Double-Digit Salary hike: ಮುಂದಿನ ವರ್ಷದಿಂದ ಉದ್ಯೋಗಿಗಳಿಗೆ ದುಪ್ಪಟ್ಟು ಸಂಬಳ; ಯಾವ್ಯಾವ ಕಂಪನಿಗಳಲ್ಲಿ ಗೊತ್ತಾ!

2022ರಲ್ಲಿ ಮಾಹಿತಿ ತಂತ್ರಜ್ಞಾನ ಅಂದರೆ ಐಟಿ ವಲಯದಲ್ಲಿ ಹೆಚ್ಚಿನ ವೇತನ ಏರಿಕೆಯಾಗುವ ಸಾಧ್ಯತೆ ಇದೆ, ಇದರ ನಂತರದಲ್ಲಿ ಡಿಜಿಟಲ್ಇ, -ಕಾಮರ್ಸ್ ಕಂಪನಿಗಳು ಹೆಚ್ಚಿನ ವೇತನ ಏರಿಕೆ ಮಾಡಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೊರೋನಾದಿಂದಾಗಿ ಕಳೆದೆರಡು ವರ್ಷಗಳಿಂದ ಆರ್ಥಿಕ ಬಿಕ್ಕಟ್ಟಿಗೆ (Economic Crisis) ಸಿಲುಕಿದ್ದ ಕಂಪನಿ, ಉದ್ಯೋಗಗಳು ನಿಧಾನವಾಗಿ ಚೇತರಿಕೆ ಹಾದಿಯತ್ತ ಸಾಗುತ್ತಿದೆ. ಈ ಹಿನ್ನಲೆ ಕಳೆದೆರಡು ವರ್ಷಗಳಿಂದ ವೇತನ ಹೆಚ್ಚಳ ಪಡೆಯದ ನೌಕರರು ಮುಂದಿನ ವರ್ಷದಲ್ಲಿ ದುಪ್ಪಟ್ಟು ವೇತನ (Double-Digit Salary hike) ಹೆಚ್ಚಳ ಪಡೆಯಲಿದ್ದಾರೆ. ಈ ಕುರಿತು ಈಗಾಗಲೇ ಡೆಲೋಐಟಿ ವರ್ಕ್​ಫೋರ್ಸ್​ ಮತ್ತು ಇನ್​ಗ್ರಿಮೇಂಟ್​ ಟ್ರೆಂಡ್​​ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆ ಪ್ರಕಾರ ಮುಂದಿನ ವರ್ಷ ಉದ್ಯೋಗಿಗಳ ಸರಾಸರಿ ವೇತನ 8.6ರಷ್ಟು ಹೆಚ್ಚಳವಾಗಲಿದೆ.

    ಯಾವ ಕಂಪನಿಗಳಲ್ಲಿ ವೇತನ ಹೆಚ್ಚಳ
    ಇನ್ನು ಈ ಕುರಿತು ಸಮೀಕ್ಷೆಯಲ್ಲಿ ಶೇ 25ರಷ್ಟು ಕಂಪನಿಗಳು ಮುಂಬರುವ ವರ್ಷದಲ್ಲಿ ವೇತನ ಹೆಚ್ಚಳಕ್ಕೆ ಒಲವು ತೋರಿಸಿದೆ ಎಂಬುದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಮತ್ತೊಂದು ಗಮನಿಸಬೇಕಾದ ವಿಷಯ ಎಂದರೆ ಹಲವು ಕಂಪನಿಗಳು ಕೋವಿಡ್ ಸಂದರ್ಭದಲ್ಲಿಯೇ ತಮ್ಮ ಉದ್ಯೋಗಿಗಳ ವೇತನದ ಸರಾಸರಿ 8.0 ರಷ್ಟು ವೇತನ ಏರಿಕೆ ಮಾಡಿದೆ.

    2021 ಕ್ಕೆ ಹೋಲಿಸಿದರೆ 2022 ರಲ್ಲಿ ಹೆಚ್ಚಿನ ಕಂಪನಿಗಳು ಹೆಚ್ಚಿನ ಹೆಚ್ಚಳವನ್ನು ಯೋಜಿಸುತ್ತಿದೆ. ಕೋವಿಡ್ -19 ಸಂಬಂಧಿತ ಅನಿಶ್ಚಿತತೆ ವಾತಾವರಣದಲ್ಲಿ ಹಲವು ಕಂಪನಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿವೆ ಎಂದು ಡೆಲೋಯಿಟ್ ಟಚೆ ತೊಹ್ಮಾಟ್ಸು ಇಂಡಿಯಾ ಎಲ್‌ಎಲ್‌ಪಿಯ ಪಾಲುದಾರ ಆನಂದೋರೂಪ್ ಘೋಸ್ ತಿಳಿಸಿದ್ದಾರೆ.

    ಇದನ್ನು ಓದಿ: ಸರ್ಕಾರಿ ಹುದ್ದೆ ಪಡೆಯಬೇಕು ಎಂದು ಕನಸು ಕಾಣ್ತಿದ್ರೆ; ಈಗಿನಿಂದಲೇ ತಯಾರಿ ಆರಂಭಿಸಿ!

    ಈ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ ಕೆಲವರು 2021ರಲ್ಲಿ ತಮಗೆ ಬಡ್ತಿ ಸಿಕ್ಕಿಲ್ಲ ಎಂಬುದನ್ನು ತಿಳಿಸಿದ್ದಾರೆ. ಅಲ್ಲದೇ 2022ರಲ್ಲಿ ಉತ್ತಮ ಇಂಕ್ರಿಮೆಂಟ್​ಗಳನ್ನು ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂಸ್ಥೆಗಳು ಮುಂದಿನ ವರ್ಷ ತಮ್ಮ ಸ್ಥಿರ ವೆಚ್ಚ ಏರಿಕೆಯನ್ನು ನಿರ್ವಹಿಸುವಾಗ ಇದೇ ರೀತಿಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದಿದ್ದಾರೆ.

    ಐಟಿ ವಲಯದಲ್ಲಿ ಹೆಚ್ಚಿನ ಏರಿಕೆ
    2022ರಲ್ಲಿ ಮಾಹಿತಿ ತಂತ್ರಜ್ಞಾನ ಅಂದರೆ ಐಟಿ ವಲಯದಲ್ಲಿ ಹೆಚ್ಚಿನ ವೇತನ ಏರಿಕೆಯಾಗುವ ಸಾಧ್ಯತೆ ಇದೆ, ಇದರ ನಂತರದಲ್ಲಿ ಡಿಜಿಟಲ್ಇ, -ಕಾಮರ್ಸ್ ಕಂಪನಿಗಳು ಹೆಚ್ಚಿನ ವೇತನ ಏರಿಕೆ ಮಾಡಲಿದೆ. ಚಿಲ್ಲರೆ ವಲಯ, ಮತ್ತು ಹೊಟೇಲ್​, ರೆಸ್ಟೋರೆಂಟ್‌ಗಳು, ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ಕಂಪನಿಗಳು ಅಲ್ಪ ಮಟ್ಟದ ಸಂಬಳ ಏರಿಕೆ ಮಾಡುವ ಕುರಿತು ಚಿಂತನೆ ನಡೆಸಿದೆ.

    ಇದನ್ನು ಓದಿ: ಸಾಫ್ಟ್​ವೇರ್​ ಕೆಲಸ​ ಹುಡುಕುತ್ತಿರುವವರಿಗೆ ಸುವರ್ಣಾವಕಾಶ; ವರ್ಷಕ್ಕೆ 10 ಲಕ್ಷ ರೂ ಪ್ಯಾಕೇಜ್

    ಏಕರೂಪದ ಏರಿಕೆ

    ನೌಕರರ ಕೌಶಲ್ಯ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ವಿಭಿನ್ನ ವೇತನ ಹೆಚ್ಚಳವನ್ನು ಈ ಸಂಸ್ಥೆಗಳು ಮುಂದುವರಿಸಲಿದೆ ಎಂಬುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಈ ಮೂಲಕ ಎಲ್ಲಾ ಉದ್ಯೋಗಿಗಳು ಏಕರೂಪದ ವೇತನ ಹೆಚ್ಚಳ ಪಡೆಯುವುದಿಲ್ಲ ಎಂಬುದನನು ಸ್ಪಷ್ಟಪಡಿಸಲಾಗಿದೆ.

    ಆರ್ಥಿಕ ಬಿಕ್ಕಟ್ಟಿನಲ್ಲೂ ಸಂಬಳ ಏರಿಕೆ

    ಕೋವಿಡ್​​ನಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕ್ಷೇತ್ರಗಳಲ್ಲಿಯೂ ಸಹ ಹೆಚ್ಚಿನ ಕಂಪನಿಗಳು 2021 ರಲ್ಲಿ ವೇತನವನ್ನು ಏರಿಕೆ ಮಾಡಿ ನೌಕರರ ಕ್ಷೇಮ ಕಾಪಾಡಿದೆ, ಶೇಷವಾಗಿ ಕಿರಿಯ ನಿರ್ವಹಣಾ ಮಟ್ಟದಲ್ಲಿ ವೇತನ ಹೆಚ್ಚಳ ಮಾಡಲಾಗಿದೆ. 2021 ರಲ್ಲಿ ಸುಮಾರು 12 ಪ್ರತಿಶತದಷ್ಟು ಉದ್ಯೋಗಿಗಳಿಗೆ ಬಡ್ತಿ ನೀಡಲಾಗಿದೆ , 2020 ರಲ್ಲಿ ಕಡಿಮೆ ಶೇಕಡಾ 10 ರಷ್ಟಿತ್ತು ಎಂದು ಸಂಶೋಧನೆ ತಿಳಿಸಿದೆ
    Published by:Seema R
    First published: