Mega Recruitment: ಮೆಗಾ ಉದ್ಯೋಗ ನೇಮಕಾತಿ ಘೋಷಣೆ, 80,039 ಉದ್ಯೋಗ ಸೃಷ್ಟಿ..!

ಸರ್ಕಾರದ ಈ 11,103 ಸಿಬ್ಬಂದಿಗಳ ಕೆಲಸಗಳನ್ನು ಖಾಯಂ ಮಾಡುವಿಕೆ ಹಾಗೂ 80,039 ಉದ್ಯೋಗಗಳ ನೇಮಕಾತಿಯ ಕ್ರಮದಿಂದಾಗಿ ಸರ್ಕಾರಿ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ವರ್ಷಕ್ಕೆ 7,300 ಕೋಟಿ ರೂಪಾಯಿಗಳ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬುಧವಾರದಂದು ನಡೆದ ವಿಧಾನಸಭೆಯಲ್ಲಿ ಮಾತನಾಡುತ್ತ ಮುಖ್ಯಮಂತ್ರಿಯವರು ಈ ಘೋಷಣೆ ಮಾಡಿದ್ದಾರೆ.

ತೆಲಂಗಾಣ ಸಿಎಂ

ತೆಲಂಗಾಣ ಸಿಎಂ

  • Share this:

    ಈಗಾಗಲೇ ಭಾರತದ ಪ್ರತಿ ರಾಜ್ಯಗಳಲ್ಲಿ ನಿರುದ್ಯೋಗದ (Unemployment) ಸಮಸ್ಯೆ ಸಾಕಷ್ಟಿದೆ. ಅದರಂತೆ ತೆಲಂಗಾಣ (Telangana) ರಾಜ್ಯದಲ್ಲಿಯೂ ನಿರುದ್ಯೋಗದ ಸಮಸ್ಯೆ ಇದ್ದೇ ಇದೆ. ಇದೀಗ ನಿರುದ್ಯೋಗಿಗಳ ಸಮಸ್ಯೆಗಳಿಗೆ ಸ್ಪಂದಿಸಿರುವ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ತ್ವರಿತವಾಗಿ ಸರ್ಕಾರದಿಂದಲೇ ನೇರವಾಗಿ ನೇಮಕಾತಿಗಳನ್ನು (Recruitment) ಮಾಡುವ ಮೂಲಕ ಒಟ್ಟು 80,039 ಉದ್ಯೋಗಗಳನ್ನು ಒದಗಿಸುವುದಾಗಿ ಘೋಷಣೆ ಮಾಡಿದ್ದಾರೆ.ಇಷ್ಟೇ ಅಲ್ಲದೆ, ಮುಖ್ಯಂತ್ರಿಯವರು ಈಗಾಗಲೇ ಒಪ್ಪಂದದ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ 11,103 ಸಿಬ್ಬಂದಿಗಳ ಕೆಲಸಗಳನ್ನು ಖಾಯಂ ಮಾಡುವುದಾಗಿ ಘೋಷಿಸಿದ್ದು ಈ ಮೂಲಕ ಒಟ್ಟಾರೆಯಾಗಿ ತೆಲಂಗಾಣ ರಾಜ್ಯದ ವಿವಿಧ ಸರ್ಕಾರಿ ವಿಭಾಗಗಳಲ್ಲಿ 91,142 ಹುದ್ದೆಗಳು ಭರ್ತಿಯಾಗಲಿವೆ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅತಿ ಶೀಘ್ರದಲ್ಲೇ ನೋಟಿಫಿಕೇಶನ್ ಹೊರಡಿಸಲಾಗುತ್ತದೆ ಎಂದು ಹೇಳಲಾಗಿದೆ.


    ಸರ್ಕಾರದ ಈ 11,103 ಸಿಬ್ಬಂದಿಗಳ ಕೆಲಸಗಳನ್ನು ಖಾಯಂ ಮಾಡುವಿಕೆ ಹಾಗೂ 80,039 ಉದ್ಯೋಗಗಳ ನೇಮಕಾತಿಯ ಕ್ರಮದಿಂದಾಗಿ ಸರ್ಕಾರಿ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ವರ್ಷಕ್ಕೆ 7,300 ಕೋಟಿ ರೂಪಾಯಿಗಳ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬುಧವಾರದಂದು ನಡೆದ ವಿಧಾನಸಭೆಯಲ್ಲಿ ಮಾತನಾಡುತ್ತ ಮುಖ್ಯಮಂತ್ರಿಯವರು ಈ ಘೋಷಣೆ ಮಾಡಿದ್ದಾರೆ.


    ವಯೋಮಿತಿಯಲ್ಲಿ 10 ವರ್ಷಗಳಷ್ಟು ಸಡಿಲಿಕೆ

    ಈ ಸಂದರ್ಭದಲ್ಲಿ ಅವರು ಹೆಚ್ಚು ಸಂಖ್ಯೆಯಲ್ಲಿ ನಿರುದ್ಯೋಗಿಗಳು ಉದ್ಯೋಗಗಿಟ್ಟಿಸಿಕೊಳ್ಳಲು ಅನುಕೂಲವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳಷ್ಟು ಸಡಿಲಿಕೆಯನ್ನೂ ಸಹ ನೀಡುವುದಾಗಿ ಹೇಳಿದ್ದು ನಿರುದ್ಯೋಗಿಗಳಲ್ಲಿ ಹೆಚ್ಚಿನ ಸಂತಸ ಹಾಗೂ ಸಮಾಧಾನ ತಂದಿದೆ ಎಂತಲೂ ಹೇಳಬಹುದಾಗಿದೆ.


    ವಯಸ್ಸಿನ ನಿಗದಿ

    ವಯೋಮಿತಿಗೆ ಸಂಬಂಧಿಸಿದಂತೆ ಸಮವಸ್ತ್ರವಿರುವ ಪೊಲೀಸ್ ಇಲಾಖೆ ಒಂದನ್ನು ಹೊರತುಪಡಿಸಿದರೆ ಗರಿಷ್ಠ ವಯೋಮಿತಿಯು ಓಬಿಸಿಗೆ 44 ವರ್ಷ, ಎಸ್‌ಸಿ-ಎಸ್‌ಟಿ, ಬಿಸಿ ಅವರಿಗೆ 49 ವರ್ಷ, ವಿಕಲಚೇತನರಿಗೆ 54 ವರ್ಷ ಹಾಗೂ ಮಾಜಿ ಯೋಧರಿಗೆ 47 ವರ್ಷ ಎಂದು ನಿಗದಿಪಡಿಸಾಲಾಗಿದೆ ಎಂದು ತಿಳಿದುಬಂದಿದೆ.


    ಒಪ್ಪಂದದ ಆಧಾರದ ನೇಮಕಾತಿಗಳಿಲ್ಲ

    ಈ ಸಂದರ್ಭದಲ್ಲಿ ಮಾತನಾಡಿರುವ ಕೆಸಿಎನ್ ಅವರು ತೆಲಂಗಾಣ ರಾಜ್ಯ ನಿರ್ಮಾಣವಾಗುತ್ತಿದ್ದಂತೆಯೇ ಸರ್ಕಾರವು ಒಟ್ಟು 1,56,254 ಹುದ್ದೆಗಳಿಗೆ ಸೂಚನೆ ಹೊರಡಿಸಿದ್ದು ಅವುಗಳ ಪೈಕಿ 1,33,942 ಹುದ್ದೆಗಳ ನೇಮಕಾತಿಯನ್ನು ಮಾಡಿದೆ. ಇನ್ನುಳಿದಂತೆ 22,312 ಹುದ್ದೆಗಳು ಪ್ರಸಕ್ತ ನೇಮಕಾತಿಯ ಪ್ರಕ್ರಿಯೆಯಲ್ಲಿರುವುದಾಗಿ ತಿಳಿಸಿದರು.


    ಇದೇ ಸಂದರ್ಭದಲ್ಲಿ ಅವರು ತೆಲಂಗಾಣ ರಾಜ್ಯದ ಹೊಸ ನೀತಿಯ ಭಾಗವಾಗಿ ಇನ್ನು ಮುಂದೆ ರಾಜ್ಯದಲ್ಲಿ ಒಪ್ಪಂದದ ಆಧಾರದ ನೇಮಕಾತಿಗಳನ್ನು ಕೈಬಿಡುವುದಾಗಿ ನುಡಿದರು. ಈ ಸಂದರ್ಭದಲ್ಲಿ ವಿಧಾನಸಭೆಯ ಸದಸ್ಯರು ಚಪ್ಪಾಳೆ ಮೂಲಕ ಅವರ ನಿಲುವನ್ನು ಸ್ವಾಗತಿಸಿದರು.


    ನೋಟಿಫೈ ಮಾಡಿ ನೇಮಕಾತಿ

    ರಾಜ್ಯದ ಹೊಸ ನೀತಿಯ ಅನ್ವಯ ಇನ್ನುಮುಂದೆ ಮುಂಚಿತವಾಗಿಯೇ ಸರ್ಕಾರವು ಸರ್ಕಾರಿ ನೇಮಕಾತಿಯ ಅಧಿಸೂಚನೆ ಹೊರಡಿಸಿ ಪ್ರತಿ ವರ್ಷ ಭರ್ತಿ ಮಾಡಬೇಕಾಗಿರುವ ಹುದ್ದೆಗಳನ್ನು ನೋಟಿಫೈ ಮಾಡಿ ನೇಮಕಾತಿ ಮಾಡಿಕೊಳ್ಳಲಿದೆ.


    ಖಾಲಿ ಹುದ್ದೆಗಳ ಮಾಹಿತಿ

    ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಯವರಿಂದ ರಾಜ್ಯದ ಎಲ್ಲ ಸರ್ಕಾರಿ ವಿಭಾಗಗಳ ಕಾರ್ಯದರ್ಶಿ ಹಾಗೂ ಮುಖ್ಯಸ್ಥರಿಗೆ ತಮ್ಮ ತಮ್ಮ ಇಲಾಖೆ ಹಾಗೂ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿಗಳನ್ನು ಕಾಲಕಾಲಕ್ಕೆ ಸರಿಯಾಗಿ ನೀಡುವಂತೆ ಕಠಿಣವಾದ ಸೂಚನೆ ನೀಡಲಾಗಿದೆ. ಈ ಅಧಿಸೂಚನೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ನಿಮಿತ್ತ ಸಮಯಾವಕಾಶವಿರುವಂತೆ ಹೊರಡಿಸಲಾಗುವುದು ಎಂದು ತಿಳಿದುಬಂದಿದೆ.


    ಇದನ್ನೂ ಓದಿ: TCS Recruitment: ಎಂಜಿನಿಯರಿಂಗ್ ಆಗಿದ್ರೆ ಟಿಸಿಎಸ್​ ಕಂಪೆನಿಯಲ್ಲಿ ಉತ್ತಮ ಉದ್ಯೋಗಾವಕಾಶ

    "ನಮ್ಮದು ಉದ್ಯೋಗಿ ಸ್ನೇಹಿ ಸರ್ಕಾರವಾಗಿದೆ. ಪ್ರಸ್ತುತ ನಮ್ಮಲ್ಲಿರುವ ಒಪ್ಪಂದದ ಆಧಾರದ ಉದ್ಯೋಗ ಶೈಲಿಯು ನಮ್ಮ ಬಳುವಳಿಯಲ್ಲ, ಬದಲಾಗಿ ಇದನ್ನು ಅಮೆರಿಕದಿಂದ ಎರವಲು ಪಡೆಯಲಾಗಿದೆ, ಇದು ನಿಜಕ್ಕೂ ಅನಪೇಕ್ಷಿತ. ಹಾಗಾಗಿ ಇದಕ್ಕೆ ಇತಿಶ್ರೀ ಹಾಡಲು ನಮ್ಮ ಸರ್ಕಾರ ಬಯಸಿದ್ದು ಹಂತ ಹಂತವಾಗಿ ಇದನ್ನು ತೆಗೆಯಲಾಗುವುದು" ಎಂದು ತೆಲಂಗಾಣ ಮುಖ್ಯಮಂತ್ರಿಯಾದ ಕೆ. ಚಂದ್ರಶೇಖರ್ ರಾವ್‌ ಸ್ಪಷ್ಟವಾಗಿ ಘೋಷಣೆ ಮಾಡಿದರು.


    ಇದನ್ನೂ ಓದಿ: Cognizant Recruitment: ಪ್ರೆಶರ್​ಗಳಿಗೆ ಉತ್ತಮ ಅವಕಾಶ- ಐಟಿ ಕಂಪೆನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಹಾಕಿ

    ಇನ್ನು, ಆಂಧ್ರಪ್ರದೇಶ ಪುನರ್‌ರಚನೆ ಕಾಯ್ದೆಗೆ ಸಂಬಂಧಿಸಿದಂತೆ ಆ ಮೂಲಕ ಉದ್ಭವವಾಗುವ ಸಮಸ್ಯೆಗಳ ಬಗೆಹರಿಸುವಿಕೆಗೆ ಬದ್ಧರಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ನೇಮಕಾತಿಗಳ ವಿಚಾರಕ್ಕೆ ಪ್ರಥಮ ಅದ್ಯತೆ ನೀಡಲಾಗುವುದೆಂದು ಕೆಸಿಎನ್ ಅವರ ಸರ್ಕಾರ ಇದೇ ಸಂದರ್ಭದಲ್ಲಿ ಹೇಳಿದೆ.


    ನೇಮಕಾತಿ ವಿವರ


    ಗ್ರೂಪ್ - ನೇರ ನೇಮಕಾತಿ ಹುದ್ದೆಗಳು


    ಗ್ರೂಪ್ I - 503


    ಗ್ರೂಪ್ II - 582


    ಗ್ರೂಪ್ III - 1,373


    ಗ್ರೂಪ್ IV - 9,168

    Published by:Divya D
    First published: