• Home
  • »
  • News
  • »
  • jobs
  • »
  • JOB ALERT: ಚಾಮರಾಜನಗರ ಕೋರ್ಟ್​​ನಲ್ಲಿ ಟೈಪಿಸ್ಟ್ ಹುದ್ದೆ ಖಾಲಿ, ತಿಂಗಳಿಗೆ ₹ 42,000 ಸಂಬಳ

JOB ALERT: ಚಾಮರಾಜನಗರ ಕೋರ್ಟ್​​ನಲ್ಲಿ ಟೈಪಿಸ್ಟ್ ಹುದ್ದೆ ಖಾಲಿ, ತಿಂಗಳಿಗೆ ₹ 42,000 ಸಂಬಳ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಆಸಕ್ತರು ನವೆಂಬರ್ 30, 2022ಕ್ಕೆ ಮುನ್ನ ಅರ್ಜಿ ಹಾಕಿ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ districts.ecourts.gov.in ಗೆ ಭೇಟಿ ನೀಡಬಹುದು.

  • News18 Kannada
  • Last Updated :
  • Chamarajanagar, India
  • Share this:

    Chamarajanagar District Court Recruitment 2022: ಚಾಮರಾಜನಗರ ಜಿಲ್ಲಾ ಕೋರ್ಟ್(Chamarajanagar District Court )​​ನಲ್ಲಿ 11 ಟೈಪಿಸ್ಟ್​(Typist), ಟೈಪಿಸ್ಟ್​-ಕಾಪಿಯಿಸ್ಟ್(Typist-Copyist)​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗ(Job) ಅರಸುತ್ತಿರುವವರು ಚಾಮರಾಜನಗರ ಜಿಲ್ಲಾ ಕೋರ್ಟ್​​ನ ಅಧಿಕೃತ ವೆಬ್​​ಸೈಟ್​ಗೆ(Official Website) ಭೇಟಿ ನೀಡಿ ಅರ್ಜಿ ಹಾಕಬಹುದು. ಅದರಲ್ಲೂ ಚಾಮರಾಜನಗರದಲ್ಲಿ ವೃತ್ತಿ(Career) ಮಾಡಲು ಬಯಸುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಆಸಕ್ತರು ನವೆಂಬರ್ 30, 2022ಕ್ಕೆ ಮುನ್ನ ಅರ್ಜಿ ಹಾಕಿ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ districts.ecourts.gov.in ಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಚಾಮರಾಜನಗರ ಜಿಲ್ಲಾ ಕೋರ್ಟ್
    ಹುದ್ದೆಯ ಹೆಸರುಟೈಪಿಸ್ಟ್​, ಕಾಪಿಯಿಸ್ಟ್​
    ಒಟ್ಟು ಹುದ್ದೆ11
    ವಿದ್ಯಾರ್ಹತೆಪಿಯುಸಿ, ಡಿಪ್ಲೋಮಾ
    ಸ್ಥಳಚಾಮರಾಜನಗರ
    ವೇತನಮಾಸಿಕ ₹ 21,400-42,000
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ27/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30/11/2022


    ಹುದ್ದೆಯ ಮಾಹಿತಿ:
    ಟೈಪಿಸ್ಟ್​-ಕಾಪಿಯಿಸ್ಟ್​-04
    ಟೈಪಿಸ್ಟ್​- 07
    ಒಟ್ಟು 11 ಹುದ್ದೆಗಳು


    ಇದನ್ನೂ ಓದಿ:BEMLನಲ್ಲಿ ಕೆಲಸ ಖಾಲಿ ಇದೆ, BE, B Tech ಆಗಿದ್ರೆ ಅಪ್ಲೈ ಮಾಡಿ


    Chamarajanagar District Court Recruitment 2022:


    ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ:
    ಚಾಮರಾಜನಗರ ಜಿಲ್ಲಾ ಕೋರ್ಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ ಹಾಗೂ ಕಮರ್ಷಿಯಲ್ ಪ್ರಾಕ್ಟೀಸ್​​ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.


    ವಯೋಮಿತಿ:
    ಚಾಮರಾಜನಗರ ಜಿಲ್ಲಾ ಕೋರ್ಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 30, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35ವ ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಎಸ್​ಸಿ/ಎಸ್​ಟಿ/ ಪ್ರವರ್ಗ-1: 5 ವರ್ಷ
    ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳು : 3 ವರ್ಷ
    PwD & ವಿಧವೆಯರಿಗೆ: 10 ವರ್ಷ


    ಅರ್ಜಿ ಶುಲ್ಕ:
    ಎಸ್​​ಸಿ/ಎಸ್​ಟಿ/ಪ್ರವರ್ಗ-1 & ಅಂಗವಿಕಲ ಅಭ್ಯರ್ಥಿಗಳು- ಯಾವುದೇ ಶುಲ್ಕ ಇಲ್ಲ
    ಸಾಮಾನ್ಯ/ ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 200 ರೂ.
    ಶುಲ್ಕ ಪಾವತಿ ಮಾಡುವ ವಿಧಾನ- ಆನ್​ಲೈನ್​


    ಆಯ್ಕೆ ಪ್ರಕ್ರಿಯೆ:
    ಮೆರಿಟ್​ ಲಿಸ್ಟ್​
    ಟೈಪಿಂಗ್ ಟೆಸ್ಟ್
    ಕನ್ನಡ ಭಾಷಾ ಪರೀಕ್ಷೆ
    ಕಂಪ್ಯೂಟರ್ ಪರೀಕ್ಷೆ


    ಇದನ್ನೂ ಓದಿ: ESIC Recruitment 2022: ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ದೀರಾ? ತಿಂಗಳಿಗೆ 1 ಲಕ್ಷ ರೂ. ಸಂಬಳ, ಈಗಲೇ ಅಪ್ಲೈ ಮಾಡಿ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/11/2022
    ಅರ್ಜಿ ಶುಲ್ಕ ಕಟ್ಟಲು ಕಡೇ ದಿನ: ಡಿಸೆಂಬರ್ 1, 2022

    Published by:Latha CG
    First published: