• Home
  • »
  • News
  • »
  • jobs
  • »
  • Government Job: ಧಾರವಾಡ ಜಿಲ್ಲಾ ಪಂಚಾಯತ್​ನಲ್ಲಿ 15 ಹುದ್ದೆಗಳು ಖಾಲಿ, ತಿಂಗಳಿಗೆ ₹ 38,000 ಸಂಬಳ

Government Job: ಧಾರವಾಡ ಜಿಲ್ಲಾ ಪಂಚಾಯತ್​ನಲ್ಲಿ 15 ಹುದ್ದೆಗಳು ಖಾಲಿ, ತಿಂಗಳಿಗೆ ₹ 38,000 ಸಂಬಳ

2 ಹುದ್ದೆಗೆ ನೇರ ಸಂದರ್ಶನ

2 ಹುದ್ದೆಗೆ ನೇರ ಸಂದರ್ಶನ

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 10, 2022.

  • Share this:

Dharwad Zilla Panchayat Recruitment 2022: ಧಾರವಾಡ ಜಿಲ್ಲಾ ಪಂಚಾಯತ್(Dharwad Zilla Panchayat)​ನಲ್ಲಿ ಒಟ್ಟು 15 ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಧಾರವಾಡದಲ್ಲಿ ಸರ್ಕಾರಿ ಉದ್ಯೋಗ(Government Job) ಅರಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಕೋ-ಆರ್ಡಿನೇಟರ್, ಡಾಟಾ ಎಂಟ್ರಿ ಆಪರೇಟರ್ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 10, 2022. ಹೆಚ್ಚಿನ ಮಾಹಿತಿಗಾಗಿ dharwad.nic.in ಗೆ ಭೇಟಿ ನೀಡಬಹುದು.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಧಾರವಾಡ ಜಿಲ್ಲಾ ಪಂಚಾಯತ್
ಹುದ್ದೆಯ ಹೆಸರುಕೋ-ಆರ್ಡಿನೇಟರ್, ಡಾಟಾ ಎಂಟ್ರಿ ಆಪರೇಟರ್ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್
ಒಟ್ಟು ಹುದ್ದೆಗಳು15
ವಿದ್ಯಾರ್ಹತೆಬಿಇ/ಬಿ.ಟೆಕ್/ಎಂಬಿಎ/ಬಿಎಸ್ಸಿ/PUC/ಪದವಿ/ಸ್ನಾತಕೋತ್ತರ ಪದವಿ
ಉದ್ಯೋಗದ ಸ್ಥಳಧಾರವಾಡ
ವೇತನ:ಮಾಸಿಕ ₹ 16,724-38,000
ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ24/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ10/02/2022


ಹುದ್ದೆಯ ಮಾಹಿತಿ:
ಸಹಾಯಕ ಜಿಲ್ಲಾ ಸಮನ್ವಯ ಅಧಿಕಾರಿ -1
ಜಿಲ್ಲಾ ಐಇಸಿ ಸಂಯೋಜಕರು -1
ತಾಲೂಕು ಎಂಐಎಸ್ ಸಂಯೋಜಕರು-3
ತಾಲೂಕು ಐಇಸಿ ಸಂಯೋಜಕರು- 2
ತಾಲೂಕು ಸಂಯೋಜಕರು- 2
ಡೇಟಾ ಎಂಟ್ರಿ ಆಪರೇಟರ್ (DEO)- 2
ತಾಂತ್ರಿಕ ಸಹಾಯಕರು (ಕೃಷಿ)- 1
ತಾಂತ್ರಿಕ ಸಹಾಯಕರು (ಅರಣ್ಯ)- 2
ತಾಲೂಕು ತಾಂತ್ರಿಕ ಸಹಾಯಕ (ಸಿವಿಲ್)- 1


ಇದನ್ನೂ ಓದಿ: Western Railway Recruitment 2022: ಪಿಯುಸಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ, ತಿಂಗಳಿಗೆ 45 ಸಾವಿರ ಸಂಬಳ


ವಿದ್ಯಾರ್ಹತೆ:
ಸಹಾಯಕ ಜಿಲ್ಲಾ ಸಮನ್ವಯ ಅಧಿಕಾರಿ -ಬಿಇ/ಬಿ.ಟೆಕ್​/ಎಂಬಿಎ/ಸ್ನಾತಕೋತ್ತರ ಪದವಿ
ಜಿಲ್ಲಾ ಐಇಸಿ ಸಂಯೋಜಕರು -ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ
ತಾಲೂಕು ಎಂಐಎಸ್ ಸಂಯೋಜಕರು-ಬಿಸಿಎ, ಬಿಎಸ್ಸಿ
ತಾಲೂಕು ಐಇಸಿ ಸಂಯೋಜಕರು- ಪದವಿ, MSW
ತಾಲೂಕು ಸಂಯೋಜಕರು- ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್
ಡೇಟಾ ಎಂಟ್ರಿ ಆಪರೇಟರ್ (DEO)- ಪಿಯುಸಿ
ತಾಂತ್ರಿಕ ಸಹಾಯಕರು (ಕೃಷಿ)- ಬಿಎಸ್ಸಿ(ಅಗ್ರಿಕಲ್ಚರ್)
ತಾಂತ್ರಿಕ ಸಹಾಯಕರು (ಅರಣ್ಯ)- ಬಿಎಸ್ಸಿ(ಫಾರೆಸ್ಟ್ರಿ)
ತಾಲೂಕು ತಾಂತ್ರಿಕ ಸಹಾಯಕ (ಸಿವಿಲ್)- ಸಿವಿಲ್ ಎಂಜಿನಿಯರಿಂಗ್​ನಲ್ಲಿ ಬಿಇ/ಬಿ.ಟೆಕ್


ಅನುಭವ:
ಸಹಾಯಕ ಜಿಲ್ಲಾ ಸಮನ್ವಯ ಅಧಿಕಾರಿ, ಜಿಲ್ಲಾ ಐಇಸಿ ಸಂಯೋಜಕರು, ತಾಲೂಕು ಎಂಐಎಸ್ ಸಂಯೋಜಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 5 ವರ್ಷ ಅನುಭವ ಹೊಂದಿರಬೇಕು.


ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 3 ವರ್ಷ ಅನುಭವ ಹೊಂದಿರಬೇಕು.


ವಯೋಮಿತಿ:
ಧಾರವಾಡ ಜಿಲ್ಲಾ ಪಂಚಾಯತ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು 21-40 ವರ್ಷದೊಳಗಿರಬೇಕು.


ಇದನ್ನೂ ಓದಿ: NHPC recruitment 2022: ತಿಂಗಳಿಗೆ ₹ 1.20 ಲಕ್ಷ ಸಂಬಳ, 133 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ


ವೇತನ:
ಸಹಾಯಕ ಜಿಲ್ಲಾ ಸಮನ್ವಯ ಅಧಿಕಾರಿ -ಮಾಸಿಕ ₹ 38,000
ಜಿಲ್ಲಾ ಐಇಸಿ ಸಂಯೋಜಕರು -ಮಾಸಿಕ ₹ 23,000
ತಾಲೂಕು ಎಂಐಎಸ್ ಸಂಯೋಜಕರು-ಮಾಸಿಕ ₹ 18,000
ತಾಲೂಕು ಐಇಸಿ ಸಂಯೋಜಕರು- ಮಾಸಿಕ ₹ 18,000
ತಾಲೂಕು ಸಂಯೋಜಕರು- ಮಾಸಿಕ ₹ 29,000
ಡೇಟಾ ಎಂಟ್ರಿ ಆಪರೇಟರ್ (DEO)- ಮಾಸಿಕ ₹ 16,724
ತಾಂತ್ರಿಕ ಸಹಾಯಕರು (ಕೃಷಿ)- ಮಾಸಿಕ ₹ 24,000
ತಾಂತ್ರಿಕ ಸಹಾಯಕರು (ಅರಣ್ಯ)- ಮಾಸಿಕ ₹ 24,000
ತಾಲೂಕು ತಾಂತ್ರಿಕ ಸಹಾಯಕ (ಸಿವಿಲ್)- ಮಾಸಿಕ ₹ 24,000


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/02/2022


ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.


ಆಯ್ಕೆ ಪ್ರಕ್ರಿಯೆ:
ಮೆರಿಟ್​ ಲಿಸ್ಟ್​
ಅನುಭವ

Published by:Latha CG
First published: