• Home
  • »
  • News
  • »
  • jobs
  • »
  • Job Alert: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ 56 ಮ್ಯಾನೇಜ್​ಮೆಂಟ್ ಟ್ರೇನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Job Alert: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ 56 ಮ್ಯಾನೇಜ್​ಮೆಂಟ್ ಟ್ರೇನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

SAIL

SAIL

ಮ್ಯಾನೇಜ್​ಮೆಂಟ್ ಟ್ರೇನಿ​ (ಅಡ್ಮಿನಿಸ್ಟ್ರೇಶನ್) ಹಾಗೂ ಮ್ಯಾನೇಜ್​ಮೆಂಟ್ ಟ್ರೇನಿ(ಟೆಕ್ನಿಕಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಆನ್​ಲೈನ್​ ಪರೀಕ್ಷೆ ನೀಡಲಾಗುತ್ತದೆ. ಆನ್​ಲೈನ್ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳನ್ನು ಶಾರ್ಟ್​ ಲಿಸ್ಟ್​ ಮಾಡಲಾಗುತ್ತದೆ.

ಮುಂದೆ ಓದಿ ...
  • Share this:

    SAIL Recruitment 2022: ಸ್ಟೀಲ್ ಅಥಾರಿಟಿ ಆಫ್​ ಇಂಡಿಯಾ ಲಿಮಿಟೆಡ್(Steel Authority of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 56 ಮ್ಯಾನೇಜ್​ಮೆಂಟ್​ ಟ್ರೇನಿ(Management Trainee) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ನವೆಂಬರ್ 28ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಡಿಸೆಂಬರ್ 18, 2022 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಸ್ಟೀಲ್ ಅಥಾರಿಟಿ ಆಫ್​ ಇಂಡಿಯಾ ಲಿಮಿಟೆಡ್
    ಹುದ್ದೆಮ್ಯಾನೇಜ್​ಮೆಂಟ್ ಟ್ರೇನಿ
    ಒಟ್ಟು ಹುದ್ದೆ56
    ವೇತನನಿಯಮಾನುಸಾರ
    ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ


    ಹುದ್ದೆಯ ಮಾಹಿತಿ:


    ಮ್ಯಾನೇಜ್​ಮೆಂಟ್ ಟ್ರೇನಿ(ಅಡ್ಮಿನಿಸ್ಟ್ರೇಶನ್)- 51
    ಮ್ಯಾನೇಜ್​ಮೆಂಟ್ ಟ್ರೇನಿ(ಟೆಕ್ನಿಕಲ್)- 5


    ಇದನ್ನೂ ಓದಿ: Jobs in Bengaluru: IIIT ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಪದವೀಧರರು Apply ಮಾಡಿ


    ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?


    ಮ್ಯಾನೇಜ್​ಮೆಂಟ್ ಟ್ರೇನಿ​ (ಅಡ್ಮಿನಿಸ್ಟ್ರೇಶನ್) ಹಾಗೂ ಮ್ಯಾನೇಜ್​ಮೆಂಟ್ ಟ್ರೇನಿ(ಟೆಕ್ನಿಕಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಆನ್​ಲೈನ್​ ಪರೀಕ್ಷೆ ನೀಡಲಾಗುತ್ತದೆ. ಆನ್​ಲೈನ್ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳನ್ನು ಶಾರ್ಟ್​ ಲಿಸ್ಟ್​ ಮಾಡಲಾಗುತ್ತದೆ.


    ಬಳಿಕ ಗ್ರೂಪ್​ ಡಿಸ್ಕಸನ್ ಹಾಗೂ ಸಂದರ್ಶನದಲ್ಲಿ ಶಾರ್ಟ್​ಲಿಸ್ಟ್​ ಮಾಡಿದ ಅಭ್ಯರ್ಥಿಗಳು ಪಾಲ್ಗೊಳ್ಳಬೇಕು. ಆನ್​ಲೈನ್ ಎಕ್ಸಾಂ, ಗ್ರೂಪ್​ ಡಿಸ್ಕಸನ್ ಹಾಗೂ ಸಂದರ್ಶನ- ಈ 3 ಮಾನದಂಡಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.


    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


    ಪ್ರಮುಖ ದಿನಾಂಕಗಳು:


    ಆನ್ಲೈನ್​ ರಿಜಿಸ್ಟ್ರೇಶನ್ ಆರಂಭ ದಿನಾಂಕ: 28/11/2022
    ಆನ್​ಲೈನ್​ ರಿಜಿಸ್ಟ್ರೇಶನ್ ಮುಗಿಯುವ ದಿನಾಂಕ: 18/12/2022

    Published by:Latha CG
    First published: