Job Alert: ನೀವು ಶ್ವಾನ ಪ್ರಿಯರೇ? ನಾಯಿಯನ್ನು ಸಂತೋಷವಾಗಿಟ್ಟರೆ ತಿಂಗಳಿಗೆ ಸಿಗಲಿದೆ 2 ಲಕ್ಷ ರೂ. ಸಂಬಳ!

Chief Puppy Officer: 9 ಗಂಟೆಯಿಂದ 5 ಗಂಟೆಯವರೆಗೆ ಶ್ವಾನಗಳನ್ನು ನೋಡಿಕೊಳ್ಳಬೇಕು. 8 ಗಂಟೆಗಳ ಕಾಲ ಶ್ವನವನ್ನು ಸಂತೋಷವಾಗಿ ಇಡಬೇಕು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ನೀವು ಶ್ವಾನ ಪ್ರಿಯರೇ? ನಾಯಿ ಸಾಕುತ್ತಿದ್ದೀರಾ? ಹಾಗಿದ್ದರೆ ಇಲ್ಲೊಂದು ಉದ್ಯೋಗವಿದೆ. ತಿಂಗಳಿಗೆ 2 ಲಕ್ಷದಷ್ಟು ಎಣಿಸುವ ಅವಕಾಶವನ್ನು ಕಂಪನಿಯೊಂದು ಕಲ್ಪಿಸಿದೆ.

    ಟೀಮ್ಸ್​ ಡಾಗ್ಸ್​  ವರದಿಯ ಪ್ರಕಾರ, ಕಂಪನಿಯೋಂದು ನಾಯಿಗಳನ್ನು ಆಟ ಆಡಿಸುವುದಕ್ಕೆ ತಿಂಗಳಿಗೆ 2 ಲಕ್ಷ ವೇತನವನ್ನು ನೀಡುತ್ತಿದೆ. ಚೀಫ್​ ಪಪ್ಪಿ ಆಫೀಸರ್​ ಹುದ್ದೆಗಾಗಿ Yappy.com ಸೈಟ್​ ಅಭ್ಯರ್ಥಿಯನ್ನ ಹುಡುಕುತ್ತಿದೆ. ಮಾತ್ರವಲ್ಲದೆ ಕೈ ತುಂಬ ಸಂಬಳವನ್ನು ನೀಡುತ್ತಿದೆ. ಅದರಲ್ಲೂ ಶ್ವಾನ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಕೆಲಸವಾಗಿದೆ.

    9 ಗಂಟೆಯಿಂದ 5 ಗಂಟೆಯವರೆಗೆ ಶ್ವಾನಗಳನ್ನು ನೋಡಿಕೊಳ್ಳಬೇಕು. 8 ಗಂಟೆಗಳ ಕಾಲ ಶ್ವನವನ್ನು ಸಂತೋಷವಾಗಿ ಇಡಬೇಕು. ಅದಕ್ಕೆ ಬೇಕಾದ ಆಟಿಕೆ ವಸ್ತುಗಳನ್ನು ನೀಡಬೇಕು. ಜೊತೆಗೆ ಶ್ವಾನದ ಬಗ್ಗೆ ರಿಸರ್ಚ್​ ಕೂಡ ಮಾಡಬೇಕಿದೆ.

    ಚೀಫ್​ ಪಪ್ಪಿ ಆಫೀಸರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 2 ಲಕ್ಷ ತಿಂಗಳ ವೇತನ ನೀಡಲಾಗುತ್ತದೆ. ಅಂದರೆ ವರ್ಷಕ್ಕೆ 24 ಲಕ್ಷ ರೂ ಎಣಿಸಬಹುದಾಗಿದೆ. ಶ್ವಾನವನ್ನು ಸಂತೋಷವಾಗಿಡುವ ಪರಿಣತಿ ಹೊಂದಿದವರಿಗೆ ಈ ಹುದ್ದೆಗೆ ಸೇರಿಕೊಳ್ಳುವ ಅವಕಾಶವಿದೆ.

    ಪ್ರಪಂಚದಲ್ಲಿ ವಿಚಿತ್ರ ಹುದ್ದೆಗಳಿಗೆ. ಅದರ ಸಾಲಿಗೆ ಈ ಹುದ್ದೆ ಕೂಡ ಸೇರುತ್ತದೆ. ಈಗಾಗಲೇ ಪ್ರಪಂಚದಲ್ಲಿ ನಿದ್ದೆ ಮಾಡುವ, ಸೊಳ್ಳೆಯಿಂದ ಕಡಿಸಿಕೊಳ್ಳುವ, ಸಿನಿಮಾ ವೀಕ್ಷಿಸುವ ಉದ್ಯೋಗಳಿವೆ. ಅದರಂತೆ ಇದೀಗ ಶ್ವಾನಗಳನ್ನು ಸಂತೋಷವಾಗಿಡುವ ಹುದ್ದೆ ಅದಕ್ಕೆ ಸೇರ್ಪಡೆಗೊಂಡಿದೆ.
    Published by:Harshith AS
    First published: