• Home
  • »
  • News
  • »
  • jobs
  • »
  • SSC Recruitment 2022: ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 10th ಪಾಸಾದವರು Apply ಮಾಡಿ

SSC Recruitment 2022: ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 10th ಪಾಸಾದವರು Apply ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸ್ಟಾಫ್​ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 23 ವರ್ಷ ಇರಬೇಕು.

  • Share this:

    SSC Recruitment 2022- ಸ್ಟಾಫ್ ಸೆಲೆಕ್ಷನ್ ಕಮಿಷನ್(Staff Selection Commission) ಖಾಲಿ ಇರುವ 24,369 ಕಾನ್ಸ್​ಟೇಬಲ್(ಜಿಡಿ)(Constable) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತರು ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸ್ಟಾಫ್​ ಸೆಲೆಕ್ಷನ್ ಕಮಿಷನ್​(SSC)ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೇಕು. ಕೇಂದ್ರ ಸರ್ಕಾರದ ಉದ್ಯೋಗ ಮಾಡಬಯಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಆಸಕ್ತರು ನವೆಂಬರ್ 30, 2022ರೊಳಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ssc.nic.in ಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಸ್ಟಾಫ್ ಸೆಲೆಕ್ಷನ್ ಕಮಿಷನ್
    ಹುದ್ದೆಯ ಹೆಸರುಕಾನ್ಸ್​ಟೇಬಲ್
    ಒಟ್ಟು ಹುದ್ದೆ24,369
    ವೇತನಮಾಸಿಕ ₹ 18,000-69,100
    ವಿದ್ಯಾರ್ಹತೆ10ನೇ ತರಗತಿ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/11/2022
    ಅರ್ಜಿ ಶುಲ್ಕ ಪಾವತಿಸಲು ಕೊನೇ ದಿನ: 01/12/2022
    ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ: ಜನವರಿ 2023


    ಹುದ್ದೆಯ ಮಾಹಿತಿ:
    ಬಿಎಸ್​ಎಫ್-10,497
    ಸಿಐಎಸ್​ಎಫ್​-100
    ಸಿಆರ್​ಪಿಎಫ್​-8911
    ಎಸ್​ಎಸ್​ಬಿ-1284
    ಐಟಿಬಿಪಿ-1613
    ಎಆರ್-1697
    ಎಸ್​ಎಸ್​ಎಫ್​-103
    ಎನ್​ಸಿಬಿ-164


    ಅರ್ಹತಾ ಮಾನದಂಡಗಳೇನು?


    ಶೈಕ್ಷಣಿಕ ಅರ್ಹತೆ
    ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಉತ್ತೀರ್ಣರಾಗಿರಬೇಕು.


    ವಯೋಮಿತಿ:
    ಸ್ಟಾಫ್​ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 23 ವರ್ಷ ಇರಬೇಕು.


    ಇದನ್ನೂ ಓದಿ: Jobs: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ರೋಡ್ ಸೇಫ್ಟಿ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ


    ವಯೋಮಿತಿ ಸಡಿಲಿಕೆ:
    ಒಬಿಸಿ/ ಮಾಜಿ ಸರ್ವೀಸ್​ಮೆನ್ ಅಭ್ಯರ್ಥಿಗಳು- 3 ವರ್ಷ
    ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು- 05 ವರ್ಷ


    ಅರ್ಜಿ ಶುಲ್ಕ:
    ಮಹಿಳಾ/ಎಸ್​​ಸಿ/ಎಸ್​ಟಿ/ಇಎಸ್​ಎಂ ಅಭ್ಯರ್ಥಿಗಳು- ಶುಲ್ಕ ಇಲ್ಲ
    ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ
    ಪಾವತಿಸುವ ಬಗೆ: ಆನ್​ಲೈನ್​​​/ಎಸ್​ಬಿಐ ಚಲನ್


    ವೇತನ:
    ಬಿಎಸ್​ಎಫ್-ಮಾಸಿಕ ₹21,700-69,100
    ಸಿಐಎಸ್​ಎಫ್​-ಮಾಸಿಕ ₹21,700-69,100
    ಸಿಆರ್​ಪಿಎಫ್​-ಮಾಸಿಕ ₹21,700-69,100
    ಎಸ್​ಎಸ್​ಬಿ-ಮಾಸಿಕ ₹21,700-69,100
    ಐಟಿಬಿಪಿ-ಮಾಸಿಕ ₹21,700-69,100
    ಎಆರ್-ಮಾಸಿಕ ₹21,700-69,100
    ಎಸ್​ಎಸ್​ಎಫ್​-ಮಾಸಿಕ ₹21,700-69,100
    ಎನ್​ಸಿಬಿ-ಮಾಸಿಕ ₹ 18,000-56,900


    ಇದನ್ನೂ ಓದಿ: Job Alert: ಹಿಂದಿ ಟ್ರಾನ್ಸ್​ಲೇಟರ್ ಹುದ್ದೆಗೆ 75,000 ಸಂಬಳ- ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ


    ಆಯ್ಕೆ ಪ್ರಕ್ರಿಯೆ:
    ಕಂಪ್ಯೂಟರ್ ಆಧಾರಿತ ಪರೀಕ್ಷೆ
    ದೈಹಿಕ ದಕ್ಷತೆ ಪರೀಕ್ಷೆ
    ದೈಹಿಕ ಮಾಪನ ಪರೀಕ್ಷೆ
    ದಾಖಲೆ ಪರಿಶೀಲನೆ
    ವೈದ್ಯಕೀಯ ಪರೀಕ್ಷೆ

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು