Chitradurga: ಗ್ರಾ.ಪಂ.ಯಲ್ಲಿ ಲೈಬ್ರರಿ ಮೇಲ್ವಿಚಾರಕ ಹುದ್ದೆ ಖಾಲಿ, ತಿಂಗಳಿಗೆ ₹12,000 ಸಂಬಳ, 10th ಪಾಸಾಗಿದ್ರೆ ಸಾಕು

ಆಸಕ್ತ ಅಭ್ಯರ್ಥಿಗಳು ನೇಮಕಾತಿ ಬಗೆಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನವೆಂಬರ್ 10,2021 ಕೊನೆಯ ದಿನವಾಗಿರುತ್ತದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Chitradurga Gram Panchayath Library Recruitment 2021: ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನ ಮಠದ ಕುರುಬರಹಟ್ಟಿ ಗ್ರಾಮ ಪಂಚಾಯ್ತಿ ಗ್ರಂಥಾಲಯದಲ್ಲಿ(Chitradurga Gram Panchayath Library) ಖಾಲಿ ಇರುವ ಮೇಲ್ವಿಚಾರಕ ಹುದ್ದೆ(Supervisor Posts)ಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನೇಮಕಾತಿ ಬಗೆಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನವೆಂಬರ್ 10,2021 ಕೊನೆಯ ದಿನವಾಗಿರುತ್ತದೆ. 

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.































ಸಂಸ್ಥೆ ಕುರುಬರಹಟ್ಟಿ ಗ್ರಾಮ ಪಂಚಾಯ್ತಿ ಗ್ರಂಥಾಲಯ, ಚಿತ್ರದುರ್ಗ
ಹುದ್ದೆಯ ಹೆಸರು ಮೇಲ್ವಿಚಾರಕ ಹುದ್ದೆ
ವಿದ್ಯಾರ್ಹತೆ ಎಸ್​ಎಸ್​ಎಲ್​ಸಿ ಪಾಸಾಗಿರಬೇಕು.
ವಯೋಮಿತಿ ಕನಿಷ್ಠ 18- ಗರಿಷ್ಠ 40 ವರ್ಷ
ವೇತನ ಮಾಸಿಕ ₹12,000
ಅರ್ಜಿ ಸಲ್ಲಿಸುವ ಬಗೆ ಆನ್​ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10/11/2021

ಇದನ್ನೂ ಓದಿ:Post Office Recruitment 2021: ತಿಂಗಳಿಗೆ ₹ 34,800 ಸಂಬಳ; ಮೈಸೂರು ಪೋಸ್ಟಲ್​ ಟ್ರೈನಿಂಗ್ ಸೆಂಟರ್​ನಲ್ಲಿ ಉದ್ಯೋಗ 

ವಿದ್ಯಾರ್ಹತೆ:

ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯ್ತಿ ಗ್ರಂಥಾಲಯ ನೇಮಕಾತಿಯ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆಯಿಂದ ಕಡ್ಡಾಯವಾಗಿ ಎಸ್​ಎಸ್​ಎಲ್​ಸಿ ಪಾಸಾಗಿರಬೇಕು. ಅಂಕಪಟ್ಟಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಬಹುದು.

ವಯೋಮಿತಿ:

ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯ್ತಿ ಗ್ರಂಥಾಲಯ ನೇಮಕಾತಿಯ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ವಯಸ್ಸಾಗಿರಬೇಕು. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಟ 18 ವರ್ಷ ಪೂರೈಸಿರತಕ್ಕದ್ದು.

ವೇತನ:

ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯ್ತಿ ಗ್ರಂಥಾಲಯ ನೇಮಕಾತಿಯ ಮೇಲ್ವಿಚಾರಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹ 12,000 ಸಂಬಳ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ

  • ನೇರ ಸಂದರ್ಶನ

  • ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯ್ತಿ ಗ್ರಂಥಾಲಯ ನೇಮಕಾತಿಯ ಮೇಲ್ವಿಚಾರಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.


ಇದನ್ನೂ ಓದಿ:Mandya Anganwadi Recruitment 2021: ಮಂಡ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆ & ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ:

ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯ್ತಿ ಗ್ರಂಥಾಲಯ ನೇಮಕಾತಿಯ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್​​ನಲ್ಲಿ ಅರ್ಜಿ ಸಲ್ಲಿಸಬೇಕು. ಮೊದಲು ಅಧಿಕೃತ ವೆಬ್‌ಸೈಟ್ https://chitradurga.nic.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನೇಮಕಾತಿ ಅಧಿಸೂಚನೆಯನ್ನು ಓದಿಕೊಂಡು ನಂತರ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ನವೆಂಬರ್ 10, 2021ರೊಳಗೆ ಪಿ.ಡಿ.ಒ/ಪಂಚಾಯ್ತಿ ಕಾರ್ಯದರ್ಶಿಗಳಿಗೆ ಅರ್ಜಿಯನ್ನು ಸಲ್ಲಿಸಬೇಕು.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: