Dakshina Kannada ZP Recruitment: ದಕ್ಷಿಣ ಕನ್ನಡ ಜಿ. ಪಂನಲ್ಲಿ ಉದ್ಯೋಗಾವಕಾಶ; ಯಾವುದೇ ಪರೀಕ್ಷೆ ಇಲ್ಲ

ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ತಾಲೂಕಿನಲ್ಲಿ ಹುದ್ದೆಗಳು ಖಾಲಿ ಇದೆ.

ದಕ್ಷಿಣ ಕನ್ನಡ ಜಿ. ಪಂ ಉದ್ಯೋಗಾವಕಾಶ

ದಕ್ಷಿಣ ಕನ್ನಡ ಜಿ. ಪಂ ಉದ್ಯೋಗಾವಕಾಶ

  • Share this:
    ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್​ನಲ್ಲಿ ನೇಮಕಾತಿಗೆ (Dakshina Kannada Zilla Panchayat Recruitment) ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಮುಂದಾಗಲಾಗಿದ್ದು, ಇದಕ್ಕಾಗಿ ಜಿಲ್ಲಾ ಪಂಚಾಯತ್​ ಅರ್ಜಿ ಆಹ್ವಾನಿಸಿದೆ. ಒಟ್ಟು ಆರು ಹುದ್ದೆಗಳು ಖಾಲಿ ಇದ್ದು ಆರು ತಾಲೂಕಿನಲ್ಲಿ ತಲಾ ಒಂದು ಹುದ್ದೆ ಖಾಲಿ ಇದೆ. ಹೊರ ಗುತ್ತಿಗೆ ಆಧಾರದ ಮೇಲೆ ನರೇಗಾ ಯೋಜನೆ ಅಡಿ ಈ ಹುದ್ದೆ ಭರ್ತಿ ಆಗಲಿದೆ.

    ಎಲ್ಲೆಲ್ಲಿ ಹುದ್ದೆ ಖಾಲಿ (jobs in taluk)
    ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ತಾಲೂಕಿನಲ್ಲಿ ತಲಾ ಒಂದು ಹುದ್ದೆಯಂತೆ ಆರು ಹುದ್ದೆಗಳು ಖಾಲಿ ಇದೆ.













    ಹುದ್ದೆ ಹೆಸರು ವಿದ್ಯಾರ್ಹತೆ ವೇತನ
    ಆಡಳಿತ ಸಹಾಯಕರು ಬಿಕಾಂ ಪದವಿ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲಿಷ್​ ಕಂಪ್ಯೂಟರ್​ ಟೈಪಿಂಗ್​ನಲ್ಲಿ ಪರಿಣಿತಿ ಹೊಂದಿರಬೇಕು. 14,543.60 ರೂ ಮಾಸಿಕ ವೇತನ

    ವಯೋಮಿತಿ  (Age limit)

    ಅಭ್ಯರ್ಥಿ ಕನಿಷ್ಠ 21 ವರ್ಷ ಗರಿಷ್ಠ 35 ವರ್ಷ ಮೀರಿರಬಾರದು.

    ಆಯ್ಕೆ ಪ್ರಕ್ರಿಯೆ (selection Process)
    ನೇಮಕಾತಿ ಪ್ರಕ್ರಿಯೆನ್ನು ಕೇವಲ ಮೆರಿಟ್​ ಲಿಸ್ಟ್​ ಆಧಾರದ ಮೇಲೆ ನಡೆಸಲಾಗುವುದು

    ಇದನ್ನು ಓದಿ: ಕೊಡಗು ಸೈನಿಕ ಶಾಲೆಯಲ್ಲಿ ವಾರ್ಡನ್​, ಸಮಾಲೋಚಕರ ಹುದ್ದೆಗೆ ನೇಮಕಾತಿ; BA ಪದವೀಧರರಿಗೆ ಅವಕಾಶ

    ಅರ್ಜಿ ಶುಲ್ಕ (Application Fee)
    ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ನಿಗದಿಸದ ಹಿನ್ನಲೆ ಅಭ್ಯರ್ಥಿಗಳು ಶುಲ್ಕ ಭರಿಸುವಂತಿಲ್ಲ

    ಅರ್ಜಿ ಸಲ್ಲಿಕೆ ವಿಧಾನ (How To apply )
    ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು
    ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 10 ಆಗಿದೆ.

    ಇದನ್ನು ಓದಿ: NMPT Recruitment: BA, Bsc, Bcom ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು; ತಿಂಗಳಿಗೆ 40 ಸಾವಿರ ಸಂಬಳ

    ಅರ್ಜಿ ಸಲ್ಲಿಕೆ ಹೇಗೆ? (Apply instructions)
    ಮೊದಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ 2021 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ
    ಆನ್‌ಲೈನ್ ಅರ್ಜಿಯಲ್ಲಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ಸೇರಿದಂತೆ ಎಲ್ಲಾ ದಾಖಲೆಗಳ ಸ್ಕ್ಯಾನ್​ ಕಾಪಿಗಳನ್ನು ಭರ್ತಿ ಮಾಡಿ
    ಕೊನೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿ 2021 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸುವ ಸಬಿಟ್​​ ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ಸಂಖ್ಯೆಯನ್ನು ತಪ್ಪದೇ ಗುರುತು ಮಾಡಿಕೊಳ್ಳಿ

    ಪ್ರಮುಖ ಲಿಂಕ್​ಗಳು (important Links) 
    ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿಯ ಅಧಿಸೂಚನೆ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್​ ಮಾಡಿ
    ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್​ ಮಾಡಿ
    Published by:Seema R
    First published: