Davangere University Recruitment: ದಾವಣಗೆರೆ ವಿವಿಯಲ್ಲಿ ಎಫ್​ಡಿಎ ಸೇರಿ ಹಲವು ಹುದ್ದೆ ನೇಮಕಾತಿ

ಆಸಕ್ತ ಮತ್ತು ಅರ್ಹ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 10 ಆಗಿದೆ.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ದಾವಣಗೆರೆ ವಿಶ್ವವಿದ್ಯಾಲಯದಲ್ಲಿ (Davangere University) ವಿವಿಧ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ದರ್ಜೆ ಸಹಾಯಕ, ಕಚೇರಿ ಅಧೀಕ್ಷಕರು ಸೇರಿದಂತೆ ಒಟ್ಟು 10 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 10 ಆಗಿದೆ.

    ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಕಲ್ಯಾಣ ಕರ್ನಾಟಕ ವೃಂದ ಮತ್ತು ಮಿಕ್ಕುಳಿದ ವೃಂದದಲ್ಲಿನ ಹುದ್ದೆಗಳು ಇವಾಗಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ವಿಶ್ವವಿದ್ಯಾಲಯದ ಹೆಸರು: ದಾವಣಗೆರೆ ವಿಶ್ವವಿದ್ಯಾಲಯ
    ಹುದ್ದೆಯ ಹೆಸರು: ಬೋಧಕೇತರ
    ಹುದ್ದೆಗಳ ಸಂಖ್ಯೆ: 10
    ಉದ್ಯೋಗ ಸ್ಥಳ: ದಾವಣಗೆರೆ
    ವೇತನ: 30350-97100 ರೂ. ಪ್ರತಿ ತಿಂಗಳು



























    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನ
    ಸಹಾಯಕ ರಿಜಿಸ್ಟ್ರಾರ್2ಸ್ನಾತಕೋತ್ತರ ಪದವಿ52650- 97100 ರೂ ಮಾಸಿಕ
    ಕಚೇರಿ ಅಧೀಕ್ಷಕರು2ಪದವಿ43100-83900 ರೂ ಮಾಸಿಕ
    ಪ್ರಥಮ ದರ್ಜೆ ಸಹಾಯಕ (FDA)6ಪದವಿ30350-58250 ರೂ ಮಾಸಿಕ

    ವಯೋಮಿತಿ: ದಾವಣಗೆರೆ ವಿಶ್ವವಿದ್ಯಾನಿಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

    ವಯೋಮಿತಿ ಸಡಿಲಿಕೆ:
    ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳು: 5 ವರ್ಷಗಳು
    ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 3 ವರ್ಷಗಳು

    ಇದನ್ನು ಓದಿ: ಅಮೆಜಾನ್​-ಫ್ಲಿಪ್​ ಕಾರ್ಟ್​​ನಲ್ಲಿ ಬೃಹತ್​ ನೇಮಕಾತಿ; 30000 ಹುದ್ದೆ ಭರ್ತಿಗೆ ಕ್ರಮ

    ಅರ್ಜಿ ಸಲ್ಲಿಕೆ: ಆಫ್​ಲೈನ್​

    ಅರ್ಜಿ ಶುಲ್ಕ
    ವಿಕಲಚೇತನ ದೃಷ್ಟಿದೋಷವುಳ್ಳ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
    ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳು: 500 ರೂ.
    ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳು: 1000 ರೂ.

    ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಅರ್ಜಿ ಸಲ್ಲಿಕೆ ವಿಳಾಸ

    ರಿಜಿಸ್ಟ್ರಾರ್, ದಾವಣಗೆರೆ ವಿಶ್ವವಿದ್ಯಾಲಯ, ಶಿವಗಂಗೋತ್ರಿ, ದಾವಣಗೆರೆ- 577007, ಕರ್ನಾಟಕ

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19 ಸೆಪ್ಟೆಂಬರ್​ 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18 ಅಕ್ಟೋಬರ್ 2022

    ಇದನ್ನು ಓದಿ: ಏರ್​ ಇಂಡಿಯಾದಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಇಲ್ಲಿದೆ ಸಂಪೂರ್ಣ ಮಾಹಿತಿ

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: davangereuniversity.ac.in

    ಅರ್ಜಿ ಸಲ್ಲಿಕೆ ಪ್ರಕ್ರಿಯೆ 

    -ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    -ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ. ಅದರ ಮಾಹಿತಿ ಅಪ್​ಲೋಡ್​ ಮಾಡಿ

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ
    Published by:Seema R
    First published: