• Home
  • »
  • News
  • »
  • jobs
  • »
  • Government Job: ಬೆಂಗಳೂರಿನಲ್ಲಿ JRF ಹುದ್ದೆ ಖಾಲಿ ಇದೆ, ತಿಂಗಳಿಗೆ 31,000 ಸಂಬಳ

Government Job: ಬೆಂಗಳೂರಿನಲ್ಲಿ JRF ಹುದ್ದೆ ಖಾಲಿ ಇದೆ, ತಿಂಗಳಿಗೆ 31,000 ಸಂಬಳ

DRDO

DRDO

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಡಿಫೆನ್ಸ್​ ಬಯೋಎಂಜಿನಿಯರಿಂಗ್ & ಎಲೆಕ್ಟ್ರೋಮೆಡಿಕಲ್ ಲ್ಯಾಬೊರೇಟರಿ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 28 ವರ್ಷ ಮೀರಿರಬಾರದು.

  • News18 Kannada
  • Last Updated :
  • Bangalore [Bangalore], India
  • Share this:

    DRDO DEBEL Recruitment 2022: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಡಿಫೆನ್ಸ್​ ಬಯೋಎಂಜಿನಿಯರಿಂಗ್ & ಎಲೆಕ್ಟ್ರೋಮೆಡಿಕಲ್ ಲ್ಯಾಬೊರೇಟರಿ(Defence Research and Development Organisation, Defence Bioengineering & Electromedical Laboratory) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 2 ಜೂನಿಯರ್ ರಿಸರ್ಚ್​​ ಫೆಲೋ(Junior Research Fellow- JRF) ಹುದ್ದೆಗಳು ಖಾಲಿ ಇವೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ನವೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಈ ಕೂಡಲೇ ನಿಮ್ಮ ರೆಸ್ಯೂಮ್​ನ್ನು ಇ-ಮೇಲ್ ಮಾಡಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಡಿಫೆನ್ಸ್​ ಬಯೋಎಂಜಿನಿಯರಿಂಗ್ & ಎಲೆಕ್ಟ್ರೋಮೆಡಿಕಲ್ ಲ್ಯಾಬೊರೇಟರಿ
    ಹುದ್ದೆಯ ಹೆಸರುಜೂನಿಯರ್ ರಿಸರ್ಚ್​ ಫೆಲೋ
    ಒಟ್ಟು ಹುದ್ದೆ2
    ಸ್ಥಳಬೆಂಗಳೂರು
    ವಿದ್ಯಾರ್ಹತೆಬಿಇ/ಬಿ.ಟಕ್, ಎಂಇ/ಎಂಟೆಕ್, ಎಂಸ್ಸಿ
    ವೇತನಮಾಸಿಕ ₹ 31,000
    ಅರ್ಜಿ ಸಲ್ಲಿಸಲು ಕೊನೆ ದಿನ30/11/2022
    ಸಂದರ್ಶನ ನಡೆಯುವ ದಿನಡಿಸೆಂಬರ್ 13 &14, 2022


    ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ:
    ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಡಿಫೆನ್ಸ್​ ಬಯೋಎಂಜಿನಿಯರಿಂಗ್ & ಎಲೆಕ್ಟ್ರೋಮೆಡಿಕಲ್ ಲ್ಯಾಬೊರೇಟರಿ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಲೆಕ್ಟ್ರಾನಿಕ್ಸ್​​ & ಕಮ್ಯುನಿಕೇಷನ್/ ಇನ್​​ಸ್ಟ್ರುಮೆಂಟೇಶನ್/ಮೆಟೀರಿಯಲ್ ಸೈನ್ಸ್​​ ವಿಭಾಗದಲ್ಲಿ ಬಿಇ/ಬಿ.ಟೆಕ್​, ಎಂಇ/ಎಂಟೆಕ್ ಪೂರ್ಣಗೊಳಿಸಿರಬೇಕು. ಅಥವಾ ಫಿಜಿಕ್ಸ್​​ನಲ್ಲಿ ಎಂಎಸ್ಸಿ, ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ: JOB ALERT: ಸರ್ಕಾರಿ ಕೆಲಸ ಬೇಕು ಅಂದ್ರೆ ಇವತ್ತೇ ಅರ್ಜಿ ಹಾಕಿ, ವಿಕಾಸಸೌಧದಲ್ಲಿ ನ.9ಕ್ಕೆ ಸಂದರ್ಶನ


    ವಯೋಮಿತಿ:
    ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಡಿಫೆನ್ಸ್​ ಬಯೋಎಂಜಿನಿಯರಿಂಗ್ & ಎಲೆಕ್ಟ್ರೋಮೆಡಿಕಲ್ ಲ್ಯಾಬೊರೇಟರಿ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 28 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಡಿಫೆನ್ಸ್​ ಬಯೋಎಂಜಿನಿಯರಿಂಗ್ & ಎಲೆಕ್ಟ್ರೋಮೆಡಿಕಲ್ ಲ್ಯಾಬೊರೇಟರಿ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿ ಹಾಗೂ ರೆಸ್ಯೂಮ್​ನೊಂದಿಗೆ ನವೆಂಬರ್ 30, 2022ಕ್ಕೆ ಮುನ್ನ ಇ-ಮೇಲ್ ಐಡಿ hrd.debel.debel@gov.in ಗೆ ಕಳುಹಿಸಬೇಕು.


    ಇದನ್ನೂ ಓದಿ: Work From Home ಬೇಕು ಅನ್ನೋರು ಇಲ್ಲಿ ಅರ್ಜಿ ಸಲ್ಲಿಸಿ, Flipkart ನೀಡ್ತಿದೆ ಬಂಪರ್ ಉದ್ಯೋಗ


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 07/11/2022
    ಇ-ಮೇಲ್ ಕಳುಹಿಸಲು ಕೊನೆ ದಿನ: 30/11/2022
    ಸಂದರ್ಶನ ನಡೆಯುವ ದಿನ: ಡಿಸೆಂಬರ್ 13 &14, 2022

    Published by:Latha CG
    First published: