UPSC Recruitment 2023: ಕೇಂದ್ರ ಲೋಕಸೇವಾ ಆಯೋಗ (Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಿ. ಒಟ್ಟು 73 ಫೋರ್ಮ್ಯಾನ್(Foreman), ಅಸಿಸ್ಟೆಂಟ್ ಕಂಟ್ರೋಲರ್(Assistant Controller) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್ 2, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ((Last Date)). ಆಸಕ್ತರು ಆನ್ಲೈನ್(Online) ಮೂಲಕ ಅರ್ಜಿ ಹಾಕಿ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕೇಂದ್ರ ಲೋಕಸೇವಾ ಆಯೋಗ |
ಹುದ್ದೆ | ಫೋರ್ಮ್ಯಾನ್, ಅಸಿಸ್ಟೆಂಟ್ ಕಂಟ್ರೋಲರ್ |
ಒಟ್ಟು ಹುದ್ದೆ | 73 |
ವಿದ್ಯಾರ್ಹತೆ | ಎಂಜಿನಿಯರಿಂಗ್ |
ವೇತನ | ನಿಯಮಾನುಸಾರ |
ಉದ್ಯೋಗದ ಸ್ಥಳ | ಭಾರತದಲ್ಲಿ ಎಲ್ಲಿ ಬೇಕಾದರೂ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 2, 2023 |
ಇದನ್ನೂ ಓದಿ:Banking Jobs: ಡಿಗ್ರಿ ಪಾಸಾದವರಿಗೆ ಬ್ಯಾಂಕ್ ಆಫ್ ಬರೋಡಾದಲ್ಲಿದೆ ಬಂಪರ್ ಉದ್ಯೋಗ- 18 ಲಕ್ಷ ಸಂಬಳ
ವಿದ್ಯಾರ್ಹತೆ:
ಫೋರ್ಮ್ಯಾನ್ (ಏರೋನಾಟಿಕಲ್)- ಏರೋನಾಟಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ
ಫೋರ್ಮ್ಯಾನ್ (ಕೆಮಿಕಲ್)- ಕೆಮಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ, ಸ್ನಾತಕೋತ್ತರ ಪದವಿ
ಫೋರ್ಮ್ಯಾನ್ ಕಂಪ್ಯೂಟರ್ (ಐಟಿ)- ಕಂಪ್ಯೂಟರ್ ಎಂಜಿನಿಯರಿಂಗ್ನಲ್ಲಿ ಪದವಿ
ಫೋರ್ಮ್ಯಾನ್ (ಎಲೆಕ್ಟ್ರಿಕಲ್)- ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ
ಫೋರ್ಮ್ಯಾನ್ (ಎಲೆಕ್ಟ್ರಾನಿಕ್ಸ್)- ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಪದವಿ, ಸ್ನಾತಕೋತ್ತರ ಪದವಿ
ಫೋರ್ಮ್ಯಾನ್ (ಲೋಹಶಾಸ್ತ್ರ)- ಲೋಹಶಾಸ್ತ್ರ ಎಂಜಿನಿಯರಿಂಗ್ನಲ್ಲಿ ಪದವಿ
ಫೋರ್ಮ್ಯಾನ್ (ಟೆಕ್ಸ್ಟೈಲ್) - ಟೆಕ್ಸ್ಟೈಲ್ ಎಂಜಿನಿಯರಿಂಗ್ನಲ್ಲಿ ಪದವಿ
ಡೆಪ್ಯುಟಿ ಡೈರೆಕ್ಟರ್ ಆಫ್ ಎಂಪ್ಲಾಯ್ಮೆಂಟ್ - ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಕಂಟ್ರೋಲರ್ ಆಫ್ ಮೈನ್ಸ್- ಮೈನಿಂಗ್ ಎಂಜಿನಿಯರಿಂಗ್ನಲ್ಲಿ ಪದವಿ, ಸ್ನಾತಕೋತ್ತರ ಪದವಿ
ಲೇಬರ್ ಆಫೀಸರ್- ಪದವಿ, ಸ್ನಾತಕೋತ್ತರ ಪದವಿ
ವಯೋಮಿತಿ:
ಫೋರ್ಮ್ಯಾನ್ (ಏರೋನಾಟಿಕಲ್)- 30 ವರ್ಷ
ಫೋರ್ಮ್ಯಾನ್ (ಕೆಮಿಕಲ್)- 30 ವರ್ಷ
ಫೋರ್ಮ್ಯಾನ್ ಕಂಪ್ಯೂಟರ್ (ಐಟಿ)- 30 ವರ್ಷ
ಫೋರ್ಮ್ಯಾನ್ (ಎಲೆಕ್ಟ್ರಿಕಲ್)- 30 ವರ್ಷ
ಫೋರ್ಮ್ಯಾನ್ (ಎಲೆಕ್ಟ್ರಾನಿಕ್ಸ್)- 30 ವರ್ಷ
ಫೋರ್ಮ್ಯಾನ್ (ಲೋಹಶಾಸ್ತ್ರ)- 30 ವರ್ಷ
ಫೋರ್ಮ್ಯಾನ್ (ಟೆಕ್ಸ್ಟೈಲ್) - 30 ವರ್ಷ
ಡೆಪ್ಯುಟಿ ಡೈರೆಕ್ಟರ್ ಆಫ್ ಎಂಪ್ಲಾಯ್ಮೆಂಟ್ - 40 ವರ್ಷ
ಅಸಿಸ್ಟೆಂಟ್ ಕಂಟ್ರೋಲರ್ ಆಫ್ ಮೈನ್ಸ್- 35 ವರ್ಷ
ಲೇಬರ್ ಆಫೀಸರ್- 33 ವರ್ಷ
ಇದನ್ನೂ ಓದಿ: Job Alert: ಬೆಂಗಳೂರು ನಗರ ಜಿಲ್ಲಾ ಪಂಚಾಯತ್ನಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ ₹ 50,000 ಸಂಬಳ
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PWD (UR) ಅಭ್ಯರ್ಥಿಗಳು- 10 ವರ್ಷ
PWD (OBC) ಅಭ್ಯರ್ಥಿಗಳು- 13 ವರ್ಷ
PWD (SC/ST) ಅಭ್ಯರ್ಥಿಗಳು- 15 ವರ್ಷ
ಅರ್ಜಿ ಶುಲ್ಕ:
SC/ST/PWD/ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಸಾಮಾನ್ಯ/ಒಬಿಸಿ/EWS ಅಭ್ಯರ್ಥಿಗಳು- 25 ರೂ.
ಪಾವತಿಸುವ ವಿಧಾನ- ಆನ್ಲೈನ್/ ಕ್ಯಾಶ್
ಆಯ್ಕೆ ಪ್ರಕ್ರಿಯೆ:
ನೇಮಕಾತಿ ಟೆಸ್ಟ್
ಸಂದರ್ಶನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ- 11/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 2, 2023
ಹೆಚ್ಚಿನ ವಿವರಗಳಿಗಾಗಿ ಹಾಗೂ ಯಾವುದೇ ಗೊಂದಲಗಳಿದ್ದಲ್ಲಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 011- 23385271/011 -23381125/011 -23098543 ಗೆ ಕರೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ