Staff Selection Commission Recruitment 2022: ಸಿಬ್ಬಂದಿ ನೇಮಕಾತಿ ಆಯೋಗ(Staff Selection Commission-SSC)ವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಒಟ್ಟು 4500 ಅಂಚೆ ಕಚೇರಿ & ಡೇಟಾ ಎಂಟ್ರಿ ಸಹಾಯಕ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸಲು ಜನವರಿ 4, 2023 ಕೊನೆಯ ದಿನಾಂಕ(Last Date)ವಾಗಿದೆ. ಆಸಕ್ತರು ಕೂಡಲೇ ಅರ್ಜಿ ಹಾಕಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಸಿಬ್ಬಂದಿ ನೇಮಕಾತಿ ಆಯೋಗ |
ಹುದ್ದೆ | ಅಂಚೆ ಕಚೇರಿ & ಡೇಟಾ ಎಂಟ್ರಿ ಸಹಾಯಕ |
ಒಟ್ಟು ಹುದ್ದೆ | 4500 |
ವೇತನ | ಮಾಸಿಕ ₹ 29,200- 92,300 |
ವಿದ್ಯಾರ್ಹತೆ | ಪಿಯುಸಿ |
ವಿದ್ಯಾರ್ಹತೆ:
ಸಿಬ್ಬಂದಿ ನೇಮಕಾತಿ ಆಯೋಗ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ ಪಾಸಾಗಿರಬೇಕು.
ಇದನ್ನೂ ಓದಿ: NMPT Recruitment 2022: ಮಂಗಳೂರು ಪೋರ್ಟ್ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಿ- ಸಂಬಳ 70,000
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು-18-27 ವರ್ಷ
ಒಬಿಸಿ ಅಭ್ಯರ್ಥಿಗಳು- 18-30 ವರ್ಷ
SC/ST ಅಭ್ಯರ್ಥಿಗಳು- 18- 32 ವರ್ಷ
PH ಅಭ್ಯರ್ಥಿಗಳು-18-40 ವರ್ಷ
ವೇತನ ಎಷ್ಟು?
ಸಿಬ್ಬಂದಿ ನೇಮಕಾತಿ ಆಯೋಗ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 29,200- 92,300 ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 100ರೂ. ಅರ್ಜಿ ಶುಲ್ಕ ಪಾವತಿಸಬೇಕು.
SC/ST/PH ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ: Jobs: ಹಿಂದೂಸ್ತಾನ್ ಕಾಪರ್ ಲಿಮಿಟೆಡ್ನಲ್ಲಿ ಕೆಲಸ ಖಾಲಿ ಇದೆ- 10th, PU, ITI ಆಗಿದ್ರೆ ಅರ್ಜಿ ಹಾಕಿ
ಪರೀಕ್ಷಾ ಕೇಂದ್ರಗಳು:
ಮಂಗಳೂರು, ಉಡುಪಿ, ಮೈಸೂರು, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಗುಲ್ಬರ್ಗಾ ಮತ್ತು ಶಿವಮೊಗ್ಗದಲ್ಲಿ ಪರೀಕ್ಷೆ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ