ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ (Davangere DCC Bank) ವಿವಿಧ ಹುದ್ದೆಗಳ (Various Post Recruitment) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜೂನಿಯರ್ ಅಸಿಸ್ಟೆಂಟ್ (Junior Assistant), ಕಂಪ್ಯೂಟರ್ ಇಂಜಿನಿಯರ್ (Computer Engineer), ಕಂಪ್ಯೂಟರ್ ಆಪರೇಟರ್ (Computer Operator), ಅಟೆಂಡರ್ (Attender), ಡ್ರೈವರ್ (Driver) ಸೇರಿದಂತೆ ಒಟ್ಟು 48 ಹುದ್ದೆಗಳು ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್ 1, 2022 ಆಗಿದೆ.
ದಾವಣಗೆರೆ ಡಿಸಿಸಿ ಬ್ಯಾಂಕ್ನಲ್ಲಿ ಖಾಲಿ ಇರುವ ಹುದ್ದೆಗಳ ಅಧಿಸೂಚನೆ ಕುರಿತ ಮಾಹಿತಿ ಇಲ್ಲಿದೆ
ಹುದ್ದೆಗಳು |
ಹುದ್ದೆ ಸಂಖ್ಯೆ |
ಶೈಕ್ಷಣಿಕ ಮಾಹಿತಿ |
ವೇತನ |
ಜೂನಿಯರ್ ಅಸಿಸ್ಟೆಂಟ್/ ಫೀಲ್ಡ್ ಆಫೀಸರ್ |
29 |
ಪದವಿ |
30350-58250 ರೂ |
ಕಂಪ್ಯೂಟರ್ ಇಂಜಿನಿಯರ್ |
1 |
ಬಿಇ, ಎಂಸಿಎ |
33450-62600 ರೂ |
ಕಂಪ್ಯೂಟರ್ ಆಪರೇಟರ್ |
1 |
ಪಿಯುಸಿ, ಡಿಪ್ಲೋಮೊ ಇನ್ ಕಮರ್ಷಿಯಲ್ ಪ್ರಾಕ್ಟಿಸ್ |
30350-58250 ರೂ |
ಅಟೆಂಡರ್ |
16 |
ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕು |
23500-47650 ರೂ |
ಡ್ರೈವರ್ |
1 |
ಎಸ್ಎಸ್ಎಲ್ಸಿ |
27650-52650 ರೂ |
ವಯೋಮಿತಿ:
ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ತುಂಬಿರಬೇಕು. ಗರಿಷ್ಠ 35 ವರ್ಷಗಳನ್ನು ಮೀರಿರಬಾರದು.
ವಯಸ್ಸಿನ ಸಡಿಲಿಕೆ:
OBC, 2A, 2B, 3A ಮತ್ತು 3B ಅಭ್ಯರ್ಥಿಗಳು: 03 ವರ್ಷಗಳು
SC, ST ಅಭ್ಯರ್ಥಿಗಳು: 5 ವರ್ಷಗಳು
PWD ಅಭ್ಯರ್ಥಿಗಳು: 10 ವರ್ಷಗಳು
ಅರ್ಜಿ ಶುಲ್ಕ:
OC / OBC / 2A, 2B, 3A, 3B / DNC: ರೂ.1000 ರೂ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ನಿರ್ಗತಿಕ ವಿಧವೆ ಅಭ್ಯರ್ಥಿಗಳು: ರೂ.500 ರೂ
ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಡೆಬಿಟ್/ಕ್ರೆಡಿಟ್/ಆನ್ಲೈನ್ ಮೂಲಕ ನಿಗದಿತ ಶುಲ್ಕ + ಸೇವಾಶುಲ್ಕ ಪ್ರತ್ಯೇಕ ಪಾವತಿ ಮಾಡತಕ್ಕದ್ದು. ನಿಗದಿತ ಕೊನೆಯ ದಿನಾಂಕದ ನಂತರ ಪಾವತಿಸಲು ಅವಕಾಶವಿರುವುದಿಲ್ಲ.
ಇದನ್ನುಓದಿ :ಕೃಷಿ ಇಲಾಖೆಯಲ್ಲಿ 462 ಹುದ್ದೆಗಳು ಖಾಲಿ; ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು
ಆಯ್ಕೆ ವಿಧಾನ
ಪರೀಕ್ಷೆ (ಮೆರಿಟ್ ಪಟ್ಟಿ 1:5 ಅಂದರೆ, ಲಿಖಿತ ಪರೀಕ್ಷೆಯಲ್ಲಿ ಪಡೆದ ಸರಾಸರಿ ಅಂಕಗಳನ್ನು ಶೇ. 85% ಕ್ಕೆ ಇಳಿಸಿ, ಪ್ರಾಪ್ತವಾಗುವ ಅಂಕಗಳ ಜೊತೆಗೆ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಕೂಡಿಸಿ ಅರ್ಹತಾ ಪಟ್ಟಿಯನ್ನು ತಯಾರಿಸಿ, ಮೀಸಲಾತಿ ನಿಯಮಗಳನ್ನು ಅನುಸರಿಸಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು)
ಡ್ರೈವರ್ ಹುದ್ದೆಗೆ; ಡ್ರೈವಿಂಗ್ ಟೆಸ್ಟ್ ನಡೆಸಲಾಗುವುದು
ಇದನ್ನು ಓದಿ: ಚಿಕ್ಕಬಳ್ಳಾಪುರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ವಿಧಾನ:
www.ddccbank.co.in ಜಾಲತಾಣದಲ್ಲಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿಯನ್ನು ಯಾವುದೇ ಕಾರಣಕ್ಕೂ ಖುದ್ದಾಗಿ ಸಲ್ಲಿಸಲು ಅವಕಾಶ ಇಲ್ಲ.
ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 1 , 2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 1, 2022
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: ಜೂನ್ 1, 2022
ಪ್ರಮುಖ ಲಿಂಕ್ಗಳು
ಹುದ್ದೆ ಕುರಿತ ಅಧಿಕೃತ ಅಧಿಸೂಚನೆ ವಿವರಕ್ಕೆ:
ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ:
ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್:
ddccbank.co.in ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ