• Home
  • »
  • News
  • »
  • jobs
  • »
  • DRDO Recruitment 2021: ಜೂನಿಯರ್​ ರಿಸರ್ಚ್ ಫೆಲೋ ನೇಮಕಾತಿ; ನೇರ ಸಂದರ್ಶನ, ಬೆಂಗಳೂರಿನಲ್ಲೇ ಉದ್ಯೋಗ

DRDO Recruitment 2021: ಜೂನಿಯರ್​ ರಿಸರ್ಚ್ ಫೆಲೋ ನೇಮಕಾತಿ; ನೇರ ಸಂದರ್ಶನ, ಬೆಂಗಳೂರಿನಲ್ಲೇ ಉದ್ಯೋಗ

DRDO

DRDO

DRDO Recruitment:ಆಸಕ್ತ ಅಭ್ಯರ್ಥಿಗಳು ಸಂದರ್ಶನಕ್ಕೆ ಮುಂಚಿತವಾಗಿ ತಮ್ಮ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ jrfcair2021@gmail.com ಗೆ ಇ-ಮೇಲ್​ ಮೂಲಕ ಅರ್ಜಿ ಕಳುಹಿಸಲು ಸೂಚಿಸಲಾಗಿದೆ.

  • Share this:

DRDO Recruitment: 2021ರ ಜೂನಿಯರ್​ ರಿಸರ್ಚ್ ಫೆಲೋ ನೇಮಕಾತಿಗಾಗಿ ಡಿಫೆನ್ಸ್​ ರಿಸರ್ಚ್ ಮತ್ತು ಡೆವಲಪ್​ಮೆಂಟ್​ ಆರ್ಗನೈಜೇಶನ್(DRDO) ಅರ್ಜಿ ಆಹ್ವಾನಿಸಿದೆ. ಸದ್ಯ ಸೆಂಟರ್​ ಫಾರ್​ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್​ ಆ್ಯಂಡ್ ರೋಬೋಟಿಕ್ಸ್​ (CAIR) ಬೆಂಗಳೂರಿನಲ್ಲಿ ಹುದ್ದೆಗಳು ಖಾಲಿ ಇವೆ. ಸಂದರ್ಶನದ ಸುತ್ತನ್ನು ಯಶಸ್ವಿಯಾಗಿ ಮುಗಿಸಿದ ಅರ್ಹ ಅಭ್ಯರ್ಥಿಗಳು ಮುಂದಿನ 2 ವರ್ಷ ಬೆಂಗಳೂರಿನಲ್ಲಿ ಜೂನಿಯರ್ ರಿಸರ್ಚ್​ ಫೆಲೋ ಆಗಿ ಕಾರ್ಯ ನಿರ್ವಹಿಸಬಹುದು. ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ಆಧರಿಸಿ 2 ವರ್ಷಗಳ ಬಳಿಕ ಸೀನಿಯರ್ ರಿಸರ್ಚ್ ಫೆಲೋಗೆ ಬಡ್ತಿ ನೀಡಲಾಗುತ್ತದೆ.


ಗಣಿತ ಮತ್ತು ಕಂಪ್ಯೂಟರ್​ ಸೈನ್ಸ್​​​ ಫೆಲೋಶಿಪ್​ಗಳಿಗಾಗಿ ಸುಧಾರಿತ ಸಂಶೋಧನೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಸಂದರ್ಶನಕ್ಕೆ ಮುಂಚಿತವಾಗಿ ತಮ್ಮ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ jrfcair2021@gmail.com ಗೆ ಇ-ಮೇಲ್​ ಮೂಲಕ ಅರ್ಜಿ ಕಳುಹಿಸಲು ಸೂಚಿಸಲಾಗಿದೆ. ಅಕ್ಟೋಬರ್​ 8 ಸಂಜೆ 5ಗಂಟೆಯವರೆಗೆ ಇ-ಮೇಲ್ ಮಾಡಲು ಅಥವಾ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಮೇಲ್​ನಲ್ಲಿ ಈ ವಿಷಯವನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಿದೆ.
Application for JRF as per the Advertisement No: CAIR/SSD/72402/01.


ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ತಮ್ಮ ರೆಸ್ಯೂಮ್​/ ಬಯೋಡೇಟಾದ ಪ್ರತಿಯನ್ನು ತರಬೇಕು.


ಇದನ್ನೂ ಓದಿ:Interview Questions: Infosys, TCS, Wipro ಕಂಪನಿಗಳಲ್ಲಿ ಕೆಲಸದ ಸಂರ್ಶನಕ್ಕೆ ಈ ಪ್ರಶ್ನೆಗಳು ಸಾಮಾನ್ಯವಾಗಿ ಇರುತ್ತವೆ, ತಿಳ್ಕೊಂಡಿರಿ!


DRDO Recruitment: ಖಾಲಿ ಇರುವ ಹುದ್ದೆಗಳು


ಜೂನಿಯರ್ ರಿಸರ್ಚ್ ಫೆಲೋ-ಗಣಿತ (JRF - Mathematics) - 01


ಜೂನಿಯರ್ ರಿಸರ್ಚ್ ಫೆಲೋ-ಕಂಪ್ಯೂಟರ್ ಸೈನ್ಸ್​(JRF- Computer Science) - 01


ವಿದ್ಯಾರ್ಹತೆ
ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಗಣಿತ ಅಥವಾ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ವ್ಯಕ್ತಿಯು ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅಥವಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಯಿಂದ ಗುರುತಿಸಲ್ಪಟ್ಟ ಯಾವುದೇ ಸಂಸ್ಥೆಯಿಂದ ಮೊದಲ ವಿಭಾಗದೊಂದಿಗೆ ಪೂರ್ಣಗೊಳಿಸಿರಬೇಕು.


ಜೂನಿಯರ್ ರಿಸರ್ಚ್ ಫೆಲೋ-ಗಣಿತಕ್ಕೆ ಅರ್ಜಿ ಸಲ್ಲಿಸುವವರು ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಅದೇ ರೀತಿ ಜೂನಿಯರ್ ರಿಸರ್ಚ್ ಫೆಲೋ-ಕಂಪ್ಯೂಟರ್ ಸೈನ್ಸ್​​​ಗೆ ಅರ್ಜಿ ಸಲ್ಲಿಸುವವರು ಗಣಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.


ಇದನ್ನೂ ಓದಿ:TCS Recruitment 2021: ಕೆಲಸ ಹುಡುಕ್ತಿದ್ದೀರಾ? ಟಿಸಿಎಸ್ ಕಂಪನಿಯಲ್ಲಿದೆ ಉದ್ಯೋಗ; ಅರ್ಜಿ ಸಲ್ಲಿಸಲು ಹೀಗೆ ಮಾಡಿ


ವಯಸ್ಸಿನ ಮಿತಿ
ಜೆಆರ್​ಎಫ್​ ಗಣಿತ ಮತ್ತು ಕಂಪ್ಯೂಟರ್​ ಸೈನ್ಸ್​​ಗೆ ಅರ್ಜಿ ಸಲ್ಲಿಸಲು
ಗರಿಷ್ಠ ವಯೋಮಿತಿ 28 ವರ್ಷಗಳು. (ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕಕ್ಕೆ 28 ವರ್ಷ ಮೀರಿರಬಾರದು)


ನೇರ ಸಂದರ್ಶನ
ವಾಕ್​-ಇನ್-ಸಂದರ್ಶನ
ಜೆಆರ್​ಎಫ್​​-ಗಣಿತ- ಅಕ್ಟೋಬರ್​​ 18, 2021
ಜೆಆರ್​ಎಫ್​​- ಕಂಪ್ಯೂಟರ್​ ಸೈನ್ಸ್​​- ಅಕ್ಟೋಬರ್ 19, 2021


ಸಂದರ್ಶನದ ಸ್ಥಳ:
ಸೆಂಟರ್ ಫಾರ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ & ರೋಬೋಟಿಕ್ಸ್ (CAIR), DRDO ಕಾಂಪ್ಲೆಕ್ಸ್, CV ರಾಮನ್ ನಗರ ಬೆಂಗಳೂರು- 560093.


ರಿಪೋರ್ಟಿಂಗ್​ ಸಮಯ:


ಬೆಳಗ್ಗೆ 8ರಿಂದ 9.30ಕ್ಕೆ CAIR ಮುಖ್ಯ ದ್ವಾರದ ರಿಸೆಪ್ಶನ್, ಸಿವಿ ರಾಮನ್ ನಗರ, ಬೆಂಗಳೂರು.


ಲಿಖಿತ ಪರೀಕ್ಷೆಗಳನ್ನು ಬೆಳಗ್ಗೆ 10 ಗಂಟೆಗೆ ನಡೆಸಲಾಗುತ್ತದೆ. ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಅದೇ ದಿನ ಸಂದರ್ಶನ ಮಾಡಲಾಗುತ್ತದೆ.

Published by:Latha CG
First published: