UPSC Recruitment 2023: ಕೇಂದ್ರ ಲೋಕಸೇವಾ ಆಯೋಗ(Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 744 ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಯ ಪೋಸ್ಟ್‌ಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜೂನ್ 6, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ಆಸಕ್ತರು ಆನ್‌ಲೈನ್(Online) ಮೂಲಕ ಅರ್ಜಿ ಹಾಕಿ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕೇಂದ್ರ ಲೋಕಸೇವಾ ಆಯೋಗ |
ಹುದ್ದೆ | ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆ |
ಒಟ್ಟು ಹುದ್ದೆ | 744 |
ವಿದ್ಯಾರ್ಹತೆ | ಎಂಜಿನಿಯರಿಂಗ್, ಪದವಿ, 12ನೇ ತರಗತಿ |
ವೇತನ | ಮಾಸಿಕ ₹ 56,100-2,25,500 |
ಉದ್ಯೋಗದ ಸ್ಥಳ | ಭಾರತದಲ್ಲಿ ಎಲ್ಲಿ ಬೇಕಾದರೂ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಜೂನ್ 6, 2023 |
ವಿದ್ಯಾರ್ಹತೆ:
ಇಂಡಿಯನ್ ಮಿಲಿಟರಿ ಅಕಾಡೆಮಿ- ಪದವಿ
ಇಂಡಿಯನ್ ನೇವಲ್ ಅಕಾಡೆಮಿ- ಎಂಜಿನಿಯರಿಂಗ್
ಏರ್ಫೋರ್ಸ್ ಅಕಾಡೆಮಿ- ಎಂಜಿನಿಯರಿಂಗ್
ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (ಪುರುಷ)- ಪದವಿ
ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (ಮಹಿಳೆ)- 12ನೇ ತರಗತಿ
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಆರ್ಮಿ)- 12ನೇ ತರಗತಿ
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ನೇವಿ)- 12ನೇ ತರಗತಿ
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಏರ್ಫೋರ್ಸ್)- 12ನೇ ತರಗತಿ
ನೇವಲ್ ಅಕಾಡೆಮಿ- 12ನೇ ತರಗತಿ
ವೇತನ:
ಲೆಫ್ಟಿನೆಂಟ್- ಮಾಸಿಕ ₹ 56,100-1,77,500
ಕ್ಯಾಪ್ಟನ್- ಮಾಸಿಕ ₹ 61,300-1,93,900
ಮೇಜರ್- ಮಾಸಿಕ ₹ 69,400-2,07,200
ಲೆಫ್ಟಿನೆಂಟ್ ಕೊಲೊನೆಲ್- ಮಾಸಿಕ ₹ 1,21,200-2,12,400
ಕೊಲೊನೆಲ್- ಮಾಸಿಕ ₹ 1,30,600- 2,15,900
ಬ್ರಿಗೇಡರ್- ಮಾಸಿಕ ₹ 1,39,600-2,17,600
ಮೇಜರ್ ಜನರಲ್- ಮಾಸಿಕ ₹ 1,44,200-2,18,200
ಲೆಫ್ಟಿನೆಂಟ್ ಜನರಲ್ HAG ಸ್ಕೇಲ್- ಮಾಸಿಕ ₹ 1,82,200- 2,24,100
HAG + ಸ್ಕೇಲ್- ಮಾಸಿಕ ₹ 2,05,400- 2,24,400
VCOAS/ಆರ್ಮಿ ಕೇಡರ್/ ಲೆಫ್ಟಿನೆಂಟ್ ಜನರಲ್ (NFSG)-ಮಾಸಿಕ ₹ 2,25,000
COAS- ಮಾಸಿಕ ₹ 2,25,000
ಇದನ್ನೂ ಓದಿ: Banking Jobs: ಸೆಂಟ್ ಬ್ಯಾಂಕ್ನಲ್ಲಿ CA ಆದವರಿಗೆ ಬಂಪರ್ ಉದ್ಯೋಗ- ಬೇಗ ಅರ್ಜಿ ಹಾಕಿ
ವಯೋಮಿತಿ:
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನ್ಯಾಷನಲ್ ನೇವಲ್ ಅಕಾಡೆಮಿ: ಜನವರಿ 2, 2005 ಕ್ಕಿಂತ ಮೊದಲು ಮತ್ತು ಜನವರಿ 1, 2008 ಕ್ಕಿಂತ ನಂತರ ಜನಿಸಿದ ಅವಿವಾಹಿತ ಪುರುಷ/ಮಹಿಳಾ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ:
IMA ಮತ್ತು ಇಂಡಿಯನ್ ನೇವಲ್ ಅಕಾಡೆಮಿಗೆ, ಜುಲೈ 2, 2000 ಕ್ಕಿಂತ ಮೊದಲು ಮತ್ತು ಜುಲೈ 1, 2005 ಕ್ಕಿಂತ ನಂತರ ಜನಿಸಿದ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಹರು
.
ಏರ್ ಫೋರ್ಸ್ ಅಕಾಡೆಮಿಗೆ, ಜುಲೈ 1, 2024 ಕ್ಕೆ ಅಭ್ಯರ್ಥಿಗಳ ಕನಿಷ್ಠ ಮತ್ತು ಗರಿಷ್ಠ ವಯಸ್ಸಿನ ಮಿತಿ 20 ರಿಂದ 24 ವರ್ಷಗಳು (ಅಭ್ಯರ್ಥಿಗಳು 02-ಜುಲೈ-2000 ಕ್ಕಿಂತ ಮೊದಲು ಜನಿಸಿರಬಾರದು ಮತ್ತು 01-ಜುಲೈ-2004 ಕ್ಕಿಂತ ನಂತರ ಜನಿಸಿರಬಾರದು)
ವಯೋಮಿತಿ ಸಡಿಲಿಕೆ:
DGCA (ಭಾರತ) ನೀಡಿದ ಮಾನ್ಯ ಮತ್ತು ಪ್ರಸ್ತುತ ವಾಣಿಜ್ಯ ಪೈಲಟ್ ಪರವಾನಗಿ ಹೊಂದಿರುವ ಅಭ್ಯರ್ಥಿಗಳು: ಏರ್ ಫೋರ್ಸ್ ಅಕಾಡೆಮಿಗೆ 02 ವರ್ಷಗಳು
ಅರ್ಜಿ ಶುಲ್ಕ:
SC/ST/ ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ.
ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ:
ಎಲ್ಲಾ ಇತರ ಅಭ್ಯರ್ಥಿಗಳು: ರೂ.200/-
ಪಾವತಿ ವಿಧಾನ: ಆನ್‌ಲೈನ್
ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆ:
ಎಲ್ಲಾ ಇತರ ಅಭ್ಯರ್ಥಿಗಳು: ರೂ.100/-
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸೈಕಾಲಜಿಕಲ್ ಆಪ್ಟಿಟ್ಯೂಡ್ ಟೆಸ್ಟ್
ಇಂಟೆಲಿಜೆನ್ಸ್ ಟೆಸ್ಟ್
ಸಂದರ್ಶನ
ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆಗಳು:
ಲಿಖಿತ ಪರೀಕ್ಷೆ
ಪೈಲಟ್ ಆಪ್ಟಿಟ್ಯೂಡ್ ಟೆಸ್ಟ್
ಸಂದರ್ಶನ
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 6, 2023
ಅರ್ಜಿ ನಮೂನೆಯಲ್ಲಿ ಬದಲಾವಣೆಯ ದಿನಾಂಕ: 07 ರಿಂದ 13ನೇ ಜೂನ್ 2023
ಪರೀಕ್ಷೆಯ ಪ್ರಾರಂಭದ ದಿನಾಂಕ: 03-ಸೆಪ್ಟೆಂಬರ್-2023
ಇಂಡಿಯನ್ ನೇವಲ್ ಅಕಾಡೆಮಿ ಕೋರ್ಸ್‌ನ ಪ್ರಾರಂಭದ ದಿನಾಂಕ: 02-ಜುಲೈ-2024
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ