ಕೇಂದ್ರೀಯ ಮೀಸಲು ಪೊಲೀಸ್ ಪಡೆ(Central Reserve Police Force) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 60 ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು(General Duties Medical Officer- GDMO) ಮತ್ತು ವಿಶೇಷ ವೈದ್ಯಕೀಯ ಅಧಿಕಾರಿ(Special Medical Officer- SMO) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ(Walk-In-Interview) ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಕೇಂದ್ರೀಯ ಮೀಸಲು ಪೊಲೀಸ್ ಪಡೆ |
ಹುದ್ದೆಯ ಹೆಸರು |
ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು(ಜಿಡಿಎಂಒ) ಮತ್ತು ವಿಶೇಷ ವೈದ್ಯಕೀಯ ಅಧಿಕಾರಿ(ಎಸ್ಎಮ್ಒ) |
ಒಟ್ಟು ಹುದ್ದೆಗಳು |
60 |
ಆಯ್ಕೆ ವಿಧಾನ |
ಸಂದರ್ಶನ |
ವಿದ್ಯಾರ್ಹತೆ |
ಎಂಬಿಬಿಎಸ್ ಪದವಿ, ಸ್ನಾತಕೋತ್ತರ ಪದವಿ/ಡಿಪ್ಲೋಮಾ, ಪಿಜಿ ಡಿಪ್ಲೋಮಾ |
ವಯೋಮಿತಿ |
70 ವರ್ಷದೊಳಗಿನರಾಗಿರಬೇಕು. |
ಸಂಬಳ |
ಮಾಸಿಕ ₹75,000 -85,000 |
ಸಂದರ್ಶನದ ದಿನಾಂಕ |
ನವೆಂಬರ್ 22 &29, 2021 |
ಭಾರತದಾದ್ಯಂತ ಸಿಆರ್ಪಿಎಫ್/ಬಿಎನ್ಎಸ್/ಸಂಸ್ಥೆಗಳ ಸಂಯೋಜಿತ ಆಸ್ಪತ್ರೆಗಳಲ್ಲಿ ಪೂರ್ಣ ಸಮಯದ ಆಧಾರದ ಮೇಲೆ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಈ ಹುದ್ದೆಗಳಿಗೆ ನೇರ ಸಂದರ್ಶನವು ನವೆಂಬರ್ 22, 2021 ಮತ್ತು ನವೆಂಬರ್ 29, 2021 ರಂದು ಬೆಳಿಗ್ಗೆ 9:00 ರಿಂದ ನಡೆಯಲಿದೆ. ನೇಮಕಾತಿ ಬಗೆಗೆ ಇನ್ನಷ್ಟು ಮಾಹಿತಿ ಪಡೆಯಲು ಮುಂದೆ ಓದಿ.
ವಿದ್ಯಾರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆ/ಬೋರ್ಡ್ನಿಂದ ಎಂಬಿಬಿಎಸ್ ಪದವಿ, ಸ್ನಾತಕೋತ್ತರ ಪದವಿ/ಡಿಪ್ಲೋಮಾ, ಪಿಜಿ ಡಿಪ್ಲೋಮಾ ಪಡೆದಿರಬೇಕು.
CRPF ನೇಮಕಾತಿ 2021 ಖಾಲಿ ಹುದ್ದೆಗಳ ವಿವರ :
ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು (ಜಿಡಿಎಂಒ) - 31 ಹುದ್ದೆಗಳು
ವಿಶೇಷ ವೈದ್ಯಕೀಯ ಅಧಿಕಾರಿ (ಎಸ್ಎಮ್ಒ) - 29 ಹುದ್ದೆಗಳು ಒಟ್ಟು 60 ಹುದ್ದೆಗಳು
ಇದನ್ನೂ ಓದಿ:DRDO Recruitment 2021: ಡಿಆರ್ಡಿಒದಲ್ಲಿ 21 ಹುದ್ದೆಗಳು ಖಾಲಿ; BE, B. Tech ಪದವೀಧರರಿಗೆ ಅವಕಾಶ
CRPF ನೇಮಕಾತಿ 2021 ವಯೋಮಿತಿ :
ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿಯ ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು (ಜಿಡಿಎಂಒ) ಮತ್ತು ವಿಶೇಷ ವೈದ್ಯಕೀಯ ಅಧಿಕಾರಿ (ಎಸ್ಎಮ್ಒ) ಹುದ್ದೆಗಳಿಗೆ ನಡೆಸಲಾಗುತ್ತಿರುವ ಸಂದರ್ಶನಕ್ಕೆ ಹಾಜರಾಗಲು ಇಚ್ಚಿಸುವ ಅಭ್ಯರ್ಥಿಗಳು ನೇಮಕಾತಿ 2021 ಅಧಿಸೂಚನೆಯಲ್ಲಿ ತಿಳಿಸಿರುವಂತೆ ಗರಿಷ್ಟ 70 ವರ್ಷ ವಯೋಮಿತಿಯೊಳಗಿರಬೇಕು.
CRPF ನೇಮಕಾತಿ 2021 ವೇತನ :
ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿಯ ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು (ಜಿಡಿಎಂಒ) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 75,000/-ರೂ ಮತ್ತು ವಿಶೇಷ ವೈದ್ಯಕೀಯ ಅಧಿಕಾರಿ (ಎಸ್ಎಮ್ಒ) ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 85,000/-ರೂ ವೇತನವನ್ನು ನೀಡಲಾಗುವುದು.
CRPF ನೇಮಕಾತಿ 2021 ಆಯ್ಕೆ ಪ್ರಕ್ರಿಯೆ :
ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿಯ ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು (ಜಿಡಿಎಂಒ) ಮತ್ತು ವಿಶೇಷ ವೈದ್ಯಕೀಯ ಅಧಿಕಾರಿ (ಎಸ್ಎಮ್ಒ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನವೆಂಬರ್ 22 ಮತ್ತು ನವೆಂಬರ್ 29,2021ರಂದು ಬೆಳಿಗ್ಗೆ 9 ರಿಂದ ನಡೆಯುವ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
CRPF ನೇಮಕಾತಿ 2021 ಅರ್ಜಿ ಶುಲ್ಕ :
ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿಯ ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು (ಜಿಡಿಎಂಒ) ಮತ್ತು ವಿಶೇಷ ವೈದ್ಯಕೀಯ ಅಧಿಕಾರಿ (ಎಸ್ಎಮ್ಒ) ಹುದ್ದೆಗಳಿಗೆ ನಡೆಸಲಾಗುತ್ತಿರುವ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಅರ್ಜಿ ಶುಲ್ಕದ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಅಧಿಸೂಚನೆಯನ್ನು ಓದಬಹುದು.
ಇದನ್ನೂ ಓದಿ:Sainik School Recruitment 2021: ಕಲಾಕೂಟಂ ಸೈನಿಕ ಶಾಲೆಯಲ್ಲಿ ವಿವಿಧ ಹುದ್ದೆಗಳು ಖಾಲಿ, ತಿಂಗಳಿಗೆ ₹47,600 ಸಂಬಳ
CRPF ನೇಮಕಾತಿ 2021 ಅರ್ಜಿ ಸಲ್ಲಿಕೆ :
ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿಯ ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು (ಜಿಡಿಎಂಒ) ಮತ್ತು ವಿಶೇಷ ವೈದ್ಯಕೀಯ ಅಧಿಕಾರಿ (ಎಸ್ಎಮ್ಒ) ಹುದ್ದೆಗಳ ನೇರ ಸಂದರ್ಶನಕ್ಕೆ ಹಾಜರಾಗಲು ಇಚ್ಚಿಸುವ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿಕೊಂಡು ನವೆಂಬರ್ 22 ಮತ್ತು ನವೆಂಬರ್ 29,2021ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ