DGCA Recruitment: ಕನ್ಸಲ್ಟೇಂಟ್​ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ 65000 ರೂ ವೇತನ

ಒಟ್ಟು 58 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

58 ಹುದ್ದೆಗಳ ನೇಮಕಾತಿ

58 ಹುದ್ದೆಗಳ ನೇಮಕಾತಿ

  • Share this:
    ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್​ನಲ್ಲಿ (Directorate General of Civil Aviation) ಕನ್ಸಲ್ಟೇಂಟ್​ (Consultant) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 58 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ದೇಶದ ಯಾವುದೇ ಮೂಲೆಯಲ್ಲಿ ಕೆಲಸ ಮಾಡಲು ಸಿದ್ದರಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 18 ಆಗಿದೆ.

    ಈ ಹುದ್ದೆಗಳನ್ನು ತಾತ್ಕಾಲಿಕವಾಗಿ, ನಿರ್ದಿಷ್ಠ ಅವಧಿಗೆ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(DGCA)
    ಹುದ್ದೆಯ ಹೆಸರು: ಕನ್ಸಲ್ಟಂಟ್​​
    ಹುದ್ದೆಗಳ ಸಂಖ್ಯೆ: 58
    ಉದ್ಯೋಗ ಸ್ಥಳ: ಅಖಿಲ ಭಾರತ
    ವೇತನ: 55000-75000 ರೂ. ಮಾಸಿಕ













































    ಹುದ್ದಹುದ್ದೆ ಸಂಖ್ಯೆವಿದ್ಯಾರ್ಹತೆವೇತನ
    ಸಲಹೆಗಾರ (ಅಪಾಯಕಾರಿ ಸರಕುಗಳ ಇನ್ಸ್ಪೆಕ್ಟರ್)3ಪದವಿ65000 ರೂ ಮಾಸಿಕ
    ಸಲಹೆಗಾರ {ಉಪ ನಿರ್ದೇಶಕ (ಕಾರ್ಯಾಚರಣೆ)}1ಬಿಎಸ್ಸಿ, ಇಂಜಿನಿಯರಿಂಗ್​ ಪದವಿ65000 ರೂ ಮಾಸಿಕ
    ಏರೋಡ್ರೋಮ್ ಸ್ಟಾಂಡರ್ಡ್​​ ಸಲಹೆಗಾರರು14ಡಿಜಿಸಿಎ ನೇಮಕಾತಿ ಪ್ರಕಾರ65000 ರೂ ಮಾಸಿಕ
    ಸಲಹೆಗಾರರು (ಸಹಾಯಕ ನಿರ್ದೇಶಕರು)2ಕಾನೂನು ಪದವಿ65000 ರೂ ಮಾಸಿಕ
    ಸಲಹೆಗಾರರು (ಕಾನೂನು ಅಧಿಕಾರಿ)2ಕಾನೂನು ಪದವಿ65000 ರೂ ಮಾಸಿಕ
    ಸಲಹೆಗಾರರು (ವಾಯುಯೋಗ್ಯತೆ)27ಫಿಸಿಕ್ಸ್​, ಮ್ಯಾಥ್ಸ್​ನಲ್ಲಿ ಪದವಿ75000 ರೂ ಮಾಸಿಕ

    ವಯಸ್ಸಿನ ಮಿತಿ: ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 63 ವರ್ಷಗಳು ಮೀರಿರಬಾರದು.

    ವಯೋಮಿತಿ ಸಡಿಲಿಕೆ:
    ನಾಗರಿಕ ವಿಮಾನಯಾನ ನಿಯಮಗಳ ಮಹಾನಿರ್ದೇಶನಾಲಯದ ಪ್ರಕಾರ

    ಇದನ್ನು ಓದಿ: ಕೆಪಿಎಸ್​ಸಿ ಗ್ರೂಪ್​ 'ಸಿ' ಹುದ್ದೆಗೆ ಅರ್ಜಿ ಸಲ್ಲಿಸಿ; ಇಲ್ಲಿದೆ ಸಂಪೂರ್ಣ ಮಾಹಿತಿS

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01 ಆಗಸ್ಟ್​​ 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18 ಆಗಸ್ಟ್ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: dgca.nic.in

    ಅರ್ಜಿ ಸಲ್ಲಿಕೆ ವಿಳಾಸ
    ನೇಮಕಾತಿ ವಿಭಾಗ, DGCA ಎದುರು. ಸಫ್ದರ್‌ಜಂಗ್ ವಿಮಾನ ನಿಲ್ದಾಣ, ಅರಬಿಂದೋ ಮಾರ್ಗ, ನವದೆಹಲಿ - 110003

    ಇದನ್ನು ಓದಿ: ಪ್ರವಾಸೋದ್ಯಮ ಸಂಸ್ಥೆಯಲ್ಲಿದೆ ವಿವಿಧ ಮ್ಯಾನೇಜರ್​ ಹುದ್ದೆ; ಮಾಸಿಕ 50000 ರೂ ವೇತನ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ

    - ಆನ್‌ಲೈನ್ ಮೋಡ್ ಮೂಲಕ ನಿಗದಿತ ಅರ್ಜಿಯನ್ನು ಡೌನ್​ ಲೋಡ್​ ಮಾಡಿ. ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

    ಆನ್‌ಲೈನ್‌ನಲ್ಲಿ ಲಾಗ್​ ಇನ್​ ಆಗಿ. ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಮೇಲಿನ ವಿಳಾಸಕ್ಕೆ ಸ್ಪೀಡ್​ ಅಥವಾ ರಿಜಿಸ್ಟರ್​ ಪೋಸ್ಟ್​ ಮೂಲಕ ನಿಗದಿತ ದಿನಾಂಕಕ್ಕೆ ಮುನ್ನ ಕಳುಹಿಸಬೇಕಿದೆ.
    Published by:Seema R
    First published: