• Home
 • »
 • News
 • »
 • jobs
 • »
 • Nursing Job: ನರ್ಸಿಂಗ್​ ಅಭ್ಯರ್ಥಿಗಳಿಗೆ ಬಂಪರ್​ ಅವಕಾಶ; 3006 ಹುದ್ದೆ ಭರ್ತಿಗೆ ಮುಂದಾದ ರಾಜ್ಯ ಸರ್ಕಾರ

Nursing Job: ನರ್ಸಿಂಗ್​ ಅಭ್ಯರ್ಥಿಗಳಿಗೆ ಬಂಪರ್​ ಅವಕಾಶ; 3006 ಹುದ್ದೆ ಭರ್ತಿಗೆ ಮುಂದಾದ ರಾಜ್ಯ ಸರ್ಕಾರ

ಸಮುದಾಯ ಆರೋಗ್ಯ ಅಧಿಕಾರಿಗಳ ಹುದ್ದೆಗೆ ನೇಮಕಾತಿ

ಸಮುದಾಯ ಆರೋಗ್ಯ ಅಧಿಕಾರಿಗಳ ಹುದ್ದೆಗೆ ನೇಮಕಾತಿ

ಬೀದರ್​, ಬಳ್ಳಾರಿ, ಕಲಬುರ್ಗಿ, ರಾಯಚೂರು, ಚಿಕ್ಕಮಗಳೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಉತ್ತರ ಕನ್ನಡ ಹಾಗೂ ಯಾದಗಿರಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ

 • Share this:

  ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ  ನರ್ಸಿಂಗ್​ ಅಭ್ಯರ್ಥಿಗಳ(nursing job) ಭರ್ತಿಗೆ ಸರ್ಕಾರ ಮುಂದಾಗಿದೆ. ಬೀದರ್​, ಬಳ್ಳಾರಿ, ಕಲಬುರ್ಗಿ, ರಾಯಚೂರು, ಚಿಕ್ಕಮಗಳೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಉತ್ತರ ಕನ್ನಡ ಹಾಗೂ ಯಾದಗಿರಿ (ಹೆಚ್ಚಿನ ಆದ್ಯತೆಯುಳ್ಳ ಜಿಲ್ಲೆ) ಕೊಡಗು, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ಧಾರವಾಡದಲ್ಲಿ (ಆದ್ಯತೆ ಹೊರತುಪಡಿಸಿದ ಇತರೆ ಜಿಲ್ಲೆಗಳಲ್ಲಿ)  ನರ್ಸಿಂಗ್​ ಅಭ್ಯರ್ಥಿಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಹೆಲ್ತ್​ ಅಂಡ್​ ವೆಲ್​ನೆಸ್​ ಸೆಂಟರ್​, ಎನ್​​ಎಚ್​ಎಂ ಯೋಚನೆ ಅಡಿ ಎಂಎಲ್​ಎಚ್​ಪಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

   
  ಹುದ್ದೆಗಳುವಿದ್ಯಾರ್ಹತೆ  ವೇತನ ಆಯ್ಕೆ ವಿಧಾನ
  3006ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ನರ್ಸಿಂಗ್​/ ಪೋಸ್ಟ್​ ಬಿಎಸ್ಸಿ ನರ್ಸಿಂಗ್​.ವಿಶೇಷ ಸೂಚನೆ: ಅಭ್ಯರ್ಥಿಗಳು ನರ್ಸಿಂಗ್​ ಕೌನ್ಸಿಲ್​ ಕೆಎನ್​ಸಿ/ ಐಎನ್​ಸಿಯಲ್ಲಿ ನೋಂದಣಿ ಹೊಂದಿರಬೇಕುಆದ್ಯತೆಯುಳ್ಳ ಜಿಲ್ಲೆಗಳಲ್ಲಿ ತಿಂಗಳಿಗೆ 24,200 ರೂ ಮಾಸಿಕ ವೇತನಆದ್ಯತೆ ಹೊರತುಪಡಿಸಿದ ಇತರೆ ಜಿಲ್ಲೆಗಳಲ್ಲಿ 22, 000ರೂ ಮಾಸಿಕ ವೇತನಇದರ ಜೊತೆಗೆ ಹೆಚ್ಚುವರಿಯಾಗಿ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನ 8000, ರೂಅಭ್ಯರ್ಥಿಗಳನ್ನು ಆನ್​ಲೈನ್​ ಮೂಲಕ ನಡೆಸುವ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು

  ವಯೋಮಿತಿ  (age limit)


  ಸಾಮಾನ್ಯ ಅಭ್ಯರ್ಥಿಗಳು 35 ವರ್ಷದೊಳಗೆ ಇರಬೇಕು


  ಪ್ರವರ್ಗ 1/ ಮಾಜಿ ಸೈನಿಕರಿಗೆ 40 ವರ್ಷ


  2ಎ/2ಬಿ/3ಎ/3ಬಿ ಹಾಗೂ ಇತರೆ ಹಿಂದುಳಿದ ವರ್ಗಕ್ಕೆ 38 ವರ್ಷ


  ಅರ್ಜಿ ಸಲ್ಲಿಕೆ ವಿಧಾನ (how to apply)


  ಅಭ್ಯರ್ಥಿಗಳಿ ಆನ್​ಲೈನ್​ ಮೂಲಕ ಮಾತ್ರ ದಾಖಲೆ ಸಮೇತವಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.


  ಆನ್​​ಲೈನ್​ ಅರ್ಜಿ ಶುಲ್ಕ (application fee)


  ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 600 ರೂ


  ಪ. ಜಾತಿ/ ಪ. ಪಂ/ ನಿವೃತ್ತ ಸೇವಾಧರರಿಗೆ ಅರ್ಜಿ ಶುಲ್ಕ 300 ರೂ


  ಇದನ್ನು ಓದಿ: Govt Job Alert: SSC ನೇಮಕಾತಿ: 3261 ಹುದ್ದೆಗಳಿಗೆ ಅರ್ಜಿ ಆಹ್ವಾನ


  ಪ್ರಮುಖ ದಿನಾಂಕಗಳು (Important dates)


  • ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಕೆಯ ಆರಂಭ - ಸೆಪ್ಟೆಂಬರ್​ 27

  • ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ : 18 ಅಕ್ಟೋಬರ್​ (18/10/21)

  • ಆನ್​ಲೈನ್​ ಮೂಲಕ ಆಡ್ಮಿಷನ್​ ಕಾರ್ಡ್​ ಡೌನ್​ಲೋಡ್​​ ದಿನಾಂಕ : ಅಕ್ಟೋಬರ್​ 18 ರಿಂದ 22ರವರೆಗೆ

  • ಆನ್​ಲೈನ್​ ಪರೀಕ್ಷೆ ದಿನಾಂಕ ಮತ್ತು ಫಲಿತಾಂಶ ಪ್ರಕಟ ದಿನ: 23 ಅಕ್ಟೋಬರ್​ (23/ 10/ 2021)

  • ಆಯ್ಕೆಗೊಂಡ  ಅಭ್ಯರ್ಥಿಗಳ ದಾಖಲೆ ಮೌಲ್ಯಮಾಪನ : 26 ಅಕ್ಟೋಬರ್​​ನಿಂದ 28ರವರೆಗೆ


  ಇದನ್ನು ಓದಿ: BA, Bsc, Bcom ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು; ತಿಂಗಳಿಗೆ 40 ಸಾವಿರ ಸಂಬಳ


  ಪ್ರಮುಖ ಲಿಂಕ್​ಗಳು (Important links)

   
  ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್​ ಮಾಡಿ
  ನೋಟಿಫಿಕೇಷನ್​ಇಲ್ಲಿ ಕ್ಲಿಕ್ ಮಾಡಿ
  ಇಲಾಖೆಯ ಅಧಿಕೃತ ವೆಬ್​ ತಾಣಕ್ಕೆ ಭೇಟಿ ನೀಡಲುಇಲ್ಲಿ ಕ್ಲಿಕ್​​ ಮಾಡಿ

  ವಿಶೇಷ ಸೂಚನೆಗಳು (Special instruction)

  • ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿದ ದಿನವೇ ಫಲಿತಾಂಶ ಪ್ರಕಟಿಸಲಾಗುವುದು

  • ನಾಲ್ಕನೇ ನೇಮಕಾತಿ ಪ್ರಕಟಣೆಯಾಗಿರುವ ಹಿನ್ನಲೆ ಕಲ್ಯಾಣ ಕರ್ನಾಟ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ ರೋಸ್ಟರ್​ ನಿಮಮಾನುಸಾರ ಇತರೆ ಅಭ್ಯರ್ಥಿಗಳನ್ನು ಕಲ್ಯಾಣ ಕರ್ನಾಟಕ ಜಿಲ್ಲೆಗಳ ನೇಮಕಾತಿಗೆ ಪರಿಗಣಿಸಲಾಗುವುದು

  • ನೇಮಕಾತಿಗೆ ಸಂಬಂಧಿಸಿದ ಯಾವುದೇ ತಿದ್ದುಪಡಿಗಳನ್ನು ಮೇಲ್ಕಂಡ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟವಾಗಲಿದೆ

  Published by:Seema R
  First published: