CSG Karnataka Recruitment: ಸಾಫ್ಟ್​​ವೇರ್​ ಇಂಜಿನಿಯರ್​​ಗಳಿಗೆ 128 ಸರ್ಕಾರಿ ಹುದ್ದೆಗಳು: ಇಲ್ಲಿ ಅರ್ಜಿ ಸಲ್ಲಿಸಿ

ಕರ್ನಾಟಕ ಸೆಂಟರ್ ಫಾರ್ ಸ್ಮಾರ್ಟ್‌ ಗವರ್ನೆನ್ಸ್‌ನಲ್ಲಿನ ಮಾಹಿತಿ ತಂತ್ರಜ್ಞಾನ (ಐಟಿ / ಐಸಿಟಿ) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಗತ್ಯ ಇರುವ ವಿವಿಧ 128 ಹುದ್ದೆಗಳ ಭರ್ತಿಗೆ ಇದೀಗ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ. ಆಸಕ್ತರು ಈ ಹುದ್ದೆಗಳಿಗೆ ಅಗತ್ಯ ಅರ್ಹತೆಗಳನ್ನು ಹೊಂದಿದ್ದರೆ ಆನ್‌ಲೈನ್‌ ಮೂಲಕ ಆಗಸ್ಟ್‌ 31 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

128 ಹುದ್ದೆಗಳಿಗೆ ಅರ್ಜಿ ಆಹ್ವಾನ

128 ಹುದ್ದೆಗಳಿಗೆ ಅರ್ಜಿ ಆಹ್ವಾನ

  • Share this:
ಕರ್ನಾಟಕ ಸೆಂಟರ್ ಫಾರ್ ಸ್ಮಾರ್ಟ್‌ ಗವರ್ನೆನ್ಸ್‌, ಇ-ಆಡಳಿತ ಸಚಿವಾಲಯ, ಸಿಎಸ್​​ಇ (ಇ-ಆಡಳಿತ), ಇದರ ಅಧೀನದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸ್ಥಾಪಿಸಿರುವ ಮತ್ತು ಕರ್ನಾಟಕ ಸಂಘ ಸಂಸ್ಥೆಗಳ ನೋಂದಣಿ ಅಧಿನಿಯಮ 1960 ಅನ್ವಯ ನೋಂದಣಿಯಾಗಿರುವ ಒಂದು ಸಂಸ್ಥೆ ಆಗಿರುತ್ತದೆ. ಕರ್ನಾಟಕ ಸೆಂಟರ್ ಫಾರ್ ಸ್ಮಾರ್ಟ್‌ ಗವರ್ನೆನ್ಸ್‌ನಲ್ಲಿನ ಮಾಹಿತಿ ತಂತ್ರಜ್ಞಾನ (ಐಟಿ / ಐಸಿಟಿ) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಗತ್ಯ ಇರುವ ವಿವಿಧ 128 ಹುದ್ದೆಗಳ ಭರ್ತಿಗೆ ಇದೀಗ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ. ಆಸಕ್ತರು ಈ ಹುದ್ದೆಗಳಿಗೆ ಅಗತ್ಯ ಅರ್ಹತೆಗಳನ್ನು ಹೊಂದಿದ್ದರೆ ಆನ್‌ಲೈನ್‌ ಮೂಲಕ ಆಗಸ್ಟ್‌ 31 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಸಂಸ್ಥೆಯ ಹೆಸರು:  ಇ-ಆಡಳಿತ ಸಚಿವಾಲಯ
ಹುದ್ದೆಯ ಹೆಸರು:  ಐಟಿ / ಐಸಿಟಿ ಕ್ಷೇತ್ರಕ್ಕೆ ಸಂಬಂಧಿಸಿ ಹುದ್ದೆಗಳು
ಹುದ್ದೆಗಳ ಸಂಖ್ಯೆ:  128 ಹುದ್ದೆಗಳು
ಉದ್ಯೋಗ ಸ್ಥಳ: ಬೆಂಗಳೂರು























































ಹುದ್ದೆಗಳ ಹೆಸರುಸಂಖ್ಯೆ
ಪ್ರಾಜೆಕ್ಟ್ ಮ್ಯಾನೇಜರ್6
ಪ್ರಾಜೆಕ್ಟ್‌ ಲೀಡ್10
ಬಿಸಿನೆಸ್ ಅನಲಿಸ್ಟ್4
ಡೇಟಾಬೇಸ್ ಅಡ್ಮಿನಿಸ್ಟ್ರೇಟರ್2
ಡೇಟಾಬೇಸ್ ಡಿಸೈನರ್5
ಆಪರೇಷನ್ಸ್‌ ಮ್ಯಾನೇಜರ್3
ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್9
ಸಾಫ್ಟ್‌ವೇರ್ ಇಂಜಿನಿಯರ್73
ಟೆಸ್ಟ್‌ ಇಂಜಿನಿಯರ್12
ಸಿಸ್ಟಮ್ ಅಡ್ಮಿನಿಸ್ಟ್ರೇಟರ್2
ಸಿಸ್ಟಮ್ ಅಡ್ಮಿನಿಸ್ಟ್ರೇಟರ್2
ಸೊಲ್ಯೂಷನ್ ಆರ್ಕಿಟೆಕ್ಟ್‌2



ಶೈಕ್ಷಣಿಕ ಅರ್ಹತೆ:   ಹುದ್ದೆಗಳಿಗೆ ಅನುಗುಣವಾಗಿ ಬಿಇ / ಬಿ.ಟೆಕ್ / ಎಂಸಿಎ / ಎಂಎಸ್ಸಿ/ ಡಿಪ್ಲೊಮ ಪಾಸ್‌ ಮಾಡಿರಬೇಕು.

ಇದನ್ನೂ ಓದಿ: Jobs in Bengaluru: ಬೆಂಗಳೂರಲ್ಲಿ ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ: ಕೂಡಲೇ ಅರ್ಜಿ ಸಲ್ಲಿಸಿ

 ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-08-2022

 ಅಧಿಕೃತ ಇಮೇಲ್​:  careercsg@karnataka.gov.in

ಅರ್ಜಿ ಸಲ್ಲಿಸಬೇಕಾದ ವಿಳಾಸ: ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ದಾಖಲೆಗಳೊಂದಿಗೆ ಬಯೋಡಾಟಾವನ್ನು ( ರೆಸ್ಯೂಮ್‌) ಪಿಡಿಎಫ್ ಅಥವಾ ವರ್ಡ್‌ ಡಾಕ್ಯುಮೆಂಟ್‌ ಫಾರ್ಮ್ಯಾಟ್‌ನಲ್ಲಿ ಇ-ಮೇಲ್ ಕಳುಹಿಸಬೇಕು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಸಿವಿಯು ಅಭ್ಯರ್ಥಿಯ ಹೆಸರು, ಜನ್ಮ ದಿನಾಂಕ, ಲಿಂಗ, ಸಂವಹನಕ್ಕಾಗಿ ವಿಳಾಸ, ಮೊಬೈಲ್‌ ನಂಬರ್, ಇಮೇಲ್ ವಿಳಾಸ, ಕಾರ್ಯಾನುಭವ, ಪ್ರಸ್ತುತ ಸ್ಯಾಲರಿ ಸೇರಿದಂತೆ ಇತರೆ ಎಲ್ಲ ಅಗತ್ಯ ಮಾಹಿತಿಗಳನ್ನು ಒಳಗೊಂಡಿರಬೇಕು.

ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
Published by:Kavya V
First published: