Spices Board Recruitment 2022: ಭಾರತೀಯ ಮಸಾಲೆ ಮಂಡಳಿ(Spices Board of India)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಕ್ಲರಿಕಲ್ ಅಸಿಸ್ಟೆಂಟ್(Clerical Assistant) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಡಿಕೇರಿ, ಸಕಲೇಶಪುರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಜನವರಿ 9, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಿ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಭಾರತೀಯ ಮಸಾಲೆ ಮಂಡಳಿ |
ಹುದ್ದೆ | ಕ್ಲರಿಕಲ್ ಅಸಿಸ್ಟೆಂಟ್ |
ಒಟ್ಟು ಹುದ್ದೆ | 2 |
ವೇತನ | ಮಾಸಿಕ ₹ 25,000 |
ಉದ್ಯೋಗದ ಸ್ಥಳ | ಮಡಿಕೇರಿ, ಸಕಲೇಶಪುರ |
ಶೈಕ್ಷಣಿಕ ಅರ್ಹತೆ:
ಭಾರತೀಯ ಮಸಾಲೆ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಭಾರತೀಯ ಮಸಾಲೆ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, 64 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: Post Office Jobs: 10ನೇ ತರಗತಿ ಪಾಸಾಗಿದ್ರೆ ಪೋಸ್ಟ್ ಆಫೀಸ್ನಲ್ಲಿದೆ ಬಂಪರ್ ಉದ್ಯೋಗ-ಲಿಖಿತ ಪರೀಕ್ಷೆ ಇಲ್ಲ
ವೇತನ:
ಭಾರತೀಯ ಮಸಾಲೆ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 25,000 ಸಂಬಳ ಕೊಡಲಾಗುತ್ತದೆ.
ಅನುಭವ:
ಅಭ್ಯರ್ಥಿಯು ಕೇಂದ್ರ/ ರಾಜ್ಯ ಸರ್ಕಾರದ ನಿವೃತ್ತ ನೌಕರರಾಗಿರಬೇಕು.
ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.
ಕಂಪ್ಯೂಟರ್ ಜ್ಞಾನ ಇರಬೇಕು. ಜೊತೆಗೆ MS ಆಫೀಸ್, ಓಪನ್ ಆಫೀಸ್, ಇ-ಮೇಲ್, ಇಂಟರ್ನೆಟ್ ಬಳಕೆ ಮಾಡುವುದು ಗೊತ್ತಿರಬೇಕು.
ಉದ್ಯೋಗದ ಸ್ಥಳ
ಪ್ರಾದೇಶಿಕ ಕಚೇರಿ- ಸಕಲೇಶಪುರ
ವಿಭಾಗೀಯ ಕಚೇರಿ- ಮಡಿಕೇರಿ
ಇದನ್ನೂ ಓದಿ: IISc ಬೆಂಗಳೂರಿನಲ್ಲಿ 76 ಹುದ್ದೆಗಳಿಗೆ ಅರ್ಜಿ ಆಹ್ವಾನ-69,000 ಸಂಬಳ, ಪದವೀಧರರು Apply ಮಾಡಿ
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸೆಲೆಕ್ಟ್ ಆದ ಅಭ್ಯರ್ಥಿಗಳನ್ನು 2 ವರ್ಷಗಳ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/12/2022
ಅರ್ಜಿ ಸಲ್ಲಿಸಲು ಕೊನೆಯ ದಿನ: 09/01/2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ