• Home
  • »
  • News
  • »
  • jobs
  • »
  • DRDO Recruitment 2021: ತಿಂಗಳಿಗೆ ₹54,000 ಸಂಬಳ, ಡಿಆರ್​ಡಿಒದಲ್ಲಿ 13 ಹುದ್ದೆಗಳು ಖಾಲಿ

DRDO Recruitment 2021: ತಿಂಗಳಿಗೆ ₹54,000 ಸಂಬಳ, ಡಿಆರ್​ಡಿಒದಲ್ಲಿ 13 ಹುದ್ದೆಗಳು ಖಾಲಿ

ಡಿಆರ್​ಡಿಒ

ಡಿಆರ್​ಡಿಒ

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  • Share this:

DRDO Recruitment 2021: ಡಿಫೆನ್ಸ್​ ಫುಡ್​ ರಿಸರ್ಚ್ ಲ್ಯಾಬೊರೇಟರಿ(Defence Food Research Laboratory), ಡಿಫೆನ್ಸ್​ ರಿಸರ್ಚ್​ & ಡೆವಲಪ್​ಮೆಂಟ್​ ಆರ್ಗನೈಜೇಷನ್(Defence Research and Development Organization- DRDO) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜೂನಿಯರ್ ರಿಸರ್ಚ್ ಫೆಲೋ(Junior Research Fellow) ಮತ್ತು ರಿಸರ್ಚ್ ಅಸೋಸಿಯೇಟ್(Research Associate) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಡಿಆರ್​ಡಿಒ ಅಧಿಕೃತ ವೆಬ್​ಸೈಟ್​ drdo.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಡಿಫೆನ್ಸ್​ ರಿಸರ್ಚ್​ & ಡೆವಲಪ್​ಮೆಂಟ್​ ಆರ್ಗನೈಜೇಷನ್
ಹುದ್ದೆಯ ಹೆಸರುಜೂನಿಯರ್ ರಿಸರ್ಚ್​ ಫೆಲೋ, ರಿಸರ್ಚ್​ ಅಸೋಸಿಯೇಟ್
ಒಟ್ಟು ಹುದ್ದೆಗಳು13
ವಯೋಮಿತಿ28 ವರ್ಷ
ವಿದ್ಯಾರ್ಹತೆಸ್ನಾತಕೋತ್ತರ ಪದವಿ(ವಿಜ್ಞಾನ ವಿಭಾಗ)
ವೇತನಮಾಸಿಕ ₹54,000
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30/11/2021


ಹುದ್ದೆಯ ಮಾಹಿತಿ:


ಡಿಆರ್​ಡಿಒ ಜೂನಿಯರ್ ರಿಸರ್ಚ್​ ಫೆಲೋ: 12 ಹುದ್ದೆಗಳು
ಡಿಆರ್​ಡಿಒ ರಿಸರ್ಚ್​ ಅಸೋಸಿಯೇಟ್: 1 ಹುದ್ದೆ


ಇದನ್ನೂ ಓದಿ:Southern Railway Recruitment 2021: ಮಾಸಿಕ ವೇತನ ₹ 29,200; ದಕ್ಷಿಣ ರೈಲ್ವೆಯಲ್ಲಿ 21 ಹುದ್ದೆಗಳು ಖಾಲಿ


ವಿದ್ಯಾರ್ಹತೆ:


  • ಡಿಆರ್​ಡಿಒ ಜೂನಿಯರ್ ರಿಸರ್ಚ್​ ಫೆಲೋ: ಬಯೋಟೆಕ್ನಾಲಜಿ/ಲೈಫ್​ ಸೈನ್ಸಸ್/ ಜೂಅಲಾಜಿ/ ಟಾಕ್ಸಿಕಾಲಜಿ/ಫಾರ್ಮಾಕಾಲಜಿ/ಮೈಕ್ರೊಬಯಾಲಜಿ- ಯಾವುದೇ ವಿಷಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎಸ್ಸಿ ಪದವಿ ಪಡೆದಿರಬೇಕು. ಜೊತೆಗೆ ಎನ್​ಇಟಿ ಪರೀಕ್ಷೆ ಪಾಸಾಗಿರಬೇಕು.

  • ಡಿಆರ್​ಡಿಒ ರಿಸರ್ಚ್​ ಅಸೋಸಿಯೇಟ್: ಬಯೋಟೆಕ್ನಾಲಜಿ/ಲೈಫ್​ ಸೈನ್ಸಸ್/ ಜೂಅಲಾಜಿ/ ಟಾಕ್ಸಿಕಾಲಜಿ/ಫಾರ್ಮಾಕಾಲಜಿ/ಮೈಕ್ರೊಬಯಾಲಜಿ- ಯಾವುದೇ ವಿಷಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎಸ್ಸಿ ಪದವಿ ಪಡೆದಿರಬೇಕು. ಪಿಎಚ್​.ಡಿ ಪದವಿ ಪಡೆದಿರಬೇಕು.


ವಯೋಮಿತಿ:


ಡಿಆರ್​ಡಿಒ ಜೂನಿಯರ್ ರಿಸರ್ಚ್​ ಫೆಲೋ: 28 ವರ್ಷ ಮೀರಿರಬಾರದು
ಡಿಆರ್​ಡಿಒ ರಿಸರ್ಚ್​ ಅಸೋಸಿಯೇಟ್: 35 ವರ್ಷ ಮೀರಿರಬಾರದು.


ವೇತನ


ಡಿಆರ್​ಡಿಒ ಜೂನಿಯರ್ ರಿಸರ್ಚ್​ ಫೆಲೋ: ಮಾಸಿಕ ₹31,000
ಡಿಆರ್​ಡಿಒ ರಿಸರ್ಚ್​ ಅಸೋಸಿಯೇಟ್: ಮಾಸಿಕ ₹ 54,000


ಆಯ್ಕೆ ಪ್ರಕ್ರಿಯೆ:


ಮೊದಲಿಗೆ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಶಾರ್ಟ್​ ಲಿಸ್ಟ್​​ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.


ಇದನ್ನೂ ಓದಿ:Defence Ministry Recruitment 2021: ಮಾಸಿಕ ವೇತನ ₹81,100, ರಕ್ಷಣಾ ಸಚಿವಾಲಯದಲ್ಲಿ Group C ಹುದ್ದೆಗಳು ಖಾಲಿ


ಸಂದರ್ಶನದ ದಿನಾಂಕ:


ಡಿಆರ್​ಡಿಒ ಜೂನಿಯರ್ ರಿಸರ್ಚ್​ ಫೆಲೋ: 09/12/2021
ಡಿಆರ್​ಡಿಒ ರಿಸರ್ಚ್​ ಅಸೋಸಿಯೇಟ್: 10/12/2021

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: