DSSP Recruitment: ತಿಂಗಳಿಗೆ 90 ಸಾವಿರ ರೂ. ಸಂಬಳ; ಕೆಲಸಕ್ಕೆ ಅರ್ಜಿ ಸಲ್ಲಿಸಲು ನಾಳೆನೇ ಕೊನೆ ದಿನ

ಸೀನಿಯರ್​ ಪ್ರೋಗ್ರಾಮರ್​ ಮತ್ತು ಜೂನಿಯರ್​ ಪ್ರೋಗ್ರಾಮರ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ತಾಂತ್ರಿಕ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ರಾಜ್ಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದಿಂದ (Directorate of Social Security and Pensions Karnataka) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್​ ಪ್ರೋಗ್ರಾಮರ್​ ಮತ್ತು ಜೂನಿಯರ್​ ಪ್ರೋಗ್ರಾಮರ್​ (Programmer Post) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ತಾಂತ್ರಿಕ ಪದವೀಧರ (Technical Graduates) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆಫ್​​ಲೈನ್​ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 12 ಆಗಿದೆ.

ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಸಂಸ್ಥೆಯ ಹೆಸರು: ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಕರ್ನಾಟಕ (DSSP ಕರ್ನಾಟಕ)
ಹುದ್ದೆ: ಹಿರಿಯ ಪ್ರೋಗ್ರಾಮರ್, ಜೂನಿಯರ್ ಪ್ರೋಗ್ರಾಮರ್
ಹುದ್ದೆಗಳ ಸಂಖ್ಯೆ: 02
ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
ವೇತನ: 70000-90000 ರೂ. ಪ್ರತಿ ತಿಂಗಳು





















ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನ
ಹಿರಿಯ ಪ್ರೋಗ್ರಾಮರ್1ಬಿಇ, ಬಿಟೆಕ್​ ಪದವಿ90000 ರೂ ಮಾಸಿಕ
ಜೂನಿಯರ್ ಪ್ರೋಗ್ರಾಮರ್1ಬಿಇ, ಬಿಟೆಕ್​ ಪದವಿ70000 ರೂ ಮಾಸಿಕ

ಅನುಭವದ ವಿವರಗಳು
ಹಿರಿಯ ಪ್ರೋಗ್ರಾಮರ್: ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 07 ವರ್ಷಗಳ ಅನುಭವವನ್ನು ಹೊಂದಿರಬೇಕು.

ಜೂನಿಯರ್ ಪ್ರೋಗ್ರಾಮರ್: ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 02 ವರ್ಷಗಳ ಅನುಭವವನ್ನು ಹೊಂದಿರಬೇಕು.

ಇದನ್ನು ಓದಿ: ಕನ್ಸಲ್ಟೇಂಟ್​ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ 65000 ರೂ ವೇತನ

ವಯೋಮಿತಿ :
ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ ಕರ್ನಾಟಕ ನಿಯಮಗಳ ಪ್ರಕಾರ

ಆಯ್ಕೆ ಪ್ರಕ್ರಿಯೆ
ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಕೆ: ಆಫ್​ಲೈನ್​

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29 ಜುಲೈ 022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12 ಆಗಸ್ಟ್ 2022

ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ವೆಬ್‌ಸೈಟ್: dssp.karnataka.gov.in

ಅರ್ಜಿ ಸಲ್ಲಿಕೆ ವಿಳಾಸ:
ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ, ಕಂದಾಯ ಇಲಾಖೆ, ಬೆಂಗಳೂರು - 560009, ಕರ್ನಾಟಕ

ಇದನ್ನು ಓದಿ: ಪ್ರವಾಸೋದ್ಯಮ ಸಂಸ್ಥೆಯಲ್ಲಿದೆ ವಿವಿಧ ಮ್ಯಾನೇಜರ್​ ಹುದ್ದೆ; ಮಾಸಿಕ 50000 ರೂ ವೇತನ

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

-ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

- ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಯಾವುದೇ ಅನುಭವವಿದ್ದರೆ ಇತ್ಯಾದಿ ಜೊತೆಗೆ ಎಲ್ಲಾ ಅಂಕಪಟ್ಟಿಗಳನ್ನು ದಾಖಲೆಗಳನ್ನು ಲಗತ್ತಿಸಿ

-ಎಲ್ಲಾ ದಾಖಲೆಗಳನ್ನು ಮೇಲ್ಕಂಡ ವಿಳಾಸಕ್ಕೆ ನಿಗದಿತ ದಿನಾಂಕಕ್ಕೆ ಮುನ್ನ ಸಲ್ಲಿಕೆಯಾಗುವಂತೆ ಅಂಚೆ ಅಥವಾ ಸ್ಪೀಡ್​ ಪೋಸ್ಟ್​ ಮೂಲಕ ಕಳುಹಿಸಬಹುದಾಗಿದೆ.
Published by:Kavya V
First published: