DRDO Recruitment 2021: ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟರಿ(Defence Food Research Laboratory), ಡಿಫೆನ್ಸ್ ರಿಸರ್ಚ್ & ಡೆವಲಪ್ಮೆಂಟ್ ಆರ್ಗನೈಜೇಷನ್(Defence Research and Development Organization- DRDO) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜೂನಿಯರ್ ರಿಸರ್ಚ್ ಫೆಲೋ(Junior Research Fellow) ಮತ್ತು ರಿಸರ್ಚ್ ಅಸೋಸಿಯೇಟ್(Research Associate) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಡಿಆರ್ಡಿಒ ಅಧಿಕೃತ ವೆಬ್ಸೈಟ್ drdo.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಡಿಫೆನ್ಸ್ ರಿಸರ್ಚ್ & ಡೆವಲಪ್ಮೆಂಟ್ ಆರ್ಗನೈಜೇಷನ್ |
ಹುದ್ದೆಯ ಹೆಸರು |
ಜೂನಿಯರ್ ರಿಸರ್ಚ್ ಫೆಲೋ, ರಿಸರ್ಚ್ ಅಸೋಸಿಯೇಟ್ |
ಒಟ್ಟು ಹುದ್ದೆಗಳು |
13 |
ವಯೋಮಿತಿ |
28 ವರ್ಷ |
ವಿದ್ಯಾರ್ಹತೆ |
ಸ್ನಾತಕೋತ್ತರ ಪದವಿ(ವಿಜ್ಞಾನ ವಿಭಾಗ) |
ವೇತನ |
ಮಾಸಿಕ ₹54,000 |
ಅರ್ಜಿ ಸಲ್ಲಿಸುವ ವಿಧಾನ |
ಆನ್ಲೈನ್ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
30/11/2021 |
ಹುದ್ದೆಯ ಮಾಹಿತಿ:
ಡಿಆರ್ಡಿಒ ಜೂನಿಯರ್ ರಿಸರ್ಚ್ ಫೆಲೋ: 12 ಹುದ್ದೆಗಳು
ಡಿಆರ್ಡಿಒ ರಿಸರ್ಚ್ ಅಸೋಸಿಯೇಟ್: 1 ಹುದ್ದೆ
ಇದನ್ನೂ ಓದಿ:AFMS Recruitment 2021: ಎಂಜಿನಿಯರಿಂಗ್, MBBS, PG ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಉದ್ಯೋಗ, ಈಗಲೇ ಅರ್ಜಿ ಸಲ್ಲಿಸಿ
ವಿದ್ಯಾರ್ಹತೆ:
ಡಿಆರ್ಡಿಒ ಜೂನಿಯರ್ ರಿಸರ್ಚ್ ಫೆಲೋ: ಬಯೋಟೆಕ್ನಾಲಜಿ/ಲೈಫ್ ಸೈನ್ಸಸ್/ ಜೂಅಲಾಜಿ/ ಟಾಕ್ಸಿಕಾಲಜಿ/ಫಾರ್ಮಾಕಾಲಜಿ/ಮೈಕ್ರೊಬಯಾಲಜಿ- ಯಾವುದೇ ವಿಷಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎಸ್ಸಿ ಪದವಿ ಪಡೆದಿರಬೇಕು. ಜೊತೆಗೆ ಎನ್ಇಟಿ ಪರೀಕ್ಷೆ ಪಾಸಾಗಿರಬೇಕು.
ಡಿಆರ್ಡಿಒ ರಿಸರ್ಚ್ ಅಸೋಸಿಯೇಟ್: ಬಯೋಟೆಕ್ನಾಲಜಿ/ಲೈಫ್ ಸೈನ್ಸಸ್/ ಜೂಅಲಾಜಿ/ ಟಾಕ್ಸಿಕಾಲಜಿ/ಫಾರ್ಮಾಕಾಲಜಿ/ಮೈಕ್ರೊಬಯಾಲಜಿ- ಯಾವುದೇ ವಿಷಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎಸ್ಸಿ ಪದವಿ ಪಡೆದಿರಬೇಕು. ಪಿಎಚ್.ಡಿ ಪದವಿ ಪಡೆದಿರಬೇಕು.
ವಯೋಮಿತಿ:
ಡಿಆರ್ಡಿಒ ಜೂನಿಯರ್ ರಿಸರ್ಚ್ ಫೆಲೋ: 28 ವರ್ಷ ಮೀರಿರಬಾರದು
ಡಿಆರ್ಡಿಒ ರಿಸರ್ಚ್ ಅಸೋಸಿಯೇಟ್: 35 ವರ್ಷ ಮೀರಿರಬಾರದು.
ವೇತನ
ಡಿಆರ್ಡಿಒ ಜೂನಿಯರ್ ರಿಸರ್ಚ್ ಫೆಲೋ: ಮಾಸಿಕ ₹31,000
ಡಿಆರ್ಡಿಒ ರಿಸರ್ಚ್ ಅಸೋಸಿಯೇಟ್: ಮಾಸಿಕ ₹ 54,000
ಆಯ್ಕೆ ಪ್ರಕ್ರಿಯೆ:
ಮೊದಲಿಗೆ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
ಇದನ್ನೂ ಓದಿ:India Post Recruitment 2021: ಮಾಸಿಕ ವೇತನ ₹ 81,100, ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ
ಸಂದರ್ಶನದ ದಿನಾಂಕ:
ಡಿಆರ್ಡಿಒ ಜೂನಿಯರ್ ರಿಸರ್ಚ್ ಫೆಲೋ: 09/12/2021
ಡಿಆರ್ಡಿಒ ರಿಸರ್ಚ್ ಅಸೋಸಿಯೇಟ್: 10/12/2021
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ