ECHS Recruitment 2021: ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ(Ex-Service Contributory Health Scheme)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಡ್ರೈವರ್(Driver), ನರ್ಸಿಂಗ್ ಅಸಿಸ್ಟೆಂಟ್(Nursing Assistant), ಮೆಡಿಕಲ್ ಆಫೀಸರ್(Medical Officer), ಪ್ರಸೂತಿ ತಜ್ಞರು(Gynaecologist), ಮೆಡಿಕಲ್ ಸ್ಪೆಷಲಿಸ್ಟ್(Medical Specialist), ಡೆಂಟಲ್ ಆಫೀಸರ್(Dental Officer) ಹುದ್ದೆಗಳು ಖಾಲಿ ಇವೆ. 8ನೇ ತರಗತಿ, ಬಿಎಸ್ಸಿ ನರ್ಸಿಂಗ್, ಎಂಬಿಬಿಎಸ್, ಡಿಎನ್ಬಿ, ಎಂಎಸ್, ಎಂಡಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ನವೆಂಬರ್ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 18 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ- ECHS |
ಹುದ್ದೆಯ ಹೆಸರು |
ಡ್ರೈವರ್, ನರ್ಸಿಂಗ್ ಅಸಿಸ್ಟೆಂಟ್, ಮೆಡಿಕಲ್ ಆಫೀಸರ್, ಪ್ರಸೂತಿ ತಜ್ಞರು, ಮೆಡಿಕಲ್ ಸ್ಪೆಷಲಿಸ್ಟ್, ಡೆಂಟಲ್ ಆಫೀಸರ್ |
ಒಟ್ಟು ಹುದ್ದೆಗಳು |
10 |
ವಿದ್ಯಾರ್ಹತೆ |
8ನೇ ತರಗತಿ, ಬಿಎಸ್ಸಿ ನರ್ಸಿಂಗ್, ಎಂಬಿಬಿಎಸ್, ಡಿಎನ್ಬಿ, ಎಂಎಸ್, ಎಂಡಿ |
ಉದ್ಯೋಗದ ಸ್ಥಳ |
ಬೆಂಗಳೂರು |
ವೇತನ |
ಮಾಸಿಕ ₹ 19,700- 87,500 |
ಅರ್ಜಿ ಸಲ್ಲಿಕೆ ವಿಧಾನ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
15/11/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
18/11/2021 |
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18/11/2021
ಇದನ್ನೂ ಓದಿ: NITI Aayog Recruitment 2021: ಮಾಸಿಕ ವೇತನ ₹2,65,000; ನೀತಿ ಆಯೋಗದಲ್ಲಿ ವಿವಿಧ ಹುದ್ದೆಗಳು ಖಾಲಿ
ಹುದ್ದೆಯ ಮಾಹಿತಿ:
ಮೆಡಿಕಲ್ ಸ್ಪೆಷಲಿಸ್ಟ್- 02
ಗೈನೆಕೊಲಾಜಿಸ್ಟ್- 01
ಮೆಡಿಕಲ್ ಆಫೀಸರ್-03
ಡೆಂಟಲ್ ಆಫೀಸರ್-01
ನರ್ಸಿಂಗ್ ಅಸಿಸ್ಟೆಂಟ್-02
ಡ್ರೈವರ್-01
ಒಟ್ಟು- 10 ಹುದ್ದೆಗಳು
ವಿದ್ಯಾರ್ಹತೆ:
ಮೆಡಿಕಲ್ ಸ್ಪೆಷಲಿಸ್ಟ್- ಎಂಡಿ/ಎಂಎಸ್
ಗೈನೆಕೊಲಾಜಿಸ್ಟ್- ಡಿಎನ್ಬಿ
ಮೆಡಿಕಲ್ ಆಫೀಸರ್- ಎಂಬಿಬಿಎಸ್
ಡೆಂಟಲ್ ಆಫೀಸರ್- ಬಿಡಿಎಸ್
ನರ್ಸಿಂಗ್ ಅಸಿಸ್ಟೆಂಟ್- ಬಿ.ಎಸ್ಸಿ ನರ್ಸಿಂಗ್
ಡ್ರೈವರ್- 8ನೇ ತರಗತಿ ಪಾಸ್
ಉದ್ಯೋಗದ ಸ್ಥಳ:
ಮೆಡಿಕಲ್ ಸ್ಪೆಷಲಿಸ್ಟ್, ಗೈನೆಕೊಲಾಜಿಸ್ಟ್, ಮೆಡಿಕಲ್ ಆಫೀಸರ್, ಡೆಂಟಲ್ ಆಫೀಸರ್, ನರ್ಸಿಂಗ್ ಅಸಿಸ್ಟೆಂಟ್, ಡ್ರೈವರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.
ವೇತನ:
ಮೆಡಿಕಲ್ ಸ್ಪೆಷಲಿಸ್ಟ್- ಮಾಸಿಕ ₹87,500
ಗೈನೆಕೊಲಾಜಿಸ್ಟ್- ಮಾಸಿಕ ₹87,500
ಮೆಡಿಕಲ್ ಆಫೀಸರ್- ಮಾಸಿಕ ₹75,000
ಡೆಂಟಲ್ ಆಫೀಸರ್- ಮಾಸಿಕ ₹75,000
ನರ್ಸಿಂಗ್ ಅಸಿಸ್ಟೆಂಟ್- ಮಾಸಿಕ ₹28,100
ಡ್ರೈವರ್- ಮಾಸಿಕ ₹19,700
ಇದನ್ನೂ ಓದಿ:India Post Recruitment 2021:ತಿಂಗಳಿಗೆ ₹ 81,000 ಸಂಬಳ; SSLC, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ