DOT Recruitment: ದೂರಸಂಪರ್ಕ ಇಲಾಖೆಯಲ್ಲಿ ಡಿಗ್ರಿ ಆದವರಿಗೆ ಉದ್ಯೋಗಾವಕಾಶ; ತಿಂಗಳಿಗೆ 75 ಸಾವಿರ ರೂ ವೇತನ

ಬಿಇ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ಬೆಂಗಳೂರಿನ ದೂರಸಂಪರ್ಕ ಇಲಾಖೆಯಲ್ಲಿ ( Department of Telecommunication)  ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. 14 ರಿಸರ್ಚ್​ ಅಸೋಸಿಯೇಟ್ (Research Associate)​ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬಿಇ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 15 ಆಗಿದೆ.

    ಈ ಹುದ್ದೆಗಳನ್ನು ಎರಡು ವರ್ಷದ ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳ ಕಾರ್ಯ ಕ್ಷಮತೆ ಆಧಾರದ ಮೇಲೆ ಈ ಹುದ್ದೆಗಳ  ಮುಂದಿನ ಒಂದು ವರ್ಷಕ್ಕೆ ವಿಸ್ತರಿಸಲಾಗುವುದು. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.



























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಯ ಹೆಸರುದೂರಸಂಪರ್ಕ ಇಲಾಖೆ (DOT)
    ಹುದ್ದೆಯ ಹೆಸರುರಿಸರ್ಚ್ ಅಸೋಸಿಯೇಟ್
    ಹುದ್ದೆಗಳ ಸಂಖ್ಯೆ14
    ಉದ್ಯೋಗ ಸ್ಥಳಬೆಂಗಳೂರು
    ವೇತನ75000 ರೂ. ಪ್ರತಿ ತಿಂಗಳು

    ಶೈಕ್ಷಣಿಕ ಅರ್ಹತೆ:   ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಬೋರ್ಡ್‌ಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಲೆಕ್ಟ್ರಾನಿಕ್ಸ್​, ಕಮ್ಯುನಿಕೇಶನ್ಸ್, ಟೆಲಿಕಮ್ಯುನಿಕೇಶನ್ಸ್, ಮಾಹಿತಿ ತಂತ್ರಜ್ಞಾನ,ಎಲೆಕ್ಟ್ರಿಕಲ್ ಇಂಜಿನಿಯರಿಂಗ್  ಪದವಿಯನ್ನು ಪೂರ್ಣಗೊಳಿಸಿರಬೇಕು.

    ಇದನ್ನು ಓದಿ: ಸ್ಟೀಲ್​ ಅಥಾರಿಟಿ ಆಫ್​ ಇಂಡಿಯಾದಲ್ಲಿದೆ ಕೆಲಸ; ತಿಂಗಳಿಗೆ 50000 ರೂ ವೇತನ

    ವಯೋಮಿತಿ: ಟೆಲಿಕಮ್ಯುನಿಕೇಶನ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಪದವಿ ಅಭ್ಯರ್ಥಿಗಳು ಪದವೀಧರರಿಗೆ 28 ​​ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಬಿಇ ಮತ್ತು ಬಿಟೆಕ್​ ವಿದ್ಯಾರ್ಥಿಗಳು ಗರಿಷ್ಟ 30 ವರ್ಷ ಹಾಗೂ ಎಂಟೆಕ್​ ಮತ್ತು ಎಂಎಸ್​ ಅಭ್ಯರ್ಥಿಗಳು ಗರಿಷ್ಟ 32 ವರ್ಷಗಳು ಮೀರಿರಬಾರದು.

    ಅರ್ಜಿ ಸಲ್ಲಿಕೆ: ಆಫ್​ಲೈನ್​

    ಅರ್ಜಿ ಶುಲ್ಕ: ವಿನಾಯಿತಿ

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಅರ್ಜಿ ಸಲ್ಲಿಕೆ ವಿಳಾಸ
    ಅಸಿಸ್ಟೆಂಟ್ ಡೈರೆಕ್ಟರ್ ಜನರಲ್ , ಕೊಠಡಿ ಸಂಖ್ಯೆ  302, ನ್ಯಾಷನಲ್ ಸೆಂಟರ್ ಫಾರ್ ಕಮ್ಯುನಿಕೇಶನ್ ಸೆಕ್ಯುರಿಟಿ, 2 ನೇ ಮಹಡಿ, ಸಿಟಿ ಟೆಲಿಫೋನ್ ಎಕ್ಸ್‌ಚೇಂಜ್, ಸಂಪಂಗಿರಾಮ ನಗರ, ಬೆಂಗಳೂರು - 560027.

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05 ಸೆಪ್ಟೆಂಬರ್​​ 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಅಕ್ಟೋಬರ್ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: dot.gov.in

    ಇದನ್ನು ಓದಿ: ಎಸ್​ಬಿಐನಲ್ಲಿ 5008 ಜೆಎ ನೇಮಕಕ್ಕೆ ಅರ್ಜಿ ಆಹ್ವಾನ; ಕರ್ನಾಟಕಕ್ಕೆ 316 ಹುದ್ದೆ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    -ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಇತ್ಯಾದಿ ದಾಖಲೆಗಳನ್ನು ಅರ್ಜಿಯಲ್ಲಿ ದಾಖಲಿಸಿ

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ  ಮೇಲ್ಕಂಡ ವಿಳಾಸಕ್ಕೆ ಅರ್ಜಿಯನ್ನು ಸ್ಪೀಡ್​ ಪೋಸ್ಟ್​ ಅಥವಾ ರಿಜಿಸ್ಟರ್​ ಪೋಸ್ಟ್​ ಮೂಲಕ ನಿಗದಿತ ದಿನಾಂಕಕ್ಕೆ ತಲುಪುವಂತೆ ಸಲ್ಲಿಸಿ.
    Published by:Seema R
    First published: