SJVN Recruitment 2022: ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ (Satluj Jal Vidyut Nigam Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 80 ಫೀಲ್ಡ್ ಎಂಜಿನಿಯರ್(Field Engineer), ಫೀಲ್ಡ್ ಆಫೀಸರ್(Field Officer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅರ್ಜಿ ಸಲ್ಲಿಸಲು ಜನವರಿ 10, 2023 ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್(Online) ಮೂಲಕ ಅರ್ಜಿ ಹಾಕಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ |
ಹುದ್ದೆ | ಫೀಲ್ಡ್ ಎಂಜಿನಿಯರ್, ಫೀಲ್ಡ್ ಆಫೀಸರ್ |
ಒಟ್ಟು ಹುದ್ದೆ | 80 |
ವೇತನ | ಮಾಸಿಕ ₹ 60,000 |
ಉದ್ಯೋಗದ ಸ್ಥಳ | ಭಾರತ |
ವಿದ್ಯಾರ್ಹತೆ:
ಫೀಲ್ಡ್ ಎಂಜಿನಿಯರ್- ಸಿವಿಲ್/ಮೆಕ್ಯಾನಿಕಲ್/ಪರಿಸರ/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ನಲ್ಲಿ ಬಿಇ/ಬಿ.ಟೆಕ್
ಫೀಲ್ಡ್ ಆಫೀಸರ್- ಸಿಎ/ICWA, CMA, ಎಂಬಿಎ, ಪದವಿ, ಸ್ನಾತಕೋತ್ತರ ಪದವಿ
ಇದನ್ನೂ ಓದಿ: Passport Office Recruitment 2023: ಡಿಗ್ರಿ ಆಗಿದ್ರೆ ಪಾಸ್ಪೋರ್ಟ್ ಸಂಸ್ಥೆಯಲ್ಲಿ ಕೆಲಸ ಮಾಡಬಹುದು- ಸಂಬಳ 2 ಲಕ್ಷದವರೆಗೆ
ವಯೋಮಿತಿ:
ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 10, 2023ಕ್ಕೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು-5 ವರ್ಷ
OBC(NCL) ಅಭ್ಯರ್ಥಿಗಳು- 3 ವರ್ಷ
PH (ಸಾಮಾನ್ಯ) ಅಭ್ಯರ್ಥಿಗಳು- 10 ವರ್ಷ
PH (OBC) ಅಭ್ಯರ್ಥಿಗಳು- 13 ವರ್ಷ
PH (SC/ST) ಅಭ್ಯರ್ಥಿಗಳು- 15 ವರ್ಷ
ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಸಾಮಾನ್ಯ/EWS & OBC ಅಭ್ಯರ್ಥಿಗಳು- 600 ರೂ.
ಅರ್ಜಿ ಸಲ್ಲಿಕೆ ವಿಧಾನ- ಆನ್ಲೈನ್
ಇದನ್ನೂ ಓದಿ: IISc ಬೆಂಗಳೂರಿನಲ್ಲಿ 76 ಹುದ್ದೆಗಳಿಗೆ ಅರ್ಜಿ ಆಹ್ವಾನ-69,000 ಸಂಬಳ, ಪದವೀಧರರು Apply ಮಾಡಿ
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಟೆಸ್ಟ್
ಲಿಖಿತ ಪರೀಕ್ಷೆ
ಗ್ರೂಪ್ ಡಿಸ್ಕಶನ್
ಸಂದರ್ಶನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 10/01/2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ