Strong Resume: ಉದ್ಯೋಗಾಕಾಂಕ್ಷಿಗಳಿಗೆ ಸ್ಟ್ರಾಂಗ್ ರೆಸ್ಯೂಮ್ ಮಾಡಿಕೊಳ್ಳುವುದು ಹೇಗೆ ಮತ್ತು ಏಕೆ ಮುಖ್ಯ ಗೊತ್ತಾ? ಇಲ್ಲಿದೆ ನೋಡಿ

ರೆಸ್ಯೂಮ್ (Resume) ಎಂಬುದು ಉದ್ಯೋಗಾಕಾಂಕ್ಷಿಗಳಿಗೆ ಎಷ್ಟು ಮುಖ್ಯ ಎಂಬುದು ಬಿಡಿಸಿ ಹೇಳಬೇಕಾದ ಅಗತ್ಯವೇ ಇಲ್ಲ. ಅಭ್ಯರ್ಥಿಯು ತಾನು ಕೆಲಸಗಿಟ್ಟಿಸಿಕೊಳ್ಳಲು ಬೇಕಾಗಿರುವ ಹಲವು ಅರ್ಹತೆಗಳು (Qualifications) ಹಾಗೂ ಮಾನದಂಡಗಳಿಗನುಸಾರವಾಗಿ ಅಭ್ಯರ್ಥಿಯ ಅನುಭವ/ಕೌಶಲ್ಯಗಳ ಪರಿಚಯ ನೀಡುವುದೇ ಸಿವಿ ಅಥವಾ ರೆಸ್ಯೂಮ್ ಆಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ರೆಸ್ಯೂಮ್ (Resume) ಎಂಬುದು ಉದ್ಯೋಗಾಕಾಂಕ್ಷಿಗಳಿಗೆ ಎಷ್ಟು ಮುಖ್ಯ ಎಂಬುದು ಬಿಡಿಸಿ ಹೇಳಬೇಕಾದ ಅಗತ್ಯವೇ ಇಲ್ಲ. ಅಭ್ಯರ್ಥಿಯು ತಾನು ಕೆಲಸಗಿಟ್ಟಿಸಿಕೊಳ್ಳಲು ಬೇಕಾಗಿರುವ ಹಲವು ಅರ್ಹತೆಗಳು (Qualifications) ಹಾಗೂ ಮಾನದಂಡಗಳಿಗನುಸಾರವಾಗಿ ಅಭ್ಯರ್ಥಿಯ (Candidate) ಅನುಭವ/ಕೌಶಲ್ಯಗಳ ಪರಿಚಯ ನೀಡುವುದೇ ಸಿವಿ ಅಥವಾ ರೆಸ್ಯೂಮ್ ಆಗಿದೆ. ಅಭ್ಯರ್ಥಿಯ ರೆಸ್ಯೂಮ್ ಎಷ್ಟು ಸ್ಟ್ರಾಂಗ್ (Strong) ಆಗಿರುತ್ತದೆಯೋ ಅದರ ಆಧಾರದ ಮೇಲೆ ಅವನು ಅಥವಾ ಅವಳಿಗೆ ಸಂದರ್ಶನಗಳಿಗೆ (Interview) ಕರೆ ಬರುವ ಸಾಧ್ಯತೆ ಅಷ್ಟೆ ಬಲವಾಗಿರುತ್ತದೆ. ಹಾಗಾದರೆ ಸ್ಟ್ರಾಂಗ್ ರೆಸ್ಯೂಮ್ ಎಂದರೇನು? ಅಭ್ಯರ್ಥಿಯು ತಮಗೆ ಬೇಕಾದವರು ಎಂದು ನೇಮಕಾತಿ (Recruitment) ಮಾಡುವವರಿಗೆ ಮನವರಿಕೆ ಮಾಡುವ ಎಲ್ಲಾ ಅಂಶಗಳನ್ನು ಪರಿಣಾಮಕಾರಿಯಾಗಿ ಒಳಗೊಂಡಿರುವ ರೆಸ್ಯೂಮ್ ಶಕ್ತಿಶಾಲಿಯಾಗಿರುತ್ತದೆ.

ನಿಮ್ಮ ರೆಸ್ಯೂಮ್ ನಿರ್ಣಾಯಕವಾಗಿದೆ ಮತ್ತು ಇತರೆ ಸಿವಿಗಳ ಮಧ್ಯೆ ಎದ್ದು ಕಾಣುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಅದರಲ್ಲಿ ಕೆಲವು ಉತ್ತಮ ಅಂಶಗಳನ್ನು ಸೇರಿಸಬೇಕಾಗಿದ್ದು ಅವು ಇಂತಿವೆ:

ರೆಸ್ಯೂಮ್‍ನಲ್ಲಿ ಇರಬೇಕಾದ ಪ್ರಮುಖ ಅಂಶಗಳು
 1) ನೀವು ನಿರ್ವಹಿಸಿರುವ ಪ್ರಾಜೆಕ್ಟುಗಳು ಮತ್ತು ಅವುಗಳ ಪ್ರಭಾವವನ್ನು ಸ್ಪಷ್ಟವಾಗಿ ಉಲ್ಲೇಖಿಸುವುದು. ಆದಾಗ್ಯೂ, ಪ್ರಾಮುಖ್ಯತೆಯನ್ನು ಅತಿಯಾಗಿ ಹೇಳಬೇಡಿ ಮತ್ತು ಅದನ್ನು ಸಾಧ್ಯವಾದಷ್ಟು ಸರಳವಾಗಿ ಮತ್ತು ನೈಜವಾಗಿ ಇರಿಸಿ

2) ನಿಮ್ಮ ಕೌಶಲ್ಯಗಳನ್ನು ಉಲ್ಲೇಖಿಸಿ ಮತ್ತು ನೀವು ತಾಂತ್ರಿಕವಾಗಿ ಹೇಗೆ ಮುಂದುವರಿದಿದ್ದೀರಿ ಎಂಬುದರ ನಿರ್ದಿಷ್ಟ ಘಟನೆಗಳ ಬಗೆಗಿನ ವಿವರಗಳನ್ನು ನೀಡಿ. ನಿಮ್ಮ ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಪ್ರತಿಬಿಂಬಿಸುವಂತಹ ಕೌಶಲ್ಯಗಳನ್ನು ನೀವು ಹೈಲೈಟ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

3) ಎಲ್ಲಕ್ಕಿಂತ ಹೆಚ್ಚಾಗಿ, ಬ್ಲಫ್ ಎಂದಿಗೂ ಮಾಡಬೇಡಿ! ನೀವು ಆಯ್ಕೆಯಾದರೂ, ಅದು ಹೊರ ಬಂದೇ ಬರುತ್ತದೆ. ಸಿವಿ ನಿಮ್ಮ ವೃತ್ತಿ ಭವಿಷ್ಯಕ್ಕೆ ಪ್ರವೇಶ ದ್ವಾರವಾಗಿದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ನಿಮ್ಮ ಸಿವಿಯನ್ನು ಮುಂದಿನ ಹಂತಕ್ಕೆ ತಳ್ಳುವ ಶಕ್ತಿಯನ್ನು ನೇಮಕಾತಿದಾರರು ಹೊಂದಿರುತ್ತಾರೆ. ಆದ್ದರಿಂದ ಪರಿಣಾಮಕಾರಿ ಮತ್ತು ಪ್ರಭಾವಶಾಲಿ ರೆಸ್ಯೂಮ್/ಸಿವಿಯನ್ನು ಮಾಡಲು ಮತ್ತು ಉದಾಹರಣೆಗಳು ಮತ್ತು ಡೇಟಾದೊಂದಿಗೆ ನಿಮ್ಮ ಯೋಗ್ಯತೆಗಳನ್ನು ಹೈಲೈಟ್ ಮಾಡುವುದು ಉತ್ತಮವಾಗಿದೆ.

ಇದನ್ನೂ ಓದಿ: NVS Recruitment: ನವೋದಯ ವಿದ್ಯಾಲಯ ಸಮಿತಿಯಲ್ಲಿ 1616 ಹುದ್ದೆಗಳ ನೇಮಕಾತಿ; ಬಿಎಡ್​ ಆದವರಿಗೆ ಅವಕಾಶ

ಪ್ರಬಲವಾದ ರೆಸ್ಯೂಮ್ ಉತ್ತಮವಾಗಿ ವ್ಯಾಖ್ಯಾನಿಸಲಾದ ಮತ್ತು ರಚನಾತ್ಮಕ ಸಂದರ್ಶನ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಈಗಾಗಲೇ ನೇಮಕಾತಿ ಮಾಡುವವರ ಸಮೀಕ್ಷೆ ಮಾಡಿದಾಗ ಕಂಡುಬಂದ ವಾಸ್ತವವೆಂದರೆ ಯಾರು ಚೆನ್ನಾಗಿ ಬರೆಯಲಾದ ರೆಸ್ಯೂಮ್ ಅನ್ನು ಹೊಂದಿರುತ್ತಾರೋ, ನೇಮಕಾತಿದಾರರು ಆ ವ್ಯಕ್ತಿಯೊಂದಿಗೆ ಮಾತನಾಡಲು ಇತರರಿಗಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚು ಆಸಕ್ತಿ ತೋರಿಸುವ ಸಾಧ್ಯತೆಯಿದೆ. ಇದು ಯಾಕೆ ಹೀಗೆ ಎಂಬ ಪ್ರಶ್ನೆ ಮೂಡಬಹುದು. ಇದಕ್ಕೆ ಉತ್ತರವೆಂದರೆ, ಎಲ್ಲಾ ನಿರ್ಣಾಯಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಉತ್ತಮ-ರಚನಾತ್ಮಕ ರೆಸ್ಯೂಮ್ ಅಭ್ಯರ್ಥಿಯ ವ್ಯಕ್ತಿತ್ವ, ಉದ್ಯೋಗ ಕುರಿತಾಗಿರುವ ಅವರ ಬದ್ಧತೆ ಮತ್ತು ಭವಿಷ್ಯದ ವೃತ್ತಿಜೀವನದ ಸಿದ್ಧತೆಯ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತದೆ ಹಾಗೂ ನೇಮಕಾತಿದಾರರು ಇದನ್ನು ಪ್ರಶಂಸಿಸುತ್ತಾರೆ.

ಇದರ ಬಗ್ಗೆ ಕೆಲವು ಕಥೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ:
2019 ರಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ಸಭೆಯಲ್ಲಿ ನುರಿತ ವುಕ್ತಿಯೋರ್ವರು ನೇಮಕಾತಿ ಮಾಡುವ ವ್ಯವಸ್ಥಾಪಕರ ಗುಂಪನ್ನು ಭೇಟಿಯಾಗಿದ್ದರು. ಅವರು ರೆಸ್ಯೂಮ್‍ಗಳ ಮೂಲಕ ಯಾರು ಆಯ್ಕೆಯಾಗಬಹುದು ಅಥವಾ ಯಾರು ಬರಿಗೈಯಲ್ಲಿ ಮರಳಬಹುದು ಎಂಬುದನ್ನು ನಿರ್ಧರಿಸುವವರಾಗಿದ್ದರು. ಆಗ ಆ ನುರಿತ ವ್ಯಕ್ತಿಗೆ ಕೇವಲ ಕಾಗದದ ಹಾಳೆ ಅಥವಾ ಪಿಡಿಎಫ್ ಡಾಕ್ಯುಮೆಂಟ್ ಒಂದು ಕಂಪನಿಯ ಭವಿಷ್ಯವನ್ನು ಹೇಗೆ ನಿರ್ಧರಿಸಬಲ್ಲುದು ಎಂದು ಅಚ್ಚರಿಯಾಗಿತ್ತು.

ಇದನ್ನೂ ಓದಿ: Explained: ವಿದ್ಯಾರ್ಥಿಗಳೇ, ಯುನೈಟೆಡ್ ಸ್ಟೇಟ್ಸ್ ನಲ್ಲಿ ಕಾನೂನು ಸ್ಥಿತಿಯನ್ನು ನಿರ್ವಹಿಸುವುದು ಹೇಗೆ?

ಹೌದು, ಇದು ಕಂಪನಿಯ ಅದೃಷ್ಟ; ನೇಮಕಗೊಳ್ಳುವ ಆ ವ್ಯಕ್ತಿ ಕಂಪನಿಯಲ್ಲಿ ವ್ಯತ್ಯಾಸ ತರಬಹುದು! ಅಭ್ಯರ್ಥಿಯು ತಮ್ಮ ಪಾತ್ರವನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂಬುದು ರೆಸ್ಯೂಮ್‌ನಲ್ಲಿ ಹೆಚ್ಚು ಮುಖ್ಯವಾದುದು ಎಂದು ವ್ಯವಸ್ಥಾಪಕರು ಆ ನುರಿತ ವ್ಯಕ್ತಿಗೆ ತಿಳಿಸಿದರು. ರೆಸ್ಯೂಮ್ ಅನ್ನು ಪರೀಕ್ಷಿಸಲು ಹೈರಿಂಗ್ ಮ್ಯಾನೇಜರ್ಸ್ ಗಳಿಗೆ ಕೆಲವೇ ನಿಮಿಷಗಳು ಇರುವಾಗ ಅವರು ಹೇಗೆ ಅದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆ ವ್ಯಕ್ತಿ ವ್ಯವಸ್ಥಾಪಕರನ್ನು ಕೇಳಿದ್ದರು.

ಅದಕ್ಕೆ ಹೈರಿಂಗ್ ಮ್ಯಾನೇಜರ್ಸ್ ನೀಡಿದ ಉತ್ತರ ಹೀಗಿತ್ತು
1. ಸಂದರ್ಶಕರು ಮೊದಲು ಅದರಲ್ಲಿರುವ ಆಲೋಚನೆಯ ಸ್ಪಷ್ಟತೆಯನ್ನು ನೋಡುತ್ತಾರೆ. ಮುಂದಿನ ಸುತ್ತಿಗೆ ಪ್ರವೇಶಿಸುವ 43% ಅಭ್ಯರ್ಥಿಗಳು ಅಂತಹ ರೆಸ್ಯೂಮ್‌ಗಳನ್ನು ಹೊಂದಿರುತ್ತಾರೆ.

2. ವಿವರವಾದ ರೆಸ್ಯೂಮ್ ಆತ್ಮವಿಶ್ವಾಸವನ್ನು ತುಂಬುತ್ತದೆ, ಅಭ್ಯರ್ಥಿಯು ಸಂದರ್ಶಕರೊಂದಿಗೆ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ, ಇದರ ಪರಿಣಾಮವಾಗಿ 71% ರಷ್ಟು ಪರಿಣಾಮಕಾರಿಯಾಗಿ ಅಭ್ಯರ್ಥಿಯು ಸಂದರ್ಶನವನ್ನು ಎದುರಿಸುತ್ತಾರೆ.

3. ಪೂರಕ ರಚನೆ: ನೀವು ವ್ಯವಸ್ಥಾಪಕ ಸ್ಥಾನಕ್ಕೆ ಅರ್ಜಿ ಸಲ್ಲಿಸುತ್ತಿದ್ದರೆ, ನೀವು ಯಾವಾಗಲೂ ನಿರ್ವಹಣೆ ಅಥವಾ ಅದಕ್ಕೆ ಸಂಬಂಧಿಸಿದ ಪ್ರಮುಖ ಅನುಭವವನ್ನು ರೆಸ್ಯೂಮ್ ಒಳಗೊಂಡಿರಬೇಕು. ಉದಾಹರಣೆಗೆ, ನೀವು ಕಾಲೇಜು ಕ್ಲಬ್ ಮ್ಯಾನೇಜರ್ ಆಗಿದ್ದರೆ, ಫುಟ್‍ಬಾಲ್ ತಂಡದ ನಾಯಕನಾಗಿದ್ದರೆ ಅಥವಾ ಸಮಾನವಾದ ಪಾತ್ರವನ್ನು ಹೊಂದಿದ್ದರೆ, ಆ ಬಗ್ಗೆ ಸ್ಪಷ್ಟ ಮಾಹಿತಿ ಇರಬೇಕು.

ಇದನ್ನೂ ಓದಿ:  Explained: ಅಮೆರಿಕಾದಲ್ಲಿ ಕಾಲೇಜು ಓದುತ್ತಲೇ ವಿದ್ಯಾರ್ಥಿಗಳು ಕೆಲಸ ಮಾಡಬಹುದೇ?

ಯಾಕೆ ಈ ಎಲ್ಲವನ್ನು ನಮೂದಿಸಬೇಕು?
ಏಕೆಂದರೆ ನೀವು ಈ ಹಿಂದೆ ನಿಯಮಗಳನ್ನು ಅಷ್ಟಾಗಿ ಪಾಲಿಸದವರನ್ನೊಳಗೊಂಡ ತಂಡಗಳನ್ನು ಮುನ್ನಡೆಸುವಲ್ಲಿ ಉತ್ತಮ ಅನುಭವವನ್ನು ಹೊಂದಿದ್ದೀರಿ ಎಂದು ಇದು ಸೂಚಿಸುತ್ತದೆ. ಅಲ್ಲದೆ ಇದರ ಅರ್ಥ ನೀವು ಈ ರೀತಿ ವಿವರಗಳನ್ನು ನೀಡಿರುವಾಗ ನಿಮ್ಮ ಮುಂದೆ ಇತರರು ಉದ್ಯೋಗ ಪಡೆದುಕೊಳ್ಳುವುದು ಸಾಧ್ಯವಿಲ್ಲ ಎಂದಲ್ಲ ಬದಲಾಗಿ ಆ ವಿವರಗಳು ನಿಮ್ಮ ಆಯ್ಕೆಯ ಅವಕಾಶಗಳನ್ನು ಹೆಚ್ಚಿಸುತ್ತವೆ ಎಂಬುದನ್ನು ಇದು ಸರಳವಾಗಿ ಸೂಚಿಸುತ್ತದಷ್ಟೆ.
Published by:Ashwini Prabhu
First published: