Coal India Recruitment: 481 ಮ್ಯಾನೇಜ್​ಮೆಂಟ್​ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ; ಪದವಿ ಆದವರಿಗೆ ಅವಕಾಶ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ, ನೇಮಕಾತಿ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳಿಗೆ ಅಧಿಸೂಚನೆ

ಹುದ್ದೆಗಳಿಗೆ ಅಧಿಸೂಚನೆ

  • Share this:
    ಕೋಲ್​ ಇಂಡಿಯಾ ಲಿಮಿಟೆಡ್​ನಲ್ಲಿ (Coal India Limited) ಮ್ಯಾನೇಜ್​ಮೆಂಟ್​ ಟ್ರೈನಿ (Management Trainee) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 481 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಪದವಿ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 7 ಆಗಿದೆ. ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

    ತಾತ್ಕಲಿಕವಾಗಿ ಈ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ, ನೇಮಕಾತಿ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ.

    ಸಂಸ್ಥೆಯ ಹೆಸರು: ಕೋಲ್ ಇಂಡಿಯಾ ಲಿಮಿಟೆಡ್
    ಹುದ್ದೆಯ ಹೆಸರು: ಮ್ಯಾನೇಜ್‌ಮೆಂಟ್ ಟ್ರೈನಿ
    ಹುದ್ದೆಗಳ ಸಂಖ್ಯೆ: 481
    ಉದ್ಯೋಗ ಸ್ಥಳ: ಅಖಿಲ ಭಾರತ
    ವೇತನ: 50000-180000 ರೂ. ಪ್ರತಿ ತಿಂಗಳು
















































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆ
    ಸಿಬ್ಬಂದಿ ಮತ್ತು ಮಾನವ ಸಂಪನ್ಮೂಲ138ಮ್ಯಾನೇಜ್‌ಮೆಂಟ್/ಎಚ್​ಆರ್​/ಇಂಡಸ್ಟ್ರಿಯಲ್‌ನಲ್ಲಿ ಸ್ನಾತಕೋತ್ತರ ಪದವಿ
    ಪರಿಸರ68pದವಿ, ಪರಿಸರ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ
    ಮೆಟಿರಿಯಲ್​ ಮ್ಯಾನೇಜ್​ಮೆಂಟ್​​115ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ, ಎಂಬಿಎ, ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ
    ಮಾರ್ಕೆಟಿಂಗ್ ಮತ್ತು ಮಾರಾಟ17ಪದವಿ, ಎಂಬಿಎ, ಮ್ಯಾನೇಜ್‌ಮೆಂಟ್/ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ
    ಸಮುದಾಯ ಅಭಿವೃದ್ಧಿ79ಸಮುದಾಯ ಅಭಿವೃದ್ಧಿ/ಗ್ರಾಮೀಣಾಭಿವೃದ್ಧಿ/ಸಮುದಾಯದಲ್ಲಿ ಸ್ನಾತಕೋತ್ತರ ಪದವಿ
    ಕಾನೂನು54ಕಾನೂನು ವಿಷಯದಲ್ಲಿ ಪದವಿ
    ಸಾರ್ವಜನಿಕ ಸಂಪರ್ಕ6 ಪತ್ರಿಕೋದ್ಯಮ/ಮಾಸ್ ಕಮ್ಯುನಿಕೇಷನ್/ಸಾರ್ವಜನಿಕ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ
    ಕಂಪನಿ ಕಾರ್ಯದರ್ಶಿ4ಪದವಿಯ ಸಹವರ್ತಿ/ಫೆಲೋ ಸದಸ್ಯತ್ವದೊಂದಿಗೆ ಕಂಪನಿ ಕಾರ್ಯದರ್ಶಿ

    ವಯಸ್ಸಿನ ಮಿತಿ (Age Limit) : ಕೋಲ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 30 ವರ್ಷಗಳು ಮೀರಿರಬಾರದು

    ವಯೋಮಿತಿ ಸಡಿಲಿಕೆ (Age Exception) :
    ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
    ಪ.ಜಾ, ಪ,ಪಂ ಅಭ್ಯರ್ಥಿಗಳು: 05 ವರ್ಷಗಳು

    ಅರ್ಜಿ ಶುಲ್ಕ (Application Fees):
    ಪ.ಜಾ, ಪ.ಪಂ, ವಿಕಲಚೇತನ ಕೋಲ್ ಇಂಡಿಯಾ ಲಿಮಿಟೆಡ್‌ನ ಉದ್ಯೋಗಿಗಳು ಮತ್ತು ಅದರ ಅಂಗಸಂಸ್ಥೆ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ

    ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು: 1180 ರೂ

    ಇದನ್ನು ಓದಿ: ಬೀದರ್​ ಜಿಲ್ಲಾ ನ್ಯಾಯಾಲಯದಲ್ಲಿ 32 ಹುದ್ದೆಗಳಿಗೆ ನೇಮಕಾತಿ; ಪಿಯುಸಿ ಆದವರಿಗೆ ಅವಕಾಶ

    ಪಾವತಿ ವಿಧಾನ (Payment Method): ಆನ್‌ಲೈನ್

    ಆಯ್ಕೆ ಪ್ರಕ್ರಿಯೆ (Selection Process):
    ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ಪ್ರಾಥಮಿಕ ವೈದ್ಯಕೀಯ ಪರೀಕ್ಷೆ

    ಪ್ರಮುಖ ದಿನಾಂಕಗಳು (Important  Date):
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 08 ಜುಲೈ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಆಗಸ್ಟ್ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು (Notification Link)
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: coalindia.in

    ಇದನ್ನು ಓದಿ: ಅಗ್ನಿಪಥ ಯೋಜನೆ ಮೂಲಕ ಸೇನೆಯಲ್ಲಿ ಸೇವೆ ಸಲ್ಲಿಸಿ; ಇಲ್ಲಿದೆ ಅರ್ಜಿ ಸಲ್ಲಿಕೆ ಸಂಪೂರ್ಣ ವಿವರ

    ಅರ್ಜಿ ಸಲ್ಲಿಕೆ ವಿಧಾನ (How To Apply)

    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.

    ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ
    Published by:Seema R
    First published: