UPSC Recruitment 2023: ಕೇಂದ್ರ ಲೋಕಸೇವಾ ಆಯೋಗ(Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 20 ಜಾಯಿಂಟ್ ಸೆಕ್ರೆಟರಿ, ಡೈರೆಕ್ಟರ್ / ಡೆಪ್ಯುಟಿ ಸೆಕ್ರೆಟರಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜೂನ್ 19, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಆಸಕ್ತರು ಆನ್ಲೈನ್(Online) ಮೂಲಕ ಅರ್ಜಿ ಹಾಕಿ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕೇಂದ್ರ ಲೋಕಸೇವಾ ಆಯೋಗ |
ಹುದ್ದೆ | ಜಾಯಿಂಟ್ ಸೆಕ್ರೆಟರಿ, ಡೈರೆಕ್ಟರ್ / ಡೆಪ್ಯುಟಿ ಸೆಕ್ರೆಟರಿ |
ಒಟ್ಟು ಹುದ್ದೆ | 20 |
ವಿದ್ಯಾರ್ಹತೆ | ಸ್ನಾತಕೋತ್ತರ ಪದವಿ, ಬಿಇ/ಬಿ.ಟೆಕ್ |
ವೇತನ | ಮಾಸಿಕ ₹ 1,43,000-2,66,000 |
ಉದ್ಯೋಗದ ಸ್ಥಳ | ಭಾರತದಲ್ಲಿ ಎಲ್ಲಿ ಬೇಕಾದರೂ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಜೂನ್ 19, 2023 |
ವಿದ್ಯಾರ್ಹತೆ:
ಕೇಂದ್ರ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ, ಎಲ್ಎಲ್ಬಿ, ಪಿಎಚ್.ಡಿ, ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಜಾಯಿಂಟ್ ಸೆಕ್ರೆಟರಿ - 40ರಿಂದ 55 ವರ್ಷ
ಡೈರೆಕ್ಟರ್ / ಡೆಪ್ಯುಟಿ ಸೆಕ್ರೆಟರಿ- 32 ರಿಂದ 45 ವರ್ಷ
ವೇತನ:
ಜಾಯಿಂಟ್ ಸೆಕ್ರೆಟರಿ - ಮಾಸಿಕ ₹ 2,66,000
ಡೈರೆಕ್ಟರ್ / ಡೆಪ್ಯುಟಿ ಸೆಕ್ರೆಟರಿ- ಮಾಸಿಕ ₹ 1,43,000-2,18,000
ಇದನ್ನೂ ಓದಿ: Jobs in Bengaluru: ಕೆನರಾ ಬ್ಯಾಂಕ್ನಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ- ಡಿಗ್ರಿ ಆದವರಿಗೆ ಅವಕಾಶ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ನೋಟಿಫಿಕೇಶನ್ ಇಲ್ಲಿದೆ-UPSC- ಅಧಿಸೂಚನೆ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 19, 2023
ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 011- 23385271/011-23381125/011-23098543 ಗೆ ಕರೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ