Central Railway Recruitment 2021: ಸೆಂಟ್ರಲ್ ರೈಲ್ವೆಯಲ್ಲಿ ಶಿಕ್ಷಕ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 27,500

ಟ್ರೈನ್ಡ್​ ಗ್ರಾಜುಯೇಟ್​​ ಟೀಚರ್, ಪೋಸ್ಟ್​ ಗ್ರಾಜುಯೇಟ್ ಟೀಚರ್, ಪ್ರೈಮರಿ ಟೀಚರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-65 ವರ್ಷದೊಳಗಿರಬೇಕು.

ಕೇಂದ್ರೀಯ ರೈಲ್ವೆ

ಕೇಂದ್ರೀಯ ರೈಲ್ವೆ

  • Share this:
Central Railway Recruitment 2021: ಸೆಂಟ್ರಲ್​ ರೈಲ್ವೆ(Central Railway)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಟ್ರೈನ್ಡ್​ ಗ್ರಾಜುಯೇಟ್​​ ಟೀಚರ್(Trained Graduate Teacher), ಪೋಸ್ಟ್​ ಗ್ರಾಜುಯೇಟ್ ಟೀಚರ್(Post Graduate Teacher), ಪ್ರೈಮರಿ ಟೀಚರ್(Primary Teacher) ಹುದ್ದೆಗಳು ಖಾಲಿ ಇವೆ. PUC, ಬಿ.ಎಡ್, ಬಿಎಸ್ಸಿ, ಬಿಎ, ಎಂಸ್ಸಿ, ಎಂಎ, ಎಂ.ಕಾಂ, CTET, D. Ed ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ನೇರ ಸಂದರ್ಶನದ(Walk-in-Interview) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದೇ ನವೆಂಬರ್ 25, 26 ಮತ್ತು 27ರಂದು ಸಂದರ್ಶನ ನಡೆಯಲಿದೆ.

ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆಸೆಂಟ್ರಲ್ ರೈಲ್ವೆ
ಹುದ್ದೆಯ ಹೆಸರುಟ್ರೈನ್ಡ್​ ಗ್ರಾಜುಯೇಟ್​​ ಟೀಚರ್, ಪೋಸ್ಟ್​ ಗ್ರಾಜುಯೇಟ್ ಟೀಚರ್, ಪ್ರೈಮರಿ ಟೀಚರ್
ಒಟ್ಟು ಹುದ್ದೆಗಳು10
ವಿದ್ಯಾರ್ಹತೆPUC, ಬಿ.ಎಡ್, ಬಿಎಸ್ಸಿ, ಬಿಎ, ಎಂಸ್ಸಿ, ಎಂಎ, ಎಂ.ಕಾಂ, CTET, D. Ed
ವೇತನಮಾಸಿಕ ₹ 21,250-27,500
ಉದ್ಯೋಗದ ಸ್ಥಳಮುಂಬೈ
 ಆಯ್ಕೆ ವಿಧಾನನೇರ ಸಂದರ್ಶನ
ನೋಟಿಫಿಕೇಶನ್ ಬಿಡುಗಡೆ ದಿನಾಂಕ18/11/2021
ಸಂದರ್ಶನ ನಡೆಯುವ ದಿನಾಂಕನವೆಂಬರ್ 25, 26 & 27, 2021



ಪ್ರಮುಖ ದಿನಾಂಕಗಳು:

ನೋಟಿಫಿಕೇಶನ್ ಬಿಡುಗಡೆ ದಿನಾಂಕ: 18/11/2021
ಸಂದರ್ಶನದ ದಿನಾಂಕ: ನವೆಂಬರ್ 25, 26 & 27, 2021

ಇದನ್ನೂ ಓದಿ: HAL Recruitment 2021: ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​​​ನಲ್ಲಿ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳು ಖಾಲಿ

ವಯೋಮಿತಿ:

ಟ್ರೈನ್ಡ್​ ಗ್ರಾಜುಯೇಟ್​​ ಟೀಚರ್, ಪೋಸ್ಟ್​ ಗ್ರಾಜುಯೇಟ್ ಟೀಚರ್, ಪ್ರೈಮರಿ ಟೀಚರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-65 ವರ್ಷದೊಳಗಿರಬೇಕು.

ಉದ್ಯೋಗದ ಸ್ಥಳ:

ಟ್ರೈನ್ಡ್​ ಗ್ರಾಜುಯೇಟ್​​ ಟೀಚರ್, ಪೋಸ್ಟ್​ ಗ್ರಾಜುಯೇಟ್ ಟೀಚರ್, ಪ್ರೈಮರಿ ಟೀಚರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಹಾರಾಷ್ಟ್ರದ ಮುಂಬೈನಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:

ಟ್ರೈನ್ಡ್​ ಗ್ರಾಜುಯೇಟ್​​ ಟೀಚರ್, ಪೋಸ್ಟ್​ ಗ್ರಾಜುಯೇಟ್ ಟೀಚರ್, ಪ್ರೈಮರಿ ಟೀಚರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 21,250-27,500 ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಇದನ್ನೂ ಓದಿ: Central Bank of India Recruitment 2021: ತಿಂಗಳಿಗೆ 1 ಲಕ್ಷ ಸಂಬಳ, ಸೆಂಟ್ರಲ್ ಬ್ಯಾಂಕ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳು ಖಾಲಿ

ಸಂದರ್ಶನ ನಡೆಯುವ ಸ್ಥಳ:

ಪ್ರಿನ್ಸಿಪಾಲ್ ಚೇಂಬರ್,
ಸೆಂಟ್ರಲ್​ ರೈಲ್ವೆ ಸೆಕ್ಷನ್ & ಸ್ಕೂಲ್​ ಜೂನಿಯರ್ ಕಾಲೇಜು, ಕಲ್ಯಾಣ್


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: