UPSC Recruitment 2023: ಕೇಂದ್ರ ಲೋಕಸೇವಾ ಆಯೋಗ(Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1312 ಭಾರತೀಯ ಆರ್ಥಿಕ ಸೇವೆ, ಸಂಯೋಜಿತ ವೈದ್ಯಕೀಯ ಸೇವಾ ಪರೀಕ್ಷೆಯ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮೇ 9, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ಆಸಕ್ತರು ಆನ್ಲೈನ್(Online) ಮೂಲಕ ಅರ್ಜಿ ಹಾಕಿ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕೇಂದ್ರ ಲೋಕಸೇವಾ ಆಯೋಗ |
ಹುದ್ದೆ | ಭಾರತೀಯ ಆರ್ಥಿಕ ಸೇವೆ, ಸಂಯೋಜಿತ ವೈದ್ಯಕೀಯ ಸೇವಾ ಪರೀಕ್ಷೆಯ ಹುದ್ದೆ |
ಒಟ್ಟು ಹುದ್ದೆ | 1312 |
ವಿದ್ಯಾರ್ಹತೆ | ಸ್ನಾತಕೋತ್ತರ ಪದವಿ, ಎಂಬಿಬಿಎಸ್ |
ವೇತನ | ಮಾಸಿಕ ₹ 56,100-1,77,500 |
ಉದ್ಯೋಗದ ಸ್ಥಳ | ಭಾರತದಲ್ಲಿ ಎಲ್ಲಿ ಬೇಕಾದರೂ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮೇ 9, 2023 |
ಇದನ್ನೂ ಓದಿ: School Teachers Hiring: ಲಕ್ಷಾಂತರ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್- ಶೀಘ್ರದಲ್ಲೇ ಒಂದೂವರೆ ಲಕ್ಷ ಶಿಕ್ಷಕರ ನೇಮಕಾತಿ
ವಿದ್ಯಾರ್ಹತೆ:
ಭಾರತೀಯ ಆರ್ಥಿಕ ಸೇವೆ/ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ- ಸ್ನಾತಕೋತ್ತರ ಪದವಿ
ಸಂಯೋಜಿತ ವೈದ್ಯಕೀಯ ಸೇವಾ ಪರೀಕ್ಷೆ- ಎಂಬಿಬಿಎಸ್
ವಯೋಮಿತಿ:
ಭಾರತೀಯ ಆರ್ಥಿಕ ಸೇವೆ/ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ- 21ರಿಂದ 30 ವರ್ಷ
ಸಂಯೋಜಿತ ವೈದ್ಯಕೀಯ ಸೇವಾ ಪರೀಕ್ಷೆ- 32 ವರ್ಷ
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PwBD ಅಭ್ಯರ್ಥಿಗಳು- 10 ವರ್ಷ
ವೇತನ:
ಭಾರತೀಯ ಆರ್ಥಿಕ ಸೇವೆ/ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ- ನಿಗದಿಪಡಿಸಿಲ್ಲ
ಸಂಯೋಜಿತ ವೈದ್ಯಕೀಯ ಸೇವಾ ಪರೀಕ್ಷೆ- ಮಾಸಿಕ ₹ 56,100-1,77,500
ಇದನ್ನೂ ಓದಿ: CFTRI Recruitment 2023: ಮೈಸೂರಿನ CFTRI ಸಂಸ್ಥೆಯಲ್ಲಿ ಕೆಲಸ ಖಾಲಿ ಇದೆ- ಆಸಕ್ತರು ನಾಳೆಯೊಳಗೆ ಅರ್ಜಿ ಹಾಕಿ
ಅರ್ಜಿ ಶುಲ್ಕ:
SC/ST/ಮಹಿಳಾ/ PwBD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳು- 200 ರೂ.
ಪಾವತಿಸುವ ಬಗೆ- ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪರೀಕ್ಷೆಯ ವಿವರ:
ಭಾರತೀಯ ಆರ್ಥಿಕ ಸೇವೆ/ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ- ಜೂನ್ 23, 2023
ಸಂಯೋಜಿತ ವೈದ್ಯಕೀಯ ಸೇವಾ ಪರೀಕ್ಷೆ- ಜುಲೈ 16, 2023
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 9, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ