Coffee Boardನಲ್ಲಿ ಕೆಲಸ ಮಾಡೋ ಆಸಕ್ತಿ ಇದೆಯಾ? ಹಾಗಾದ್ರೆ ತಡ ಯಾಕೆ ಬೇಗ ಅಪ್ಲೈ ಮಾಡಿ

Job Alert: ಅಭ್ಯರ್ಥಿಗಳು ಆಹಾರ /ಸಂಶೋಧನಾ ಪ್ರಯೋಗಾಲಯದ ಕೆಲಸದ ಅನುಭವವನ್ನು ಹೊಂದಿರಬೇಕು ಮತ್ತು ಪ್ರಯೋಗಾಲಯ ಉಪಕರಣಗಳನ್ನು ನಿರ್ವಹಿಸುವಲ್ಲಿ ಮತ್ತು ಮಾದರಿ ತಯಾರಿಕೆಯಲ್ಲಿ ಅನುಭವವನ್ನು ಹೊಂದಿರಬೇಕು. 

2 ಹುದ್ದೆಗೆ ಅರ್ಜಿ ಹಾಕಿ

2 ಹುದ್ದೆಗೆ ಅರ್ಜಿ ಹಾಕಿ

  • Share this:
Coffee Board Recruitment 2022: ಕಾಫಿ ಬೋರ್ಡ್ ಆಫ್ ಇಂಡಿಯಾ (Coffee Board  of India) ತನ್ನ ಅಧಿಕೃತ ಅಧಿಸೂಚನೆಯ ಮೂಲಕ ತಾಂತ್ರಿಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದ (Government Of Karnataka) ಅಡಿ ಕೆಲಸ ಹುಡುಕುತ್ತಿರುವರಿಗೆ ಹಾಗೂ ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರಿಗೆ ಇದೊಂದು ನಿಜಕ್ಕೂ ಉತ್ತಮ ಅವಕಾಶವಾಗಿದ್ದು ಬಳಸಿಕೊಂಡು ಸರ್ಕಾರಿ ಕೆಲಸವನ್ನು ತಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಏಪ್ರಿಲ್​ 23ರ ಮೊದಲು ಇಮೇಲ್ ಅನ್ನು ಕಳುಹಿಸಬಹುದು. ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ... 











































ಸಂಸ್ಥೆಕಾಫಿ ಬೋರ್ಡ್ ಆಫ್ ಇಂಡಿಯಾ
ಹುದ್ದೆಗಳ ಸಂಖ್ಯೆ2
ಉದ್ಯೋಗ ಸ್ಥಳಬೆಂಗಳೂರು - ಕರ್ನಾಟಕ
ಹುದ್ದೆಯ ಹೆಸರುತಾಂತ್ರಿಕ ಸಹಾಯಕ
ವೇತನರೂ.20000/- ಪ್ರತಿ ತಿಂಗಳು
ಶೈಕ್ಷಣಿಕ ಅರ್ಹತೆಬಯೋಕೆಮಿಸ್ಟ್ರಿ,ಕೆಮಿಸ್ಟ್ರಿ, ಅನಾಲಿಟಿಕಲ್ ಇನ್‌ಸ್ಟ್ರುಮೆಂಟೇಶನ್‌ನಲ್ಲಿ M.Sc
ವಯೋಮಿತಿಗರಿಷ್ಠ 35 ವರ್ಷ
ಅರ್ಜಿ ಕಳುಹಿಸುವ ಇ-ಮೇಲ್​cqd.coffeeboard@gmail.com
ವೆಬ್​ಸೈಟ್​ಇಲ್ಲಿ ಕ್ಲಿಕ್ ಮಾಡಿ 
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ23-04-2022

ಬೆಂಗಳೂರಿನಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕ ಹುದ್ದೆಗಳ ಭರ್ತಿಗೆ ಕಾಫಿ ಬೋರ್ಡ್ ಆಫ್ ಇಂಡಿಯಾ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಬಯೋಕೆಮಿಸ್ಟ್ರಿ,ಕೆಮಿಸ್ಟ್ರಿ, ಅನಾಲಿಟಿಕಲ್ ಇನ್‌ಸ್ಟ್ರುಮೆಂಟೇಶನ್‌ನಲ್ಲಿ M.Sc ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರ ವಯಸ್ಸು 35 ವರ್ಷದ ಒಳಗಿರಬೆಕಿದ್ದು, ಆಯ್ಕೆಯಾದವರಿಗೆ ತಿಂಗಳಿಗೆ ರೂ.20000/- ವೇತನ ನೀಡಲಾಗುತ್ತದೆ.  ಇ-ಮೇಲ್​ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್​ 23ರ ತನಕ ಸಮಯವಿದೆ.

ಸಂಸ್ಥೆಯ ಹೆಸರು: ಕಾಫಿ ಬೋರ್ಡ್ ಆಫ್ ಇಂಡಿಯಾ

ಹುದ್ದೆಗಳ ಸಂಖ್ಯೆ: 2

ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ

ಹುದ್ದೆಯ ಹೆಸರು: ತಾಂತ್ರಿಕ ಸಹಾಯಕ

ವೇತನ: ರೂ.20000/- ಪ್ರತಿ ತಿಂಗಳು

ಶೈಕ್ಷಣಿಕ ಅರ್ಹತೆ: ಕಾಫಿ ಬೋರ್ಡ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಬೋರ್ಡ್‌ಗಳು ಅಥವಾ ವಿಶ್ವವಿದ್ಯಾಲಯಗಳಿಂದ ಬಯೋಕೆಮಿಸ್ಟ್ರಿ,ಕೆಮಿಸ್ಟ್ರಿ, ಅನಾಲಿಟಿಕಲ್ ಇನ್‌ಸ್ಟ್ರುಮೆಂಟೇಶನ್‌ನಲ್ಲಿ M.Sc ಪೂರ್ಣಗೊಳಿಸಿರಬೇಕು.

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಅನುಭವದ ವಿವರಗಳು

ಅಭ್ಯರ್ಥಿಗಳು ಆಹಾರ /ಸಂಶೋಧನಾ ಪ್ರಯೋಗಾಲಯದ ಕೆಲಸದ ಅನುಭವವನ್ನು ಹೊಂದಿರಬೇಕು ಮತ್ತು ಪ್ರಯೋಗಾಲಯ ಉಪಕರಣಗಳನ್ನು ನಿರ್ವಹಿಸುವಲ್ಲಿ ಮತ್ತು ಮಾದರಿ ತಯಾರಿಕೆಯಲ್ಲಿ ಅನುಭವವನ್ನು ಹೊಂದಿರಬೇಕು.

ವಯಸ್ಸಿನ ಮಿತಿ: ಕಾಫಿ ಬೋರ್ಡ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 23-04-2022 ರಂತೆ 35 ವರ್ಷಗಳು.

ವಯೋಮಿತಿ ಸಡಿಲಿಕೆ:

ಭಾರತೀಯ ಕಾಫಿ ಮಂಡಳಿಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ? 

ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, cqd.coffeeboard@gmail.com ಗೆ 23-04-2022 ರ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬಹುದು.

ವೆಬ್​ಸೈಟ್​:  indiacoffee.org  

ಇದನ್ನೂ ಓದಿ: ಎಂಜಿನಿಯರಿಂಗ್ ಆಗಿದ್ರೆ ಇಲ್ಲಿದೆ ಬಂಪರ್ ಆಫರ್ - 300 ಗ್ರಾಜುಯೇಟ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗೆ ಅರ್ಜಿ ಹಾಕಿ

ಪ್ರಮುಖ ದಿನಾಂಕಗಳು:

ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 31-03-2022

ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 23-04-2022
Published by:Sandhya M
First published: