• ಹೋಂ
 • »
 • ನ್ಯೂಸ್
 • »
 • Jobs
 • »
 • CMTI Recruitment 2023: ತಿಂಗಳಿಗೆ 2 ಲಕ್ಷ ಸಂಬಳ- ಬೆಂಗಳೂರಿನಲ್ಲಿ ಉದ್ಯೋಗ, ಈಗಲೇ ಅಪ್ಲೈ ಮಾಡಿ

CMTI Recruitment 2023: ತಿಂಗಳಿಗೆ 2 ಲಕ್ಷ ಸಂಬಳ- ಬೆಂಗಳೂರಿನಲ್ಲಿ ಉದ್ಯೋಗ, ಈಗಲೇ ಅಪ್ಲೈ ಮಾಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಒಟ್ಟು 18 ಸೈಂಟಿಸ್ಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರಿನಲ್ಲಿ(Bengaluru) ಉದ್ಯೋಗ ಮಾಡಲು ಬಯಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

CMTI Recruitment 2023: ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್​ಸ್ಟಿಟ್ಯೂಟ್(Central Manufacturing Technology Institute) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 18 ಸೈಂಟಿಸ್ಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರಿನಲ್ಲಿ(Bengaluru) ಉದ್ಯೋಗ ಮಾಡಲು ಬಯಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಅಭ್ಯರ್ಥಿಗಳು ಇವತ್ತೇ ಅರ್ಜಿ ಸಲ್ಲಿಸಿ. ಅಭ್ಯರ್ಥಿಗಳು ಆನ್​ಲೈನ್​ / ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್​ಸ್ಟಿಟ್ಯೂಟ್
ಹುದ್ದೆಸೈಂಟಿಸ್ಟ್​
ಒಟ್ಟು ಹುದ್ದೆ18
ವಿದ್ಯಾರ್ಹತೆಪದವಿ, ಸ್ನಾತಕೋತ್ತರ ಪದವಿ, ಪಿಎಚ್​ ಡಿ
ಉದ್ಯೋಗದ ಸ್ಥಳಬೆಂಗಳೂರು
ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 5,  2023
ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 21, 2023

ಹುದ್ದೆಯ ಮಾಹಿತಿ:
ಸೈಂಟಿಸ್ಟ್​- ಬಿ - 13
ಸೈಂಟಿಸ್ಟ್​- ಸಿ- 3
ಸೈಂಟಿಸ್ಟ್​- ಡಿ-2


ವಿದ್ಯಾರ್ಹತೆ:
ಸೈಂಟಿಸ್ಟ್​- ಬಿ - ಪದವಿ, ಸ್ನಾತಕೋತ್ತರ ಪದವಿ, ಪಿಎಚ್​.ಡಿ, ಎಂಸಿಎ
ಸೈಂಟಿಸ್ಟ್​- ಸಿ- ಪದವಿ, ಸ್ನಾತಕೋತ್ತರ ಪದವಿ, ಪಿಎಚ್​.ಡಿ
ಸೈಂಟಿಸ್ಟ್​- ಡಿ- ಪದವಿ, ಸ್ನಾತಕೋತ್ತರ ಪದವಿ, ಪಿಎಚ್​.ಡಿ


ಇದನ್ನೂ ಓದಿ: Principal Jobs: ಪ್ರಥಮ ದರ್ಜೆ ಕಾಲೇಜುಗಳಿಗೆ ಪ್ರಾಂಶುಪಾಲರ ನೇಮಕಾತಿ- ಅರ್ಜಿ ಹಾಕಲು ನಾಳೆಯೇ ಕೊನೆ ದಿನ


ವಯೋಮಿತಿ:
ಸೈಂಟಿಸ್ಟ್​- ಬಿ - 32 ವರ್ಷ
ಸೈಂಟಿಸ್ಟ್​- ಸಿ- 35 ವರ್ಷ
ಸೈಂಟಿಸ್ಟ್​- ಡಿ- 40 ವರ್ಷ


ವಯೋಮಿತಿ ಸಡಿಲಿಕೆ:
SC/ST/ ಡಿಪಾರ್ಟ್​ಮೆಂಟಲ್ ಅಭ್ಯರ್ಥಿಗಳು- 5 ವರ್ಷ
ಒಬಿಸಿ ಅಭ್ಯರ್ಥಿಗಳು- 3 ವರ್ಷ
PWD ಅಭ್ಯರ್ಥಿಗಳು- 10 ವರ್ಷ


ಅರ್ಜಿ ಶುಲ್ಕ:
SC/ST/PWD/ಮಹಿಳಾ/ಮಾಜಿ ಸೈನಿಕ/ CMTI ಡಿಪಾರ್ಟ್​​ಮೆಂಟಲ್ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ.
ಒಬಿಸಿ ಅಭ್ಯರ್ಥಿಗಳು- 500 ರೂ.
ಜನರಲ್/ EWS ಅಭ್ಯರ್ಥಿಗಳು- 750 ರೂ.
ಪಾವತಿಸುವ ಬಗೆ- ಆನ್​ಲೈನ್​/ ಡಿಮ್ಯಾಂಡ್​ ಡ್ರಾಫ್ಟ್​


ಆಯ್ಕೆ ಪ್ರಕ್ರಿಯೆ:
ಕ್ವಾಲಿಫಿಕೇಶನ್
ಅನುಭವ
ಲಿಖಿತ ಪರೀಕ್ಷೆ
ಸಂದರ್ಶನ


ವೇತನ:
ಸೈಂಟಿಸ್ಟ್​- ಬಿ - ಮಾಸಿಕ ₹ 56,100-1,77,500
ಸೈಂಟಿಸ್ಟ್​- ಸಿ- ಮಾಸಿಕ ₹ 67,700- 2,08,700
ಸೈಂಟಿಸ್ಟ್​- ಡಿ- ಮಾಸಿಕ ₹78,800-2,09,200


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 5, 2023 (ಇಂದು)
ಅರ್ಜಿಯ ಹಾರ್ಡ್​ ಕಾಪಿಯನ್ನು ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 21, 2023


ವಿಳಾಸ:
ಅರ್ಜಿಯ ಹಾರ್ಡ್​ ಕಾಪಿಯನ್ನು ವಿಳಾಸ- " ಮುಖ್ಯ ಆಡಳಿತಾಧಿಕಾರಿ", ಕೇಂದ್ರೀಯ ಉತ್ಪಾದನಾ ತಂತ್ರಜ್ಞಾನ ಸಂಸ್ಥೆ, ತುಮಕೂರು ರಸ್ತೆ, ಬೆಂಗಳೂರು-560022 ಇಲ್ಲಿಗೆ ಫೆಬ್ರವರಿ 21ಕ್ಕೆ ಮುನ್ನ ಕಳುಹಿಸಬೇಕು.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು