UPSC Recruitment 2022: ಕೇಂದ್ರ ಲೋಕಸೇವಾ ಆಯೋಗವು(Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಜೂನಿಯರ್ ಮೈನಿಂಗ್ ಜಿಯಾಲಜಿಸ್ಟ್, ಕೆಮಿಸ್ಟ್ ಸೇರಿದಂತೆ ಒಟ್ಟು 43 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು(Candidates) ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಡಿಸೆಂಬರ್ 15, 2022 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಹಾಕಬೇಕು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕೇಂದ್ರ ಲೋಕಸೇವಾ ಆಯೋಗ |
ಹುದ್ದೆ | ಜೂನಿಯರ್ ಮೈನಿಂಗ್ ಜಿಯಾಲಜಿಸ್ಟ್, ಕೆಮಿಸ್ಟ್ |
ಒಟ್ಟು ಹುದ್ದೆ | 43 |
ಉದ್ಯೋಗದ ಸ್ಥಳ | ಭಾರತದಲ್ಲಿ ಎಲ್ಲಿ ಬೇಕಾದರೂ |
ವೇತನ | ನಿಯಮಾನುಸಾರ |
ವಿದ್ಯಾರ್ಹತೆ | ಎಂಜಿನಿಯರಿಂಗ್, ಸ್ನಾತಕೋತ್ತರ ಪದವಿ |
ವಿದ್ಯಾರ್ಹತೆ:
ಸಹಾಯಕ ಕೃಷಿ ಮಾರುಕಟ್ಟೆ ಸಲಹೆಗಾರರು- ಸ್ನಾತಕೋತ್ತರ ಪದವಿ
ಹಿರಿಯ ವೈಜ್ಞಾನಿಕ ಸಹಾಯಕ (ಏರೋನಾಟಿಕಲ್)- ಏರೋನಾಟಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ
ಹಿರಿಯ ವೈಜ್ಞಾನಿಕ ಸಹಾಯಕ (ಎಲೆಕ್ಟ್ರಿಕಲ್)- ಎಲೆಕ್ಟ್ರಿಕಲ್ ಎಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಪದವಿ
ಹಿರಿಯ ವೈಜ್ಞಾನಿಕ ಸಹಾಯಕ (ಎಲೆಕ್ಟ್ರಾನಿಕ್ಸ್)- ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಪದವಿ
ಹಿರಿಯ ವೈಜ್ಞಾನಿಕ ಸಹಾಯಕ (ರಾಸಾಯನಿಕ)- ಕೆಮಿಕಲ್ ಎಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಪದವಿ
ಹಿರಿಯ ವೈಜ್ಞಾನಿಕ ಸಹಾಯಕ (ಕಂಪ್ಯೂಟರ್)- ಕಂಪ್ಯೂಟರ್ ಎಂಜಿನಿಯರಿಂಗ್ನಲ್ಲಿ ಪದವಿ/ ಐಟಿ
ಹಿರಿಯ ವೈಜ್ಞಾನಿಕ ಸಹಾಯಕ (ಮೆಕ್ಯಾನಿಕಲ್) - ಮೆಕ್ಯಾನಿಕಲ್ ಎಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಪದವಿ
ಹಿರಿಯ ವೈಜ್ಞಾನಿಕ ಸಹಾಯಕ (ಲೋಹಶಾಸ್ತ್ರ)- ಲೋಹಶಾಸ್ತ್ರ ಎಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಪದವಿ
ಹಿರಿಯ ವೈಜ್ಞಾನಿಕ ಸಹಾಯಕ (ಜವಳಿ) - ಜವಳಿ ಎಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಪದವಿ
ಸ್ಪೆಷಲಿಸ್ಟ್ ಗ್ರೇಡ್-III - ಎಂಬಿಬಿಎಸ್, ಸ್ನಾತಕೋತ್ತರ ಪದವಿ
ಜೂನಿಯರ್ ಮೈನಿಂಗ್ ಭೂವಿಜ್ಞಾನಿ- ಸ್ನಾತಕೋತ್ತರ ಪದವಿ
ಸಹಾಯಕ ಗಣಿಗಾರಿಕೆ ಭೂವಿಜ್ಞಾನಿ- ಸ್ನಾತಕೋತ್ತರ ಪದವಿ
ರಸಾಯನಶಾಸ್ತ್ರಜ್ಞ- ಸ್ನಾತಕೋತ್ತರ ಪದವಿ
ಇದನ್ನೂ ಓದಿ: ESIC Karnataka: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ 67 ಸಾವಿರ ಸಂಬಳ
ವಯೋಮಿತಿ:
ಸಹಾಯಕ ಕೃಷಿ ಮಾರುಕಟ್ಟೆ ಸಲಹೆಗಾರರು- ಗರಿಷ್ಠ 40 ವರ್ಷ
ಹಿರಿಯ ವೈಜ್ಞಾನಿಕ ಸಹಾಯಕ (ಏರೋನಾಟಿಕಲ್)- ಗರಿಷ್ಠ 30 ವರ್ಷ
ಹಿರಿಯ ವೈಜ್ಞಾನಿಕ ಸಹಾಯಕ (ಎಲೆಕ್ಟ್ರಿಕಲ್)- ಗರಿಷ್ಠ 30 ವರ್ಷ
ಹಿರಿಯ ವೈಜ್ಞಾನಿಕ ಸಹಾಯಕ (ಎಲೆಕ್ಟ್ರಾನಿಕ್ಸ್)- ಗರಿಷ್ಠ 30 ವರ್ಷ
ಹಿರಿಯ ವೈಜ್ಞಾನಿಕ ಸಹಾಯಕ (ರಾಸಾಯನಿಕ)- ಗರಿಷ್ಠ 30 ವರ್ಷ
ಹಿರಿಯ ವೈಜ್ಞಾನಿಕ ಸಹಾಯಕ (ಕಂಪ್ಯೂಟರ್)-ಗರಿಷ್ಠ 30 ವರ್ಷ
ಹಿರಿಯ ವೈಜ್ಞಾನಿಕ ಸಹಾಯಕ (ಮೆಕ್ಯಾನಿಕಲ್) -ಗರಿಷ್ಠ 30 ವರ್ಷ
ಹಿರಿಯ ವೈಜ್ಞಾನಿಕ ಸಹಾಯಕ (ಲೋಹಶಾಸ್ತ್ರ)- ಗರಿಷ್ಠ 30 ವರ್ಷ
ಹಿರಿಯ ವೈಜ್ಞಾನಿಕ ಸಹಾಯಕ (ಜವಳಿ) - ಗರಿಷ್ಠ 30 ವರ್ಷ
ಸ್ಪೆಷಲಿಸ್ಟ್ ಗ್ರೇಡ್-III - ಗರಿಷ್ಠ 40 ವರ್ಷ
ಜೂನಿಯರ್ ಮೈನಿಂಗ್ ಭೂವಿಜ್ಞಾನಿ- ಗರಿಷ್ಠ 35 ವರ್ಷ
ಸಹಾಯಕ ಗಣಿಗಾರಿಕೆ ಭೂವಿಜ್ಞಾನಿ- ಗರಿಷ್ಠ 30 ವರ್ಷ
ರಸಾಯನಶಾಸ್ತ್ರಜ್ಞ- ಗರಿಷ್ಠ 35 ವರ್ಷ
ನೋಟಿಫಿಕೇಶನ್ ಇಲ್ಲಿದೆ : 43-Junior-Mining-Geologist-Chemist-Posts-Advt-Details-UPSC
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
ಎಸ್ಸಿ/ಎಸ್ಟಿ ಅಭ್ಯರ್ಥಿಗಳು- 5 ವರ್ಷ
PWD (ಸಾಮಾನ್ಯ) ಅಭ್ಯರ್ಥಿಗಳು- 10 ವರ್ಷ
PWD (ಒಬಿಸಿ) ಅಭ್ಯರ್ಥಿಗಳು- 13 ವರ್ಷ
PWD(ಎಸ್ಸಿ/ಎಸ್ಟಿ) ಅಭ್ಯರ್ಥಿಗಳು- 15 ವರ್ಷ
ಅರ್ಜಿ ಶುಲ್ಕ:
ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಸಾಮಾನ್ಯ/ಒಬಿಸಿ/ EWS ಅಭ್ಯರ್ಥಿಗಳಿಗೆ 25 ರೂ. ಅರ್ಜಿ ಶುಲ್ಕ
ಅರ್ಜಿ ಶುಲ್ಕ ಪಾವತಿಸುವ ಬಗೆ- ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 15/12/2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ