CPRI Recruitment 2022: ಮುಖ್ಯ ಆಡಳಿತಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ (Central Power Research Institute) ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದ ಅಡಿಯಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕೆಲಸ ಮಾಡಬೇಕು ಎಂಬ ಕನಸು ಹೊಂದಿರುವ ಜನರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಈ ಅವಕಾಶವನ್ನು ಬಳಸಿಕೊಂಡು ಒಳ್ಳೆಯ ಕೆಲಸವನ್ನು ನಿಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮೇ 2ರ ಮೊದಲು ಆಫ್ಲೈನ್(Offline)ನಲ್ಲಿ ಅರ್ಜಿ ಹಾಕಬಹುದು.
ಯಾವುದೇ ಹುದ್ದೆಗೆ ಅರ್ಜಿ ಹಾಕುವಾಗ ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡಿರುವುದು ಬಹಳ ಮುಖ್ಯ. ಹಾಗಾಗಿ ಹುದ್ದೆಗೆ ಸಂಬಂಧಪಟ್ಟ ವೇತನ, ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸಲು ಕೊನೆಯ ದಿನ ಸೇರಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಸಂಸ್ಥೆಯ ಹೆಸರು |
ಕೇಂದ್ರೀಯ ಶಕ್ತಿ ಸಂಶೋಧನಾ ಸಂಸ್ಥೆ (CPRI) |
ಹುದ್ದೆಗಳ ಸಂಖ್ಯೆ |
1 |
ಉದ್ಯೋಗ ಸ್ಥಳ |
ಬೆಂಗಳೂರು - ಕರ್ನಾಟಕ |
ಹುದ್ದೆಯ ಹೆಸರು |
ಮುಖ್ಯ ಆಡಳಿತಾಧಿಕಾರಿ |
ವೇತನ |
ರೂ.78800-209200/- ಪ್ರತಿ ತಿಂಗಳು |
ಶೈಕ್ಷಣಿಕ ಅರ್ಹತೆ |
B.A, B.Sc, B.Com, BBA, ಪದವಿ, BBM, ಬ್ಯಾಚುಲರ್ ಆಫ್ ಲಾ |
ಅನುಭವ |
12 ವರ್ಷ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
02-05-2022 |
ಅರ್ಜಿ ಕಳುಹಿಸುವ ವಿಳಾಸ |
ಮುಖ್ಯ ಆಡಳಿತಾಧಿಕಾರಿ, ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್, ಪ್ರೊ. ಸರ್ ಸಿ.ವಿ. ರಾಮನ್ ರಸ್ತೆ, ಅಂಚೆ ಪೆಟ್ಟಿಗೆ ಸಂಖ್ಯೆ: 8066, ಸದಾಶಿವನಗರ (P.O), ಬೆಂಗಳೂರು - 560080 |
ವೆಬ್ಸೈಟ್ |
ಇಲ್ಲಿ ಕ್ಲಿಕ್ ಮಾಡಿ |
ಖಾಲಿ ಇರುವ 1 ಮುಖ್ಯ ಆಡಳಿತಾಧಿಕಾರಿ ಹುದ್ದೆಯ ಭರ್ತಿಗೆ ಕೇಂದ್ರೀಯ ಶಕ್ತಿ ಸಂಶೋಧನಾ ಸಂಸ್ಥೆ ಅರ್ಜಿ ಆಹ್ವಾನಿಸಿದ್ದು, B.A, B.Sc, B.Com, BBA, ಪದವಿ, BBM, ಬ್ಯಾಚುಲರ್ ಆಫ್ ಲಾ, LLB, ACS ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. 12 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಮೇ2 ರ ಒಳಗೆ ಆಫ್ಲೈನ್ ಮೂಲಕ ಅರ್ಜಿ ಹಾಕಬಹುದಾಗಿದ್ದು, ಆಯ್ಕೆಯಾದವರಿಗೆ ತಿಂಗಳಿಗೆ ರೂ.78800-209200/- ವೇತನ ನೀಡಲಾಗುತ್ತದೆ.
ಸಂಸ್ಥೆಯ ಹೆಸರು: ಕೇಂದ್ರೀಯ ಶಕ್ತಿ ಸಂಶೋಧನಾ ಸಂಸ್ಥೆ (CPRI)
ಹುದ್ದೆಗಳ ಸಂಖ್ಯೆ: 1
ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
ಹುದ್ದೆಯ ಹೆಸರು: ಮುಖ್ಯ ಆಡಳಿತಾಧಿಕಾರಿ
ವೇತನ: ರೂ.78800-209200/- ಪ್ರತಿ ತಿಂಗಳು
ಶೈಕ್ಷಣಿಕ ಅರ್ಹತೆ: CPRI ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು B.A, B.Sc, B.Com, BBA, ಪದವಿ, BBM, ಬ್ಯಾಚುಲರ್ ಆಫ್ ಲಾ, LLB, ACS ಅನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: ಎಂಜಿನಿಯರಿಂಗ್ ಆಗಿದ್ರೆ ಇಲ್ಲಿದೆ ಅವಕಾಶ - ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಹಾಕಿ
ಅನುಭವದ ವಿವರಗಳು
ಅಭ್ಯರ್ಥಿಗಳು ಕೇಂದ್ರ ಸರ್ಕಾರ/ಕೇಂದ್ರ ಸ್ವಾಯತ್ತ ಸಂಸ್ಥೆಗಳು/ ಶಾಸನಬದ್ಧ ಸಂಸ್ಥೆಗಳ ನಿರ್ವಹಣೆ/ಆಡಳಿತದಲ್ಲಿ ಒಟ್ಟಾರೆ 12 ವರ್ಷಗಳ ಅನುಭವವನ್ನು ಹೊಂದಿರಬೇಕು ಮತ್ತು ಉತ್ತಮ ಮೌಖಿಕ ಮತ್ತು ಲಿಖಿತ ಸಂವಹನ ಕೌಶಲ್ಯಗಳೊಂದಿಗೆ ಕೇಂದ್ರ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳು ಇತ್ಯಾದಿಗಳ ಜ್ಞಾನವನ್ನು ಹೊಂದಿರಬೇಕು.
ವಯಸ್ಸಿನ ಮಿತಿ: ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಸಿಪಿಆರ್ಐ ನೇಮಕಾತಿ ಮಾನದಂಡಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.
ವಯಸ್ಸಿನ ಸಡಿಲಿಕೆ: ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಆಫ್ಲೈನ್ನಲ್ಲಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಮುಖ್ಯ ಆಡಳಿತಾಧಿಕಾರಿ, ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್, ಪ್ರೊ. ಸರ್ ಸಿ.ವಿ. ರಾಮನ್ ರಸ್ತೆ, ಅಂಚೆ ಪೆಟ್ಟಿಗೆ ಸಂಖ್ಯೆ: 8066, ಸದಾಶಿವನಗರ (P.O), ಬೆಂಗಳೂರು - 560080 ಗೆ ಕಳುಹಿಸಬೇಕು.
ವೆಬ್ಸೈಟ್: cpri.in
ಪ್ರಮುಖ ದಿನಾಂಕಗಳು:
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 02-04-2022
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-05-2022
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಕಳುಹಿಸುವ ವಿಳಾಸ
ಮುಖ್ಯ ಆಡಳಿತಾಧಿಕಾರಿ,
ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್,
ಪ್ರೊ. ಸರ್ ಸಿ.ವಿ. ರಾಮನ್ ರಸ್ತೆ,
ಅಂಚೆ ಪೆಟ್ಟಿಗೆ ಸಂಖ್ಯೆ: 8066,
ಸದಾಶಿವನಗರ (P.O), ಬೆಂಗಳೂರು
- 560080
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ