CIMAP Recruitment 2022: ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹ 31,000 ಸಂಬಳ

ಜನವರಿ 18 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಜನವರಿ 21ರಂದು ಸಂದರ್ಶನ(Walk-in-Interview) ನಡೆಯಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
CIMAP Recruitment 2022: ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಮತ್ತು ಆರೊಮ್ಯಾಟಿಕ್ ಪ್ಲಾಂಟ್ಸ್ (Central Institute of Medicinal & Aromatic Plants) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್ ಮತ್ತು ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 18 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಜನವರಿ 21ರಂದು ಸಂದರ್ಶನ(Walk-in-Interview) ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ cimap.res.in ಗೆ ಭೇಟಿ ನೀಡಿ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.







































ಸಂಸ್ಥೆಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಮತ್ತು ಆರೊಮ್ಯಾಟಿಕ್ ಪ್ಲಾಂಟ್ಸ್
ಹುದ್ದೆಯ ಹೆಸರುಪ್ರಾಜೆಕ್ಟ್​ ಅಸೋಸಿಯೇಟ್ ಮತ್ತು ಜೂನಿಯರ್ ರಿಸರ್ಚ್​ ಫೆಲೋ
ಒಟ್ಟು ಹುದ್ದೆಗಳು2
ವಿದ್ಯಾರ್ಹತೆಎಂಟೆಕ್, ಎಂಎಸ್ಸಿ, ಎಂಎಸ್​
ಉದ್ಯೋಗದ ಸ್ಥಳಬೆಂಗಳೂರು
ವೇತನಮಾಸಿಕ 25,000-31,000
ನೋಟಿಫಿಕೇಶನ್ ಬಿಡುಗಡೆ ದಿನಾಂಕ09/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ18/01/2022
ಸಂದರ್ಶನ ನಡೆಯುವ ದಿನಾಂಕ21/01/2022



ಹುದ್ದೆಯ ಮಾಹಿತಿ:
ಪ್ರಾಜೆಕ್ಟ್​ ಅಸೋಸಿಯೇಟ್-1
ಜೂನಿಯರ್ ರಿಸರ್ಚ್​ ಫೆಲೋ-1

ಇದನ್ನೂ ಓದಿ: TCS Jobs 2022: MBA ಫ್ರೆಶರ್ಸ್​ ನೇಮಕಕ್ಕೆ ಅರ್ಜಿ ಆಹ್ವಾನಿಸಿದ TCS, Apply ಮಾಡಲು 2 ದಿನ ಅಷ್ಟೇ ಬಾಕಿ

ವಿದ್ಯಾರ್ಹತೆ:
ಪ್ರಾಜೆಕ್ಟ್​ ಅಸೋಸಿಯೇಟ್- ಎಂ.ಟೆಕ್, ಎಂ.ಎಸ್ಸಿ
ಜೂನಿಯರ್ ರಿಸರ್ಚ್​ ಫೆಲೋ- ಎಂ.ಎಸ್ಸಿ, ಎಂ.ಫಾರ್ಮಾ, ಎಂಎಸ್​

ಅನುಭವ
ಪ್ರಾಜೆಕ್ಟ್​ ಅಸೋಸಿಯೇಟ್-ಅಭ್ಯರ್ಥಿಗಳು ಜೈವಿಕ ತಂತ್ರಜ್ಞಾನ/ ಆಣ್ವಿಕ ಜೀವಶಾಸ್ತ್ರ/ ಅಂಗಾಂಶ ಕೃಷಿ ತಂತ್ರಗಳಲ್ಲಿ ಕೆಲಸದ ಅನುಭವವನ್ನು ಹೊಂದಿರಬೇಕು.

ಜೂನಿಯರ್ ರಿಸರ್ಚ್​ ಫೆಲೋ- ಅಭ್ಯರ್ಥಿಗಳು ನೈಸರ್ಗಿಕ ಉತ್ಪನ್ನ ರಸಾಯನಶಾಸ್ತ್ರ / ಸಸ್ಯ ದ್ವಿತೀಯಕ ಚಯಾಪಚಯ ಕ್ರಿಯೆಯ ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರಬೇಕು.

ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 09/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18/01/2022
ಸಂದರ್ಶನ ನಡೆಯುವ ದಿನಾಂಕ: 21/01/2022

ಇದನ್ನೂ ಓದಿ: RCF Recruitment 2022: SSLC, ITI ಪಾಸಾದವರಿಗೆ ರೈಲ್​ ಕೋಚ್​ ಫ್ಯಾಕ್ಟರಿಯಲ್ಲಿ ಉದ್ಯೋಗ

ವಯೋಮಿತಿ:
ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಮತ್ತು ಆರೊಮ್ಯಾಟಿಕ್ ಪ್ಲಾಂಟ್ಸ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷಗಳು.

ವಯೋಮಿತಿ ಸಡಿಲಿಕೆ:
ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಮತ್ತು ಆರೊಮ್ಯಾಟಿಕ್ ಪ್ಲಾಂಟ್ಸ್ ನಾರ್ಮ್ಸ್ ಪ್ರಕಾರ, ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ಆನ್​ಲೈನ್ ಸಂದರ್ಶನ
Published by:Latha CG
First published: