CUK Recruitment: ಕೇಂದ್ರೀಯ ವಿವಿಯಲ್ಲಿದೆ ಲೈಬ್ರರಿ ಟ್ರೈನಿ ಹುದ್ದೆಗಳು; ವಾಕ್​-ಇನ್​-ಇಂಟರ್​ವ್ಯೂನಲ್ಲಿ ಭಾಗಿಯಾಗಿ

ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ನಿಗದಿತ ಅವಧಿಗೆ ನೇಮಕ ಮಾಡಲಾಗುತ್ತಿದೆ.

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ

  • Share this:
    ಕಲ್ಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (Central University of Karnataka)  ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಲೈಬ್ರರಿ ಟ್ರೈನಿ (Library Trainee), ಅಕೌಂಟೆಂಟ್ (Accountant)​ ಸೇರಿದಂತೆ ಒಟ್ಟು 9 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಸೆಪ್ಟೆಂಬರ್​ 1 ರಂದು ಈ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ.

    ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ನಿಗದಿತ ಅವಧಿಗೆ ನೇಮಕ ಮಾಡಲಾಗುತ್ತಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ವಿಶ್ವವಿದ್ಯಾಲಯದ ಹೆಸರು: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (CUK)
    ಹುದ್ದೆಯ ಹೆಸರು: ಲೈಬ್ರರಿ ಟ್ರೈನಿ, ಅಕೌಂಟೆಂಟ್
    ಹುದ್ದೆಗಳ ಸಂಖ್ಯೆ: 9
    ಉದ್ಯೋಗ ಸ್ಥಳ: ಕಲಬುರಗಿ - ಕರ್ನಾಟಕ
    ವೇತನ: 12000-30000 ರೂ ಪ್ರತಿ ತಿಂಗಳು













































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿವೇತನ
    ಲೈಬ್ರರಿ ಟ್ರೈನಿ3ಲೈಬ್ರರಿ ಸೈನ್ಸ್​ ಸ್ನಾತಕೋತ್ತರ ಪದವಿಗರಿಷ್ಟ 35 ವರ್ಷ12000 ರೂ ಮಾಸಿಕ
    ಲೈಬ್ರರಿ ಟ್ರೈನಿ (IT)1ಎಂಇ, ಎಂಟೆಕ್​, ಬಿಇ, ಬಿಟೆಕ್​, ಎಂಸಿಎಗರಿಷ್ಟ 35 ವರ್ಷ2000 ರೂ ಮಾಸಿಕ
    ಖಾಸಗಿ ಕಾರ್ಯದರ್ಶಿ1ಬಿಕಾಂ, ಎಂಕಾಂ, ಎಂಬಿಎ ಪದವಿಗರಿಷ್ಟ 35 ವರ್ಷ30000ರೂ ಮಾಸಿಕ
    ಕಂಪ್ಯೂಟರ್ ಆಪರೇಟರ್2ಪದವಿ ಮತ್ತು ಕನ್ನಡ ಮತ್ತು ಇಂಗ್ಲಿಷ್​​ ಟೈಪಿಂಗ್​ ಪ್ರಮಾಣ ಪತ್ರಗರಿಷ್ಟ 35 ವರ್ಷ15000 ರೂ ಮಾಸಿಕ
    ಅಕೌಂಟೆಂಟ್2ಬಿಕಾಂ ಪದವಿಗರಿಷ್ಟ 35 ವರ್ಷ25000 ರೂ ಮಾಸಿಕ

    ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ

    ಇದನ್ನು ಓದಿ: ಕರ್ನಾಟಕ ಸ್ಟೇಟ್ ಮಿನರಲ್ಸ್​​ನಲ್ಲಿ 31 ಹುದ್ದೆಗೆ ನೇರ ಸಂದರ್ಶನ; ಇಲ್ಲಿದೆ ಸಂಪೂರ್ಣ ಮಾಹಿತಿ

    ಅರ್ಜಿ ಶುಲ್ಕ: ವಿನಾಯಿತಿ ನೀಡಲಾಗಿದೆ.

    ನೇರ ಸಂದರ್ಶನ ನಡೆಯುವ ಸ್ಥಳ
    ಆಡಳಿತ ಕಟ್ಟಡ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ, ಕರ್ನಾಟಕ

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 10-08-2022

    ವಾಕ್-ಇನ್ ದಿನಾಂಕ:
    ಲೈಬ್ರರಿ ಟ್ರೈನಿ, ಲೈಬ್ರರಿ ಟ್ರೈನಿ (IT) 29ನೇ ಆಗಸ್ಟ್ 2022
    ಖಾಸಗಿ ಕಾರ್ಯದರ್ಶಿ 01 ಸೆಪ್ಟೆಂಬರ್ 2022
    ಕಂಪ್ಯೂಟರ್ ಆಪರೇಟರ್, ಅಕೌಟೆಂಟ್​ 26ನೇ ಆಗಸ್ಟ್ 2022

    ಇದನ್ನು ಓದಿ: ರೈಲ್ವೆಯಲ್ಲಿದೆ ಕಂಪ್ಯೂಟರ್​ ಆಪರೇಟರ್​ ಹುದ್ದೆ; ಎಸ್​ಎಸ್​ಎಲ್​ಸಿ, ಐಟಿಐ ವಿದ್ಯಾರ್ಹತೆ

    ನೇರ ಸಂದರ್ಶನದಲ್ಲಿ ಅಗತ್ಯವಾಗಿ ಕೊಂಡೊಯ್ಯಬೇಕಾದ ದಾಖಲೆ

    ಆಸಕ್ತ ಅಭ್ಯರ್ಥಿಗಳು ಭರ್ತಿಯಾದ ವೆಬ್​ಸೈಟ್​ನಲ್ಲಿ ನೀಡಿರುವ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ನೇರ ಸಂದರ್ಶನಕ್ಕೆ ಕೊಂಡೊಯ್ಯವುದು ಅವಶ್ಯ.
    ಪದವಿ ಮತ್ತು 10ನೇ ತರಗತಿ ಮಾರ್ಕ್ಸ್​ ಕಾರ್ಡ್​​
    ಸಕ್ಷಮ ಅಧಿಕಾರಿಗಳು ನೀಡಿದ ಅನುಭವ ಪ್ರಮಾಣಪತ್ರಗಳು/ಯಾವುದೇ ಸಂಬಂಧಿತ ಪ್ರಮಾಣಪತ್ರಗಳು/ ಪ್ರಶಂಸಾಪತ್ರಗಳು.
    ಜಾತಿ ಪ್ರಮಾಣ ಪತ್ರ
    ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ ಅತ್ಯಗತ್ಯ
    ಶೈಕ್ಷಣಿಕ ಅರ್ಹತೆ ಸಂಬಂಧಿಸಿದ ಯಾವುದೇ ಇತರ ಸಂಬಂಧಿತ ಮಾಹಿತಿ.
    Published by:Seema R
    First published: