• Home
  • »
  • News
  • »
  • jobs
  • »
  • Coffee Board Recruitment: ಬೆಂಗಳೂರು ಕಾಫಿ ಬೋರ್ಡ್​ನಲ್ಲಿದೆ ಕೆಲಸ; ಡಿಗ್ರಿ ಆಗಿದ್ರೆ ಅರ್ಜಿ ಸಲ್ಲಿಸಿ

Coffee Board Recruitment: ಬೆಂಗಳೂರು ಕಾಫಿ ಬೋರ್ಡ್​ನಲ್ಲಿದೆ ಕೆಲಸ; ಡಿಗ್ರಿ ಆಗಿದ್ರೆ ಅರ್ಜಿ ಸಲ್ಲಿಸಿ

ಕಾಫಿ ಬೋರ್ಡ್

ಕಾಫಿ ಬೋರ್ಡ್

ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆ ಅರ್ಜಿ ಸಲ್ಲಿಕೆ, ನೇಮಕಾತಿ ಪ್ರಕ್ರಿಯೆ ಸೇರಿದಂತೆ ಇತರೆ ಮಾಹಿತಿ ಈ ಕೆಳಗಿನಂತಿದೆ.

  • Share this:

    ಬೆಂಗಳೂರಿನ ಕಾಫಿ ಬೋರ್ಡ್​​ ಆಫ್ ಇಂಡಿಯಾದಲ್ಲಿ (Coffee Board Of India) ವಿವಿಧ ನೇಮಕಾತಿಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ರೋಸ್ಟರ್, ಅಕೌಂಟೆಂಟ್ ಮತ್ತು ಸ್ಟೋರ್ಸ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವಾಣಿಜ್ಯ ಮತ್ತು ವಿಜ್ಞಾನ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಇಮೇಲ್​ ಮುಖಾಂತರ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 8 ಆಗಿದೆ.


    ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆ ಅರ್ಜಿ ಸಲ್ಲಿಕೆ, ನೇಮಕಾತಿ ಪ್ರಕ್ರಿಯೆ ಸೇರಿದಂತೆ ಇತರೆ ಮಾಹಿತಿ ಈ ಕೆಳಗಿನಂತಿದೆ.


    ಸಂಸ್ಥೆಯ ಹೆಸರು: ಕಾಫಿ ಬೋರ್ಡ್ ಆಫ್ ಇಂಡಿಯಾ (ಕಾಫಿ ಬೋರ್ಡ್)
    ಹುದ್ದೆಯ ಹೆಸರು: ರೋಸ್ಟರ್, ಅಕೌಂಟೆಂಟ್ ಮತ್ತು ಸ್ಟೋರ್ಸ್ ಮ್ಯಾನೇಜರ್
    ಹುದ್ದೆಗಳ ಸಂಖ್ಯೆ: 2
    ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
    ಸಂಬಳ: ರೂ.25000-30000 ರೂ ಪ್ರತಿ ತಿಂಗಳು

    ಹುದ್ದೆಹುದ್ದೆ ಸಂಖ್ಯೆವೇತನ
    ರೋಸ್ಟರ್​130 ಸಾವಿರ ಮಾಸಿಕ
    ಅಕೌಂಟೆಂಟ್ ಮತ್ತು ಸ್ಟೋರ್ಸ್ ಮ್ಯಾನೇಜರ್125 ಸಾವಿರ ಮಾಸಿಕ

    ವಿದ್ಯಾರ್ಹತೆ


    ರೋಸ್ಟರ್: ವಿಜ್ಞಾನ ಪದವಿ, ಕಾಫಿ ಗುಣಮಟ್ಟ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ
    ಅಕೌಂಟೆಂಟ್ ಮತ್ತು ಸ್ಟೋರ್ಸ್ ಮ್ಯಾನೇಜರ್: ಬಿಬಿಎಂ ಅಥವಾ ಬಿಕಾಂ ಪದವಿ ಹೊಂದಿರಬೇಕು.


    ವಯೋಮಿತಿ: ಕಾಫಿ ಬೋರ್ಡ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ 35 ವರ್ಷಗಳು ಮೀರಿರಬಾರದು.


    ಇದನ್ನು ಓದಿ: ರಾಜ್ಯ ಬೀಜ ನಿಗಮ ನಿಯಮಿತದಲ್ಲಿ ಹುದ್ದೆ; ಪದವಿ ಆದವರಿಗೆ ಅವಕಾಶ


    ವಯೋಮಿತಿ ಸಡಿಲಿಕೆ:
    ಭಾರತೀಯ ಕಾಫಿ ಮಂಡಳಿಯ ನಿಯಮಗಳ ಪ್ರಕಾರ


    ಅರ್ಜಿ ಸಲ್ಲಿಕೆ: ಆಫ್​ಲೈನ್​​ ಮತ್ತು ಇಮೇಲ್​ ​ ಮುಖಾಂತರ


    ಇಮೇಲ್​ ವಿಳಾಸ: prom.coffeeboard@gmail.com 


    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ


    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 29 ಜೂನ್​ 2022
    ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 08 ಜುಲೈ 2022


     ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: indiacoffee.org


    ಇದನ್ನು ಓದಿ: ಕೈಗಾ ಅಣು​ ಸ್ಥಾವರದಲ್ಲಿ ಟ್ರೇಡ್​ ಅಪ್ರೆಂಟಿಸ್​ಗಳ ನೇಮಕಾತಿ; ಐಟಿಐ ಆದವರಿಗೆ ಅವಕಾಶ


    ಅರ್ಜಿ ಸಲ್ಲಿಕೆ ವಿಧಾನ


    -ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.


    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳ ವಿವರಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಿ


    ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿದ ಬಳಿಕ ಅದನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ಮೇಲ್​ ಮಾಡಬಹುದಾಗಿದೆ. ಅಥವಾ ಈ ಕೆಳಕಂಡ ವಿಳಾಸಕ್ಕೆ ಸ್ಪೀಡ್​ ಅಥವಾ ರಿಜಿಸ್ಟಾರ್​ ಪೋಸ್ಟ್​ ಮೂಲಕವೂ ಕಳುಹಿಸಬಹುದಾಗಿದೆ.


    ವಿಳಾಸ


    ಹಿರಿಯ ಸಂಪರ್ಕಾಧಿಕಾರಿ (ಬಡ್ತಿ ಘಟಕ), ಎರಡನೇ ಮಹಡಿ, ಕಾಫಿ ಬೋರ್ಡ್, ನಂ.1, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು - 560001

    Published by:Seema R
    First published: