಕು ಎನ್ನುವವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ ಹಾಗೂ ಉತ್ತರ ಪ್ರದೇಶದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


    ಹುದ್ದೆಯ ಕುರಿತಾದ ಮಾಹಿತಿ ಇಲ್ಲಿದೆ:

    ಸಂಸ್ಥೆಎಲೆಕ್ಟ್ರಾನಿಕ್ಸ್​​ ಕಾರ್ಪೊರೇಷನ್ ಆಫ್​ ಇಂಡಿಯಾ
    ಒಟ್ಟು ಹುದ್ದೆಗಳು190
    ಉದ್ಯೋಗದ ಸ್ಥಳತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ
    ಹುದ್ದೆಯ ಹೆಸರುಟೆಕ್ನಿಕಲ್ ಆಫೀಸರ್
    ವೇತನಮಾಸಿಕ ₹ 25,000-31,000

    ಎಲ್ಲೆಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಎಂಬುದು ಇಲ್ಲಿದೆ:


    ಮುಂಬೈ- 8
    ಕಚ್​-1
    ಬೆಂಗಳೂರು-1
    ಕೈಗಾ-4
    ಚಿತ್ತೋರ್-2
    ಅಲಹಾಬಾದ್-1
    ಅಂಡಮಾನ್ & ನಿಕೋಬಾರ್-2
    ಲಕ್ನೋ-1
    ವಿಜಾಗ್-1
    ಯಾದಾದ್ರಿ ಭುವನಗಿರಿ-3
    ಹೈದ್ರಾಬಾದ್-166


    ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಏನಿರಬೇಕು?


    ECIL ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿವಿ/ಮಂಡಳಿಯಿಂದ ಕಡ್ಡಾಯವಾಗಿ CSE/IT/ECE/EEE/E&I/ETC/ ಎಲೆಕ್ಟ್ರಾನಿಕ್ಸ್​/ ಮೆಕ್ಯಾನಿಕಲ್ ಎಂಜಿನಿಯರಿಂಗ್​ನಲ್ಲಿ ಕಡ್ಡಾಯವಾಗಿ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ: Job Alert: ಫ್ಯಾಶನ್ ಟೆಕ್ನಾಲಜಿ ಸಂಸ್ಥೆಯಲ್ಲಿ ಡಿಗ್ರಿ ಆದವರಿಗೆ ಉದ್ಯೋಗ- ತಿಂಗಳಿಗೆ 67,000 ಸಂಬಳ


    ಅನುಭವ ಏನಿರಬೇಕು?


    ಅಭ್ಯರ್ಥಿಯು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.


    ವಯೋಮಿತಿ ಸಡಿಲಿಕೆ:


    ಒಬಿಸಿ ಅಭ್ಯರ್ಥಿಗಳು- 3 ವರ್ಷ
    ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ
    PWD ಅಭ್ಯರ್ಥಿಗಳು- 10 ವರ್ಷ


    ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?


    ಶೈಕ್ಷಣಿಕ ವಿದ್ಯಾರ್ಹತೆ, ಅನುಭವವನ್ನು ಮಾನದಂಡವನ್ನಾಗಿ ಇರಿಸಿಕೊಂಡು ಅಭ್ಯರ್ಥಿಗಳ ಸಂದರ್ಶನ ನಡೆಸಲಾಗುತ್ತದೆ.

    ಸಂದರ್ಶನ ಎಲ್ಲಿ ನಡೆಯುತ್ತೆ?


    ಫ್ಯಾಕ್ಟರಿ ಮೇನ್ ಗೇಟ್
    ಎಲೆಕ್ಟ್ರಾನಿಕ್ಸ್​ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
    ECIL ಪೋಸ್ಟ್​
    ಹೈದರಾಬಾದ್-500062


    ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಈ ಮೇಲ್ಕಂಡ ವಿಳಾಸಕ್ಕೆ ಹಾಜರಾಗಿ.


    ಇದನ್ನೂ ಓದಿ: NIAS Recruitment 2022: ಬೆಂಗಳೂರಿನಲ್ಲಿ JRF, ಪ್ರಾಜೆಕ್ಟ್​ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ


    ಪ್ರಮುಖ ದಿನಾಂಕಗಳು:


    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 21/11/2022
    ಸಂದರ್ಶನ ನಡೆಯುವ ದಿನಾಂಕ- ನವೆಂಬರ್ 26, 28 & 29

    Published by:Latha CG
    First published: