CUK Recruitment: ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹುದ್ದೆ ನೇಮಕಾತಿ; ಲಿಖಿತ ಪರೀಕ್ಷೆ ಇಲ್ಲ

ಅರ್ಜಿಯನ್ನು ಆಫ್​ಲೈನ್ ಮತ್ತು ಆನ್​ಲೈನ್​ ಎರಡು ವಿಧಾನದ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 30 ಆಗಿದೆ.

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ

  • Share this:
    ಕಲ್ಬುರ್ಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ (Central University of Karnataka) ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 61 ಪ್ರಾಧ್ಯಾಪಕ (Professor) ಮತ್ತು ಸಹ ಪ್ರಾಧ್ಯಾಪಕ (Assistant Professor) ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆಫ್​ಲೈನ್ ಮತ್ತು ಆನ್​ಲೈನ್​ ಎರಡು ವಿಧಾನದ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 30 ಆಗಿದೆ.

    ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (CUK)
    ಹುದ್ದೆಗಳ ಸಂಖ್ಯೆ: 61
    ಉದ್ಯೋಗ ಸ್ಥಳ: ಕಲಬುರಗಿ
    ಹುದ್ದೆಯ ಹೆಸರು: ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ
    ವೇತನ: ವಿಶ್ವ ವಿದ್ಯಾಲಯದಲ ನಿಯಮಗಳ ಪ್ರಕಾರ
    ಹುದ್ದೆಗಳು ಹುದ್ದೆ ಸಂಖ್ಯೆ















    ಹುದ್ದೆಹುದ್ದೆ ಸಂಖ್ಯೆ
    ಪ್ರಾಧ್ಯಾಪಕ21
    ಸಹಾಯಕ ಪ್ರಾಧ್ಯಾಪಕ40

    ವೇತನ: ಕೇಂದ್ರಿಕ ವಿಶ್ವವಿದ್ಯಾಲಯ ನಿಯಮ ಅನುಸಾರ 7 ನೇ ವೇತನ ಆಯೋಗದ ಪ್ರಕಾರ ಯುಜಿಸಿಯ ಪ್ರಕಾರ ವೇತನದ ಪರಿಷ್ಕರಣೆಗೆ ಒಳಪಟ್ಟಿರುತ್ತದೆ

    ವಿದ್ಯಾರ್ಹತೆ: ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಸಿಎ/ಐಸಿಡಬ್ಲ್ಯೂಎ, ಬಿಎಡ್, ಪದವಿ, ಡಾಕ್ಟರಲ್ ಪದವಿ, ಎಂಕಾಂ, ಎಂಎಡ್​, ಪಿಜಿಡಿಎಂ, ಎಂಎ, ಕಲೆ/ಮಾನವೀಯತೆ/ವಿಜ್ಞಾನ/ಕಾಮರ್ಸ್‌ನಲ್ಲಿ ಸ್ನಾತಕೋತ್ತರ ಪದವಿ, ಎಂಎಡ್​​, ಎಂಎ ಪೂರ್ಣಗೊಳಿಸಿರಬೇಕು .ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಪ್ರವಾಸೋದ್ಯಮ/ ವ್ಯಾಪಾರ ಆಡಳಿತದಲ್ಲಿ ಪಿಎಚ್​ಡಿ ಪದವಿಗಳಿಸಿರಬೇಕು.

    UGC/MoE/DOPT/NCTE/AICTE ಮತ್ತು ಇತರರಿಂದ ಸೂಚಿಸಲ್ಪಟ್ಟಿರುವ ಅಂಶಗಳು ಅನುಸಾರ ಅಭ್ಯರ್ಥಿಗಳು ವಿದ್ಯಾರ್ಹತೆ ಹೊಂದಿರಬೇಕು.

    ಆಯ್ಕೆ ಪ್ರಕ್ರಿಯೆ
    ಸಂದರ್ಶನ

    ಅರ್ಜಿ ಸಲ್ಲಿಕೆ: ಆನ್​​ಲೈನ್​
    ಆನ್‌ಲೈನ್ ಮೋಡ್‌ನಲ್ಲಿ ಲಭ್ಯವಿರುವಂತೆ ಅರ್ಜಿ ನಮೂನೆಗಳನ್ನು ಮಾತ್ರ ಭರ್ತಿ ಮಾಡಬೇಕು. ಯಾವುದೇ ಆಫ್‌ಲೈನ್ ಫಾರ್ಮ್‌ಗಳನ್ನು ಸ್ವೀಕರಿಸಲಾಗುವುದಿಲ್ಲ.

    ಅರ್ಜಿ ಶುಲ್ಕ
    ಸಾಮಾನ್ಯ ಮತ್ತು ಹಿಂದುಳಿದ ಅಭ್ಯರ್ಥಿಗಳಿಗೆ 2,500 ರೂ
    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 1000 ರೂ
    ವಿಕಲಚೇತನ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 30, 20222
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಜೂನ್ 2022
    ಹಾರ್ಡ್ ಕಾಪಿಯನ್ನು ಸಲ್ಲಿಸಲು ಕೊನೆಯ ದಿನಾಂಕ: ಜುಲೈ 8, 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ವೀಕ್ಷಣೆಗೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: cuk.ac.in.

    ಅರ್ಜಿ ಸಲ್ಲಿಕೆ
    ಅರ್ಜಿ ಭರ್ತಿ ಮಾಡಿದ ಬಳಿಕ ಹಾರ್ಡ್ ಕಾಪಿಯನ್ನು ಕೆಳಕಂಡ
    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು mhc.tn.gov.in ಅಧಿಕೃತ ವೆಬ್‌ಸೈಟ್‌ನಲ್ಲಿ ಜೂನ್​ 30ರೊಳಗ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

    ಅರ್ಜಿದಾರರು ಆನ್‌ಲೈನ್ ಅರ್ಜಿ ನಮೂನೆಯ ಹಾರ್ಡ್ ಪ್ರತಿಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜುಲೈ 8ರೊಳಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

    ರಿಜಿಸ್ಟ್ರಾರ್, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಆಳಂದ ರಸ್ತೆ, ಕಲಬುರಗಿ ಜಿಲ್ಲೆ -585367
    Published by:Seema R
    First published: