Post Office Recruitment 2021: ತಿಂಗಳಿಗೆ ₹ 34,800 ಸಂಬಳ; ಮೈಸೂರು ಪೋಸ್ಟಲ್​ ಟ್ರೈನಿಂಗ್ ಸೆಂಟರ್​ನಲ್ಲಿ ಉದ್ಯೋಗ

ಡಿಸೆಂಬರ್ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಉದ್ಯೋಗಾಂಕ್ಷಿಗಳು CEPT ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್​ಸೈಟ್ www.indiapost.gov.in ಗೆ ಭೇಟಿ ನೀಡಿ.

 ಸೆಂಟರ್ ಫಾರ್ ಎಕ್ಸಲೆನ್ಸ್​ ಇನ್ ಪೋಸ್ಟಲ್ ಟೆಕ್ನಾಲಜಿ- ಮೈಸೂರು

ಸೆಂಟರ್ ಫಾರ್ ಎಕ್ಸಲೆನ್ಸ್​ ಇನ್ ಪೋಸ್ಟಲ್ ಟೆಕ್ನಾಲಜಿ- ಮೈಸೂರು

  • Share this:
ದಿ ಸೆಂಟರ್ ಫಾರ್ ಎಕ್ಸಲೆನ್ಸ್​ ಇನ್ ಪೋಸ್ಟಲ್ ಟೆಕ್ನಾಲಜಿ ಮೈಸೂರು (The Center for Excellence in Postal Technology Mysore) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 29 ಅಸಿಸ್ಟೆಂಟ್ ಮ್ಯಾನೇಜರ್(Assistant Manager), ಟೆಕ್ನಿಕಲ್ ಆಪರೇಟರ್(Technical Operator) ಹುದ್ದೆಗಳು ಖಾಲಿ ಇವೆ. ಡಿಪ್ಲೋಮಾ(Diploma), ಪದವಿ(Bachelor Degree) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 11ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಉದ್ಯೋಗಾಂಕ್ಷಿಗಳು CEPT ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್​ಸೈಟ್ www.indiapost.gov.in ಗೆ ಭೇಟಿ ನೀಡಿ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.ಸಂಸ್ಥೆ ದಿ ಸೆಂಟರ್ ಫಾರ್ ಎಕ್ಸಲೆನ್ಸ್​ ಇನ್ ಪೋಸ್ಟಲ್ ಟೆಕ್ನಾಲಜಿ(CEPT) ಮೈಸೂರು
ಜಾಹೀರಾತು ಸಂಖ್ಯೆ CEPT-1 / STA-FTP/ Dlgs / 2027
ಹುದ್ದೆಯ ಹೆಸರು ಅಸಿಸ್ಟೆಂಟ್ ಮ್ಯಾನೇಜರ್, ಟೆಕ್ನಿಕಲ್ ಆಪರೇಟರ್
ಒಟ್ಟು ಹುದ್ದೆಗಳು 29
ವಿದ್ಯಾರ್ಹತೆ ಡಿಪ್ಲೋಮಾ, ಪದವಿ
ಉದ್ಯೋಗದ ಸ್ಥಳ ಮೈಸೂರು
ಸಂಬಳ ಮಾಸಿಕ ₹9,300-34,800
ಅರ್ಜಿ ಸಲ್ಲಿಸುವ ಬಗೆ ಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 11/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  05/12/2021

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05/12/2021

ಇದನ್ನೂ ಓದಿ:Indian Navy Recruitment 2021: 10th, ITI ಪಾಸಾಗಿದ್ರೆ ತಿಂಗಳಿಗೆ ₹ 56,900 ಸಂಬಳ, ನೌಕಾಪಡೆಯಲ್ಲಿ ಉದ್ಯೋಗ

ಹುದ್ದೆಯ ಮಾಹಿತಿ:

ಅಸಿಸ್ಟೆಂಟ್ ಮ್ಯಾನೇಜರ್: 23 ಹುದ್ದೆಗಳು
ಟೆಕ್ನಿಕಲ್ ಸೂಪರ್​ವೈಸರ್: 06 ಹುದ್ದೆಗಳು
ಒಟ್ಟು 29 ಹುದ್ದೆಗಳು

ಅರ್ಹತೆ ಮತ್ತು ಅನುಭವ

1.ಅಸಿಸ್ಟೆಂಟ್ ಮ್ಯಾನೇಜರ್: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು. ಅಥವಾ ಯಾವುದೇ ಪದವಿಯ ಜೊತೆಗೆ 1 ವರ್ಷ ಕಂಪ್ಯೂಟರ್​ ಸೈನ್ಸ್​ನಲ್ಲಿ ಡಿಪ್ಲೋಮಾ ಮಾಡಿರಬೇಕು. 2 ವರ್ಷ ಅನುಭವ ಇರಬೇಕು.

2.ಟೆಕ್ನಿಕಲ್ ಸೂಪರ್​ವೈಸರ್: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು. ಅಥವಾ ಯಾವುದೇ ಪದವಿಯ ಜೊತೆಗೆ ಒಂದು ವರ್ಷ ಕಂಪ್ಯೂಟರ್​ ಸೈನ್ಸ್​ನಲ್ಲಿ ಡಿಪ್ಲೋಮಾ ಮಾಡಿರಬೇಕು. 1 ವರ್ಷ ಅನುಭವ ಇರಬೇಕು.

ವಯೋಮಿತಿ:

ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ ಟೆಕ್ನಿಕಲ್ ಆಪರೇಟರ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ವಯಸ್ಸು ಗರಿಷ್ಠ 56 ವರ್ಷ ಮೀರಿರಬಾರದು.

ಇದನ್ನೂ ಓದಿ:NCDIR Recruitment 2021: ತಿಂಗಳಿಗೆ ₹32,000 ಸಂಬಳ, ಬೆಂಗಳೂರಿನಲ್ಲಿ ಉದ್ಯೋಗ, ಪಿಜಿ ಆದವರು ಅರ್ಜಿ ಸಲ್ಲಿಸಿಸಂಬಳ:

ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ ಟೆಕ್ನಿಕಲ್ ಆಪರೇಟರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹ 9,300-34,800 ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ದಾಖಲಾತಿ ಪರಿಶೀಲನೆ

  • ವೈಯಕ್ತಿಕ ಸಂದರ್ಶನ


 
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: