Central Railway Teacher Recruitment: ಕೇಂದ್ರ ರೈಲ್ವೇ ಇಲಾಖೆಯಲ್ಲಿ ಶಿಕ್ಷಕರ ಹುದ್ದೆಗೆ ವಾಕ್​ ಇನ್​ ಇಂಟರ್​ವ್ಯೂ; ಇಲ್ಲಿದೆ ಹುದ್ದೆ ಮಾಹಿತಿ

ಈ ಹುದ್ದೆಗಳು ಸಂಪೂರ್ಣವಾಗಿ ತಾತ್ಕಾಲಿಕವಾಗಿದೆ. 2022-23ನೇ ಪ್ರಸಕ್ತ ಸಾಲಿಗೆ ಈ ಹುದ್ದೆ ಆಯ್ಕೆ ನಡೆಯಲಿದೆ. 

ವಿವಿಧ ಹುದ್ದೆಗೆ ಅರ್ಜಿ ಹಾಕಿ

ವಿವಿಧ ಹುದ್ದೆಗೆ ಅರ್ಜಿ ಹಾಕಿ

  • Share this:
    ಕೇಂದ್ರ ರೈಲ್ವೇ ಇಲಾಖೆಯಲ್ಲಿ (Central Railway) ಶಿಕ್ಷಕರ (Teacher)  ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಭುಸಾವಲ್​ ವಿಭಾಗದಲ್ಲಿ ರೈಲ್ವೇ ಶಾಲೆ (ಆಂಗ್ಲ ಮಾಧ್ಯಮ)ದಲ್ಲಿ ವಿವಿಧ ವಿಷಯಗಳ ಪಾಠ ಮಾಡಲು ಶಿಕ್ಷಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 22 ಹುದ್ದೆಗಳ ಭರ್ತಿಗೆ ಮುಂದಾಗಲಾಗಿದ್ದು, ಇದಕ್ಕಾಗಿ ನೇರ ಸಂದರ್ಶನ ನಡೆಸಲು ತೀರ್ಮಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್​ 4 ರಂದು ನಡೆಯುವ ವಾಕ್​- ಇನ್​- ಇಂಟರ್​​ವ್ಯೂನಲ್ಲಿ ಭಾಗಿಯಾಗಬಹುದಾಗಿದೆ.

    ಈ ಹುದ್ದೆಗಳು ಸಂಪೂರ್ಣವಾಗಿ ತಾತ್ಕಾಲಿಕವಾಗಿದೆ. 2022-23ನೇ ಪ್ರಸಕ್ತ ಸಾಲಿಗೆ ಈ ಹುದ್ದೆ ಆಯ್ಕೆ ನಡೆಯಲಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆ: ಕೇಂದ್ರ ರೈಲ್ವೇ ಇಲಾಖೆ
    ಹುದ್ದೆಯ ಹೆಸರು: ಶಿಕ್ಷಕರು
    ಒಟ್ಟು ಹುದ್ದೆ ಸಂಖ್ಯೆ: 22
    ಕಾರ್ಯ ನಿರ್ವಹಣೆ ಸ್ಥಳ: ಭುಸಾವಲ್​- ಮಹಾರಾಷ್ಟ್ರ
    ವೇತನ: 21,250- 27,500 ರೂ ಮಾಸಿಕ



























    ಹುದ್ದೆಹುದ್ದೆ ಸಂಖ್ಯೆಬೋಧನ ವಿಷಯವೇತನ
    ಪಿಜಿಟಿ5ಗಣಿತ, ರಾಸಯನಶಾಸ್ತ್ರ, ಅರ್ಥಶಾಸ್ತ್ರ, ಇಂಗ್ಲಿಷ್​ ಹಿಂದಿ27,500 ರೂ ಮಾಸಿಕ
    ಟಿಜಿಟಿ8ಕಲೆ ಮತ್ತು ವಿಜ್ಞಾನ26,250 ರೂ ಮಾಸಿಕ
    ಪಿಆರ್​ಟಿ9ದೈಹಿಕ ಶಿಕ್ಷಕರು, ಸಂಗೀತ, ಸಮಾಲೋಚಕರು, ಕಲೆ ಮತ್ತು ವಿಜ್ಞಾನ ಮತ್ತು ಮರಾಠಿ21,250 ರೂ ಮಾಸಿಕ

    ಶೈಕ್ಷಣಿಕ ಅರ್ಹತೆ: ನೇಮಕಾತಿ ನಿಯಮ ಅನುಸಾರ ಅಭ್ಯರ್ಥಿಯು ಅಧಿಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಜೊತೆಗೆ ಬಿಎಡ್​ ಪದವಿ ಪಡೆದಿರಬೇಕು.

    ಇದನ್ನು ಓದಿ: ಕ್ಯಾಪ್​ಜೆಮಿನಿ ಕಂಪನಿಯಲ್ಲಿ ಬಿಇ ಫ್ರೆಶರ್​ ಅಭ್ಯರ್ಥಿಗಳಿಗಿದೆ ಉದ್ಯೋಗಾವಕಾಶ

    ವಯೋಮಿತಿ: ನೇಮಕಾತಿ ನಿಯಮ ಅನುಸಾರ ಅಭ್ಯರ್ಥಿಯು ಕನಿಷ್ಟ 18 ಮತ್ತು ಗರಿಷ್ಟ 65 ವರ್ಷಗಳನ್ನು ಮೀರಿರಬಾರದು.

    ಅರ್ಜಿ ಶುಲ್ಕ: ವಿನಾಯಿತಿ

    ನೇರ ಸಂದರ್ಶನ ನಡೆಯುವ ಸ್ಥಳ
    ಡಿಆರ್​ಎಂ ಕಚೇರಿ, ಭುಸಾವಲ್​​

    ಪ್ರಮುಖ ದಿನಾಂಕಗಳು
    ಅಧಿಕೃತ ಅಧಿಸೂಚನೆ ಬಿಡುಗಡೆ ದಿನಾಂಕ: 6 ಸೆಪ್ಟೆಂಬರ್​ 2022
    ನೇರ ಸಂದರ್ಶನ ನಡೆಯುವ ದಿನಾಂಕ: 4 ಅಕ್ಟೋಬರ್​ 2022
    ನೇರ ಸಂದರ್ಶನದ ಸಮಯ: ಬೆಳಗ್ಗೆ 10ರಿಂದ ಸಂಜೆ 5ರವರೆಗೆ

    ಪ್ರಮುಖ ಲಿಂಕ್​ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್​ಗೆ ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್​ಸೈಟ್​: indianrailways.gov.in

    ಇದನ್ನು ಓದಿ: ಬಿಇಎಲ್​ನಲ್ಲಿ 24 ಡೆಪ್ಯುಟಿ ಇಂಜಿನಿಯರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

    ನೇರ ಸಂದರ್ಶನಕ್ಕೆ ಈ ದಾಖಲಾತಿ ಅವಶ್ಯ
    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    -ಬಳಿಕ ಅಧಿಸೂಚನೆ ವೇಳೆ ನೀಡಲಾಗಿರುವ ನಿಗದಿತ ಅರ್ಜಿಗಳನ್ನು ಭರ್ತಿ ಮಾಡಬೇಕು
    ಅಭ್ಯರ್ಥಿಗಳು ಒಂದು ಸೆಟ್ ಸ್ವಯಂ-ದೃಢೀಕರಿಸಿದ ಪ್ರತಿಗಳು, ಒಂದು ಪಾಸ್‌ಪೋರ್ಟ್ ಫೋಟೋ ಜೋತೆ ಪ್ರಶಂಸಾಪತ್ರಗಳನ್ನು ನೇರ ಸಂದರ್ಶನ ವೇಳೆ ಹಾಜರು ಪಡಿಸಬೇಕು.

    -ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್​ಎಸ್​ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು

    -ನೇರ ಸಂದರ್ಶನದ ನಿಗದಿತ ದಿನದಂದು ಬೆಳಗ್ಗೆ 9.30ಕ್ಕೆ ಹಾಜರಾಗಬೇಕು
    Published by:Seema R
    First published: