• ಹೋಂ
  • »
  • ನ್ಯೂಸ್
  • »
  • Jobs
  • »
  • Job Alert: ಸ್ಟಾಫ್ ಸೆಲೆಕ್ಷನ್ ಕಮಿಷನ್​ನಲ್ಲಿ 10th ಪಾಸಾದವರಿಗೆ ಕೆಲಸ ಇದೆ- ಈಗಲೇ ಅರ್ಜಿ ಹಾಕಿ

Job Alert: ಸ್ಟಾಫ್ ಸೆಲೆಕ್ಷನ್ ಕಮಿಷನ್​ನಲ್ಲಿ 10th ಪಾಸಾದವರಿಗೆ ಕೆಲಸ ಇದೆ- ಈಗಲೇ ಅರ್ಜಿ ಹಾಕಿ

SSC

SSC

ಇದೇ ಫೆಬ್ರವರಿ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು.

  • News18 Kannada
  • 4-MIN READ
  • Last Updated :
  • New Delhi, India
  • Share this:

SSC Recruitment 2023: ಸ್ಟಾಫ್ ಸೆಲೆಕ್ಷನ್ ಕಮಿಷನ್(Staff Selection Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 12,523 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಫೆಬ್ರವರಿ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು.


ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ssc.nic.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಸ್ಟಾಫ್ ಸೆಲೆಕ್ಷನ್ ಕಮಿಷನ್
ಹುದ್ದೆಎಂಟಿಎಸ್​, ಹವಲ್ದಾರ್
ಒಟ್ಟು ಹುದ್ದೆ12,523
ವೇತನನಿಯಮಾನುಸಾರ
ವಿದ್ಯಾರ್ಹತೆ10ನೇ ತರಗತಿ, ಡಿಪ್ಲೊಮಾ, ಪದವಿ
ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 17, 2023

ಯಾವ್ಯಾವ ಹುದ್ದೆಗಳು ಖಾಲಿ ಇವೆ?
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)- 11,994
ಹವಲ್ದಾರ್ - 529


ವಿದ್ಯಾರ್ಹತೆ:
ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, ಡಿಪ್ಲೊಮಾ, ಪದವಿ ಪೂರ್ಣಗೊಳಿಸಿರಬೇಕು.


ಇದನ್ನೂ ಓದಿ: JOBS: ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಖಾಲಿ ಇದೆ- ಬೆಂಗಳೂರಿನಲ್ಲಿ ಪೋಸ್ಟಿಂಗ್


ವಯೋಮಿತಿ:
ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು- 5 ವರ್ಷ
OBC ಅಭ್ಯರ್ಥಿಗಳು- 3 ವರ್ಷ
PWD (UR) ಅಭ್ಯರ್ಥಿಗಳು-10 ವರ್ಷ
PWD (OBC) ಅಭ್ಯರ್ಥಿಗಳು- 13 ವರ್ಷ
PWD (SC/ST) ಅಭ್ಯರ್ಥಿಗಳು- 15 ವರ್ಷ


ಅರ್ಜಿ ಶುಲ್ಕ:
SC/ST/PWD/ಮಾಜಿ ಸೈನಿಕ & ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳು- 100 ರೂ.
ಪಾವತಿಸುವ ವಿಧಾನ: ಆನ್​ಲೈನ್​ / ಚಲನ್


ವೇತನ:
ನಿಗದಿಪಡಿಸಿಲ್ಲ


ಇದನ್ನೂ ಓದಿ: Police Jobs: 30 ಸಬ್​ ಇನ್ಸ್​ಪೆಕ್ಟರ್​​, ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಹಾಕಿ- ತಿಂಗಳಿಗೆ 1 ಲಕ್ಷ ಸಂಬಳ


ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ



ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ
ದಾಖಲಾತಿ ಪರಿಶೀಲನೆ


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 17, 2023
ಆನ್​ಲೈನ್​​ನಲ್ಲಿ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಫೆಬ್ರವರಿ 19, 2023
ಚಲನ್​ ಮೂಲಕ ಅರ್ಜಿ ಶುಲ್ಕ ಕಟ್ಟಲು ಕೊನೆಯ ದಿನ: ಫೆಬ್ರವರಿ 20, 2023
ಅರ್ಜಿ ತಿದ್ದುಪಡಿ ದಿನಾಂಕ- ಫೆಬ್ರವರಿ 23 & 24
ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯುವ ದಿನಾಂಕ: ಏಪ್ರಿಲ್ 2023

Published by:Latha CG
First published: