KCET Result 2021: ಸಿಇಟಿ ಫಲಿತಾಂಶ ಪ್ರಕಟ: ಮೈಸೂರಿನ ಮೇಘನ್​ ರಾಜ್ಯಕ್ಕೆ ಪ್ರಥಮ

ಎಂಜಿನಿಯರಿಂಗ್​, ಬಿಫಾರ್ಮ್​, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಯೋಗ ಮತ್ತು ನ್ಯಾಚುರೋಪಥಿ ಎಲ್ಲಾ ವಿಭಾಗದಲ್ಲೂ ಮೈಸೂರಿನ ಪ್ರಮತಿ ಹಿಲ್ ಅಕಾಡೆಮಿ ವಿದ್ಯಾರ್ಥಿ ಮೇಘನ್​ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಸೆ. 20)  ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆದಿದ್ದ ಕರ್ನಾಟಕ ಸಿಇಟಿ (KCET Result) ಫಲಿತಾಂಶ ಇಂದು ಪ್ರಕಟವಾಗಿದೆ. ಮೈಸೂರಿನ ಮೇಘನ್ ಹೆಚ್​​.ಕೆ - ಮೊದಲ ಸ್ಥಾನ ಪಡೆದರೆ, ಬೆಂಗಳೂರಿನ ಪ್ರೇಮಂಕುರ್ ಎರಡನೇ ಸ್ಥಾನ ಪಡೆದಿದ್ದಾರೆ, ಬಿಎಸ್ ಅನಿರುಧ್ ಮೂರನೇ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಫಲಿತಾಂಶ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನ ತ ಶಿಕ್ಷಣ ಸಚಿವ ಡಾ. ಅಶ್ವಥ್​ ನಾರಾಯಣ, ಎಂಜಿನಿಯರಿಂಗ್​, ಬಿಫಾರ್ಮ್​, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಯೋಗ ಮತ್ತು ನ್ಯಾಚುರೋಪಥಿ ಎಲ್ಲಾ ವಿಭಾಗದಲ್ಲೂ ಮೈಸೂರಿನ ಪ್ರಮತಿ ಹಿಲ್ ಅಕಾಡೆಮಿ ವಿದ್ಯಾರ್ಥಿ ಮೇಘನ್​ ಹೆಚ್​​.ಕೆ (Meghan H K) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.

  ಅಗ್ರಿಕಲ್ಚರ್ ವಿಭಾಗದಲ್ಲಿ ಮೇಘನಾ ಹೆಚ್​​.ಕೆ- ಮೊದಲ ಸ್ಥಾನ ಪಡೆದರೆ, ರೀತಂ .ಬಿ- ಎರಡನೇ ಸ್ಥಾನ, ಅದಿತ್ಯ ಪ್ರಭಾಶ್- ಮೂರನೇ ಸ್ಥಾನ ಪಡೆದಿದ್ದಾರೆ, ಇನ್ನು ವೆಟರ್ನರಿ ಸೈನ್ಸ್ ವಿಭಾಗ ಮೇಘನಾ ಹೆಚ್.ಕೆ- ಮೊದಲ ಸ್ಥಾನ, ವರುಣ್ ಆದಿತ್ಯ- ಎರಡನೇ ಸ್ಥಾನ, ರೀತಂ .ಬಿ- ಮೂರನೇ ಸ್ಥಾನ ಪಡೆದಿದ್ದಾರೆ.

  ಬಿ.ಫಾರ್ಮ್ ವಿಭಾಗ ಮೇಘನ್ ಹೆಚ್.ಕೆ- ಮೊದಲು, ಪ್ರೇಮಾಂಕರ್ - ಎರಡನೇ ಸ್ಥಾನಬಿ.ಎಸ್.ಅನಿರುದ್​ - ಮೂರನೇ ಸ್ಥಾನ ಗಳಿಸಿದ್ದಾರೆ. ನ್ಯಾಚರೋಪತಿ ವಿಭಾಗದಲ್ಲಿ ಮೇಘನಾ ಹೆಚ್.ಕೆ - ಮೊದಲು, ವರುಣ್ ಆದಿತ್ಯ- ಎರಡನೇ ಹಾಗೂ ರೀತಂ ಬಿ- ಮೂರನೇ ಸ್ಥಾನ ಗಳಿಸುವಲ್ಲಿ ಸಫಲರಾಗಿದ್ದಾರೆ.

  ಇದನ್ನು ಓದಿ: ಇಂಧನದ ಬೆಲೆ ಕಡಿತಗೊಳಿಸಿ ಎಂಬ ನೈತಿಕತೆ ಕಾಂಗ್ರೆಸ್​ಗೆ ಇಲ್ಲ; ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು

  ಆಗಸ್ಟ್​ 28 ಮತ್ತು 29 ರಂದು 530 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಒಟ್ಟು 201834 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 193447 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 153467 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಫರೀಕ್ಷೆ ಫಲಿತಾಂಶವನ್ನು ಸಂಜೆ ನಾಲ್ಕು ಗಂಟೆಗೆ ಮಂಡಳಿಯ ಅಧಿಕೃತ ವೆನ್​ ತಾಣ http://kea.kar.nic.in ಹಾಗೂ http://karresults.nic.in ನಲ್ಲಿ ಪ್ರಕಟ ಮಾಡಲಾಗುವುದು. ವಿದ್ಯಾರ್ಥಿಗಳಯ ಈ ಜಾಲತಾಣಕ್ಕೆ ಭೇಟಿ ನೀಡಿ ಫಲಿತಾಂಶ ನೋಡಬಹುದಾಗಿದೆ.

  ನೀಟ್ ಫಲಿತಾಂಶ ಬಂದ ಬಳಿ ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಕೋರ್ಸ್ ಗಳಿಗೆ ಪ್ರವೇಶ ಆರಂಭವಾಗುವುದು. ಈ ಬಾರಿ ಪರೀಕ್ಷೆಯಲ್ಲಿ 6 ಗ್ರೇಸ್​ ಅಂಕ ನೀಡಲಾಗಿದೆ. ಭೌತಶಾಸ್ತ್ರದಲ್ಲಿ ಮೂರು, ಗಣಿತದಲ್ಲಿ ಮೂರು ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ ಆಗಿದ್ದು, 54 ಸಾವಿರ ಸೀಟ್ ಗಳನ್ನ ಸಿಇಟಿಗಳ ಮೂಲಕ ಭರ್ತಿ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು

  ಎಂಜಿನಿಯರಿಂಗ್ ಸೀಟ್ ದರ ಏರಿಕೆ ವಿಚಾರ ಕುರಿತು ಇದೇ ವೇಳೆ ಮಾತನಾಡಿದದ ಅವರು, ತಿಂಗಳಾಂತ್ಯದೊಳಗೆ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಮಾಡಲಾಗುವುದು. 7 ಸಾವಿರ ವಿದ್ಯಾರ್ಥಿಗಳ Rank ತಡೆಹಿಡಿಯಲಾಗಿದೆ. ಮಾರ್ಕ್ಸ್​ಕಾರ್ಡ್​ ಸಲ್ಲಿಕೆ ಮಾಡದ ವಿದ್ಯಾರ್ಥಿಗಳ Rank ಪ್ರಕಟವಾಗಿಲ್ಲ 3,500 ವಿದ್ಯಾರ್ಥಿಗಳು ಸರಿಯಾದ ಮಾರ್ಕ್ಸ್​ಕಾರ್ಡ್ ಕೊಟ್ಟಿಲ್ಲ ಎಂದು ತಿಳಿಸಿದರು.

  ಪದವಿ ಕಾಲೇಜುಗಳಿಗೆ ಅಕ್ಟೋಬರ್ 1ರವರೆಗೂ ದಾಖಲಾಗಲು ಅವಕಾಶ ನೀಡಲಾಗಿದೆ. ಪದವಿ ಕಾಲೇಜುಗಳಿಗೆ ಶುಲ್ಕ ನಿಗದಿ ಮಾಡಲು ಸರಕಾರದ ಮಟ್ಟದಲ್ಲಿ ಸಮಿತಿ ಇಲ್ಲ. ಹೀಗಾಗಿ, ಕೆಲ ಕಾಲೇಜುಗಳು ಇದನ್ನೇ ದುರುಪಯೋಗ ಮಾಡಿಕೊಳ್ಳುತ್ತಿವೆ. ಸಮಿತಿ ಇಲ್ಲ ಎಂದ ಮಾತ್ರಕ್ಕೆ ದುಬಾರಿ ಶುಲ್ಕ ವಿಧಿಸುವ ಹಾಗಿಲ್ಲ ಎಂದು ಸಚಿವರು ಹೇಳಿದ್ದರು
  Published by:Seema R
  First published: